ಆದರೆ, ಅದಾಗಿ ಕೆಲವು ದಿನಗಳಾದ ನಂತರ ಹಣ ನಿಮ್ಮ ಫಾಸ್ಟ್ ಟ್ಯಾಗ್ ಖಾತೆಗೆ ಜಮೆಯಾಗುತ್ತದೆ. ಬಾರದಿದ್ದರೆ ಅಷ್ಟೇ ನೀವು ಮತ್ತೆ ಕಸ್ಟಮರ್ ಕೇರ್ ಸಿಬ್ಬಂದಿಯ ಕೈಕಾಲು ಬೀಳಬೇಕು ಅಷ್ಟೇ…
ಶುಲ್ಕ ಕಡಿತ ತಪ್ಪಿಗೆ ಹೊಸ ಹೆಜ್ಜೆ
ಇನ್ನು ಮುಂದೆ ಇಂಥದ್ದಕ್ಕೆಲ್ಲಾ ಕಡಿವಾಣ ಬೀಳಲಿದೆ. ಏಕೆಂದರೆ, ರಾಷ್ಟ್ರದ ಎಲ್ಲಾ ಟೋಲ್ ಗಳ ಸುಗಮ ಕಾರ್ಯನಿರ್ವಹಣಗಾಗಿಯೇ ಕೇಂದ್ರದ ಸಾರಿಗೆ ಇಲಾಖೆ ಸ್ಥಾಪಿಸಿರುವ ಇಂಡಿಯನ್ ಹೈವೇ ಮ್ಯಾನೇಜ್ಮೆಂಟ್ ಕಮಿಟಿ (ಐಎಚ್ಎಂಸಿಎಲ್) ಇಂಥ ತಪ್ಪುಗಳು ಆಗದಿರುವಂತೆ, ಆ ಮೂಲಕ ಸಾರ್ವಜನಿಕರಿಗೆ ಸುಮ್ಮನೇ ಕಿರಿಕಿರಿ ಉಂಟಾಗುವುದನ್ನು ತಡೆಯಲು ಹೊಸ ಹೆಜ್ಜೆಯಿಟ್ಟಿದೆ. ಪ್ರತಿ ತಿಂಗಳು, ಏನಿಲ್ಲವೆಂದರೂ ತಪ್ಪು ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ 50 ದೂರುಗಳು ದಾಖಲಾಗುತ್ತಿವೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ.
ಟೋಲ್ ಸಿಬ್ಬಂದಿಯಿಂದ ಆಗುವ ಯಡವಟ್ಟುಗಳಿವು!
ಅಸಲಿಗೆ, ಇಂಥ ತಪ್ಪುಗಳು, ಟೋಲ್ ಸಿಬ್ಬಂದಿಯ ಅಚಾತುರ್ಯದಿಂದ ಆಗುತ್ತವೆ. ಮ್ಯಾನ್ಯುಯೆಲ್ ಆಗಿ ಕೆಲವು ವಾಹನಗಳು ಟೋಲ್ ಗಳಲ್ಲಿ ಹಣ ಕೊಟ್ಟು ಮುಂದೆ ಸಾಗುತ್ತವೆ. ಅಂಥ ಸಂದರ್ಭಗಳಲ್ಲಿ ವಾಹನಗಳ ಚಾಲಕರಿಂದ ಹಣ ಪಡೆಯುವ ಟೋಲ್ ಗಳ ಕೌಂಟರ್ ನಲ್ಲಿರುವ ಸಿಬ್ಬಂದಿ ವಾಹನಗಳ ಸಂಖ್ಯೆಯನ್ನು ಎಂಟ್ರಿ ಮಾಡಬೇಕಾದರೆ ತಪ್ಪು ಮಾಡಿದಾಗ ಯಾರದ್ದೋ ಶುಲ್ಕ ಯಾರಿಗೋ ಅನ್ವಯವಾಗಿ, ಅವರ ಫಾಸ್ಟ್ ಟ್ಯಾಗ್ ನಲ್ಲಿರುವ ಶುಲ್ಕ ಕಟ್ ಆಗುತ್ತದೆ. ಇಂಥ ತಪ್ಪುಗಳನ್ನು ತಡೆಯಲು ಐಎಚ್ಎಂಸಿಎಲ್ ವತಿಯಿಂದ ಕೆಲವು ಹೆಜ್ಜೆಗಳನ್ನು ಇಡಲಾಗಿದೆ.
ತಪ್ಪಾಗಿ ಕಟ್ ಶುಲ್ಕ ಮರಳಿ ಪಡೆಯಲು ಇರುವ ಮಾರ್ಗಸೂಚಿಯೇನು?
ಅನಗತ್ಯವಾಗಿ ಶುಲ್ಕ ಕಟ್ ಆದಾಗ ಏನು ಮಾಡಬೇಕು ಎಂಬ ಮಾರ್ಗಸೂಚಿಯನ್ನು ಐಎಚ್ಎಂಸಿಎಲ್ ತಿಳಿಸಿದೆ. ಹೀಗೆ, ತಪ್ಪಾಗಿ ಶುಲ್ಕ ಕಟ್ ಆದಾಗ, ಸಂಬಂಧಪಟ್ಟ ಫಾಸ್ಟ್ ಟ್ಯಾಗ್ ಕಸ್ಟಮರ್ ಗಳು, 1033 ನಂಬರಿಗೆ ಕರೆ ಮಾಡಬಹುದು. ಅಥವಾ falsededuction@ihmcl.com ಎಂಬ ಇಮೇಲ್ ವಿಳಾಸಕ್ಕೆ ತಪ್ಪಾಗಿ ಶುಲ್ಕ ಕಟ್ ಆಗಿರುವುದರ ಡಿಟೇಲ್ಸ್ ಕಳಿಸಬಹುದು. ಆಗ ಐಎಚ್ಎಂಸಿಎಲ್, ಇದರ ಬಗ್ಗೆ ತನಿಖೆ ಆರಂಭಿಸುತ್ತದೆ. ಒಂದು ವೇಳೆ, ತಪ್ಪಾಗಿ ಶುಲ್ಕ ಕಟ್ ಆಗಿರುವುದು ಸಾಬೀತಾದರೆ, ಕಸ್ಟಮರ್ ಗೆ ಆ ಶುಲ್ಕವನ್ನು ಮರಳಿ ತಲುಪಿಸಲಾಗುತ್ತದೆ. ಜೊತೆಗೆ, ತಪ್ಪು ಶುಲ್ಕ ಕಟ್ ಆಗಲು ಕಾರಣವಾದ ಟೋಲ್ ಕಂಪನಿಗೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಐಎಚ್ಎಂಸಿಎಲ್ ಪ್ರಕಟಣೆ ನೀಡಿದೆ.
Read more
[wpas_products keywords=”deal of the day sale today offer all”]