“ಪುಟಿನ್ ಬಗ್ಗೆ ಚಿಂತಿಸುವ ಸಮಯ ಕಡಿಮೆ ಮಾಡಿ, ವಲಸಿಗ ಅತ್ಯಾಚಾರ ಗ್ಯಾಂಗ್‌ಗಳು, ಡ್ರಗ್ ದೊರೆಗಳು ಮತ್ತು ಕೊಲೆಗಾರರು ನಮ್ಮ ದೇಶಕ್ಕೆ ಪ್ರವೇಶಿಸುವುದನ್ನು ತಡೆಯುವ ಕುರಿತು ನಾವು ಹೆಚ್ಚು ಚಿಂತಿಸಬೇಕು. ಯುರೋಪ್‌ಗೆ ಆಗಿರುವ ಗತಿ ಅಮೆರಿಕಕ್ಕೆ ಆಗಬಾರದು ಎಂದಾದರೆ ನಾವು ಈಗಿನಿಂದಲೇ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು. ಅಕ್ರಮ ವಲಸೆಯ ಪೆಡೆಂಭೂತವನ್ನು ಬೇರು ಸಮೇತ ಕಿತ್ತು ಹಾಕಬೇಕು..” ಎಂದು ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಕರೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಹೇಳಿಕೆ
ಟ್ರಂಪ್ ಅವರು ತಮ್ಮ ಅಧಿಕಾರದ ಮೊದಲ ತಿಂಗಳಲ್ಲಿ, ಅಕ್ರಮ ವಲಸಿಗರ ಸಂಖ್ಯೆಯನ್ನು ಐತಿಹಾಸಿಕವಾಗಿ ಕಡಿಮೆ ಮಟ್ಟಕ್ಕೆ ಇಳಿಸಿದ್ದಾಗಿ ಹೇಳಿದ್ದಾರೆ. “ನಮ್ಮ ದೇಶದ ಮೇಲಿನ ವಲಸೆ ಆಕ್ರಮಣ ಭಾಗಶಃ ಮುಗಿದಿದೆ. ಫೆಬ್ರವರಿ ತಿಂಗಳಲ್ಲಿ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸಂಖ್ಯೆಯ ಅಕ್ರಮ ವಲಸಿಗರು ನಮ್ಮ ದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ..” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
“ಯುಎಸ್-ಮೆಕ್ಸಿಕೋ ಗಡಿಯಲ್ಲಿ ಬಾರ್ಡರ್ ಪೆಟ್ರೋಲ್ 8,326 ಅಕ್ರಮ ವಲಸಿಗರನ್ನು ತಡೆಹಿಡಿದಿದೆ. ಈ ಮೊದಲು ಇವರ ಸಂಖ್ಯೆ ಲಕ್ಷಗಳಲ್ಲಿ ಇರುತ್ತಿತ್ತು. ಅಲ್ಲದೇ ಅಮೆರಿಕ ಪ್ರವೇಶಿಸಲು ಪ್ರಯತ್ನಿಸಿದವರೆಲ್ಲರನ್ನೂ ಹೊರಹಾಕಲಾಗಿದೆ. ಈ ಪೈಕಿ ಕೆಲವರನ್ನು ಅಮೆರಿಕದ ವಿರುದ್ಧದ ಅಪರಾಧಗಳಿಗಾಗಿ ವಿಚಾರಣೆಗೆ ಒಳಪಡಿಸಲಾಗಿದೆ..” ಎಂದು ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.
“ಅಮೆರಿಕದ ಗಡಿಗಳು ಎಲ್ಲಾ ಅಕ್ರಮ ವಲಸಿಗರಿಗೆ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಯುಎಸ್‌ಎಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುವ ಯಾರಾದರೂ ಸರಿ, ಗಮನಾರ್ಹವಾದ ಕ್ರಿಮಿನಲ್ ದಂಡ ಮತ್ತು ತಕ್ಷಣದ ಗಡಿಪಾರು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ..” ಎಂದು ಇದೇ ವೇಳೆ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಇನ್ನು ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಯನ್ನು ಬೆಂಬಲಿಸಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವಾನ್ಸ್, “ಅಕ್ರಮ ವಲಸೆಯು ಯುರೋಪ್ ಮತ್ತು ಅಮೆರಿಕ ಎದುರಿಸುತ್ತಿರುವ ಅತ್ಯಂತ ದೊಡ್ಡ ಬೆದರಿಕೆ..” ಎಂದು ಅಭಿಪ್ರಾಯಪಟ್ಟಿದ್ದಾರೆ.ಕಳೆದ ವಾರ ಮೇರಿಲ್ಯಾಂಡ್‌ನಲ್ಲಿ ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್ (CPAC)ನಲ್ಲಿ ಮಾತನಾಡಿರುವ ಅವರು, “ಯುರೋಪ್ ಗ್ರಹಿಸದ ಈ ಬೆದರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಗ್ರಹಿಸಿದೆ..” ಎಂದು ಹೇಳಿರುವುದು ಇದೀಗ ಜಾಗತಿಕವಾಗಿ ಗಮನ ಸೆಳೆದಿದೆ.
Read more
[wpas_products keywords=”deal of the day sale today offer all”]