Karnataka news paper

ಅಂತಿಮ ಘಟ್ಟ ತಲುಪಿದ ಕಾಂಗ್ರೆಸ್ ಪವರ್ ಫೈಟ್, ಮುಂದಿನ 2 ದಿನ ಅತ್ಯಂತ ನಿರ್ಣಾಯಕ : ವಿಜಯೇಂದ್ರ


ಬೆಂಗಳೂರು : ಕಾಂಗ್ರೆಸ್ಸಿನಲ್ಲಿನ ಅಸಮಾಧಾನದ ಜ್ವಾಲೆ ಸದ್ಯದಲ್ಲೇ ಸ್ಪೋಟಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ವೇಳೆ, ವಿಜಯೇಂದ್ರ ತಮ್ಮ ಹಿಂದಿನ ಮಾತನ್ನು ಪುನರಾವರ್ತನೆ ಗೊಳಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ವಿಜಯೇಂದ್ರ, ಮುಂದಿನ ಕೆಲವು ದಿನಗಳು ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಹೆಜ್ಜೆಗಳಿಗೂ, ವಿಜಯೇಂದ್ರ ನೀಡಿದ ಹೇಳಿಕೆಯೂ ಒಂದಕ್ಕೊಂದು ತುಲನೆಯಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಡಿಸಿಎಂ ಬಿತ್ತುತ್ತಿರುವ ’ನಾನು ಹಿಂದೂ’ ಭಜನೆ : ಬಿಜೆಪಿ ನಾಯಕರ ಬಾಯಲ್ಲಿ ಡಿಕೆಶಿ ಜಪ, ಬಲೆಗೆ ಬೀಳುತ್ತಿದೆಯಾ ಕಮಲ ಪಡೆ?

ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು, ಇದಾದ ನಂತರ ಹಿಂದೂವಾಗಿ ಹುಟ್ಟಿದ್ದೇನೆ ಮತ್ತು ಹಿಂದೂವಾಗಿಯೇ ಸಾಯುತ್ತೇನೆ ಎನ್ನುವ ಹೇಳಿಕೆ, ಇದಾದ ನಂತರ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ, ಡಿ.ಕೆ.ಶಿವಕುಮಾರ್ ಸುತ್ತ, ಕಾಂಗ್ರೆಸ್ ಚರ್ಚೆಗಳು ಸುತ್ತುತ್ತಿವೆ.

ವಿಧಾನಸೌಧದ ಆವರಣದಲ್ಲಿ ಮಾತನಾಡುತ್ತಿದ್ದ ವಿಜಯೇಂದ್ರ, ” ನಾನು ಈ ವಿಚಾರವನ್ನು ಕೆಲವು ದಿನಗಳಿಂದ ಮುನ್ಸೂಚನೆ ಕೊಡುತ್ತಲೇ ಬರುತ್ತಿದ್ದೇನೆ. ಮುಂದಿನ ಎರಡು ದಿನಗಳು ಕಾಂಗ್ರೆಸ್ ಪಾಲಿಗೆ ಅತ್ಯಂತ ನಿರ್ಣಾಯಕ ಮತ್ತು ಮಹತ್ವದ್ದಾಗಿದೆ. ಮುಖ್ಯಮಂತ್ರಿ ಕುರ್ಚಿಯ ವಿಚಾರ ಕಾಂಗ್ರೆಸ್ಸಿನಲ್ಲಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

ಸಿಎಂ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಹಿರಿಯ ಕ್ಯಾಬಿನೆಟ್ ದರ್ಜೆಯ ಸಚಿವರುಗಳು ಸಾರ್ವಜನಿಕವಾಗಿಯೇ ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವು ಸಚಿವರು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕೆಂದು ಬಯಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

” ಇನ್ನಷ್ಟು ಸಚಿವರು, ಶಾಸಕರು ಡಿಕೆಶಿ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ಅಧಿಕಾರದ ದಾಹ ಕಾಂಗ್ರೆಸ್ಸಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಹೇಳಿಕೆ, ಕಾಂಗ್ರೆಸ್ಸಿನಲ್ಲಿನ ಪವರ್ ಪಾಲಿಟಿಕ್ಸ್ ಎತ್ತ ಸಾಗುತ್ತಿದೆ ಎನ್ನುವುದಕ್ಕೊಂದು ತಾಜಾ ಉದಾಹರಣೆಯಾಗಿದೆ ” ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಶಾಸಕರಿಗೆ ಕೊಡಲು ಉದ್ದೇಶಿಸಲಾಗಿರುವ ಕೆಲವೊಂದು ಸೌಲಭ್ಯಗಳನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ, ಇದರ ಅವಶ್ಯಕತೆ ಕೂಡಾ ಇರಲಿಲ್ಲ. ಮೊದಲೇ ಸರ್ಕಾರದಲ್ಲಿ ದುಡ್ಡಿಲ್ಲ, ಹಾಗಾಗಿ ಇದಕ್ಕೆಲ್ಲಾ ದುಡ್ಡು ಎಲ್ಲಿಂದ ಬರುತ್ತಿದೆ. ಮುಖ್ಯಮಂತ್ರಿಗಳ ನಿವಾಸ ನವೀಕರಣಕ್ಕೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ವಿಜಯೇಂದ್ರ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಧನ ಖಾತೆಯ ಸಚಿವರೇ ಹೇಳಿದಂತೆ, ಇಲಾಖೆಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ, ಸಾರಿಗೆ ಸಂಸ್ಥೆಗಳಿಗೆ ಇನ್ನೂ 7,500 ಕೋಟಿ ರೂಪಾಯಿ ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಹೊಸ ಸೌಲಭ್ಯಗಳನ್ನು ಸ್ಪೀಕರ್ ಯು.ಟಿ.ಖಾದರ್ ಅವರು ಕೊಡುವುದು ಬೇಕಾಗಿರಲಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಈ ವಿಚಾರದ ಬಗ್ಗೆ ನಾವು ಸರ್ಕಾರಕ್ಕೆ ಒತ್ತಡವನ್ನು ಹಾಕುತ್ತಲೇ ಇದ್ದೇವೆ. ಕೆಲವು ಗುತ್ತಿಗೆದಾರರು ಈಗಾಗಲೇ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಯು ಈ ರೀತಿ ಇರಬೇಕಾದರೆ, ಅನಾವಶ್ಯಕ ಖರ್ಚು ಮಾಡುವುದನ್ನು ನಿಲ್ಲಿಸಬೇಕು ಎಂದು ವಿಜಯೇಂದ್ರ, ಸರ್ಕಾರವನ್ನು ಒತ್ತಾಯಿಸಿದ್ದಾರೆ.



Read more

[wpas_products keywords=”deal of the day sale today offer all”]