Karnataka news paper

ಸಿದ್ದರಾಮಯ್ಯ ಕೈಯ್ಯಲ್ಲಿರುವ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ! ಕೋಡಿ ಶ್ರೀ ಸ್ಫೋಟಕ ಭವಿಷ್ಯ


ಗದಗ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದು, ಸಿದ್ದರಾಮಯ್ಯ ಅವರಲ್ಲಿರುವ ಮುಖ್ಯಮಂತ್ರಿ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ’ ಎಂದಿದ್ದಾರೆ.ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅಧಿಕಾರ ವಿಚಾರವಾಗಿ ಮಾತನಾಡುತ್ತಾ, ‘ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕಬುಕ್ಕರು ಹಾಲುಮತದ ಸಮಾಜದವರು. ಇವತ್ತು ಕೂಡಾ ವಿಜಯನಗರ ಸಾಮ್ರಾಜ್ಯದ ಹೆಸರು ಪ್ರಖ್ಯಾತಿ ಪಡೆದಿದೆ. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಮಾಜದ ಮೇಲೆ, ರಾಜ್ಯದ ಮೇಲೆ ಒಳ್ಳೆ ಕೆಲಸ ಮಾಡುವರಿಗೆ ಕೆಡುಕು ಆಗುವುದು ಕಷ್ಟ. ಹಾಲುಮತ ಸಮಾಜದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾರೆ. ಹೀಗಾಗಿ ಅವರಿಂದ ಅಧಿಕಾರ ಕಿತ್ತುಕೊಳ್ಳುವದು ಕಷ್ಟ. ಈ ಹಿಂದೆಯೂ ಸಿಎಂ ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದ್ದಾರೆ. ಯಾರಿಗೂ ಅಧಿಕಾರ ಕಿತ್ತುಕೊಳ್ಳಲು ಆಗಿಲ್ಲ. ಇವತ್ತಿನ ರಾಜಕೀಯ ಚಿಂತನೆ ಮಾಡುವುದಾದರೆ, ಸಿದ್ದರಾಮಯ್ಯ ಅವರಲ್ಲಿರುವ ಮುಖ್ಯಮಂತ್ರಿ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ’ ಎಂದು ಹೇಳಿದ್ದಾರೆ.

ಡಿಸಿಎಂ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ!

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಸ್ಥಾನ ಬದಲಾವಣೆ ಕುರಿತು, ಯುಗಾದಿ ನಂತರ ಹೇಳಬಹುದು. ಡಿ.ಕೆ.ಶಿವಕುಮಾರ್ ಒಕ್ಕಲಿಗರಾಗಿದ್ದು, ಅವರು ಅನ್ನದಾತರು. ಅವರನ್ನು ಇಡೀ ಜಗತ್ತು ಮರೆಯೋದಿಲ್ಲ. ಇದಕ್ಕೆ ಜಾತಿ ಲೇಪನ ಹಚ್ಚುವದು ಬೇಡ. ಡಿಸಿಎಂ ಬಗ್ಗೆ ದೂರಾಭಿಮಾನ ಇಲ್ಲ. ಅವರ ಬಗ್ಗೆ ಅಭಿಮಾನ ಇದೆ, ಮೊದಲಿನಿಂದ ಹೋರಾಟ ಮಾಡಿಕೊಂಡು ಬಂದಿದ್ದಾನೆ’ ಎಂದರು. ಇದೇ ವೇಳೆ ‘ಸದ್ಯದಲ್ಲಿಯೇ ರಾಷ್ಟ್ರ ರಾಜಕಾರಣದಲ್ಲಿ ಸುನಾಮಿ ಆಗಲಿದೆ. ಯುಗಾದಿ ನಂತರ ಸುಳಿವು ಸಿಗಲಿದೆ’ ಎಂದಿದ್ದಾರೆ.

ಪ್ರಕೃತಿ ದೋಷ ಇದೆ…

‘ಶುಭಯೋಗವಿದ್ದು, ರಾಜ್ಯದಲ್ಲಿ ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಪ್ರಕೃತಿ ದೋಷ ಹೆಚ್ಚು ಇದೆ. ಹೀಗಾಗಿ ಭೂಮಿ ಸುನಾಮಿ, ಗಾಳಿ ಸುನಾಮಿ ಕಳೆದ ವರ್ಷಕ್ಕಿಂತ ಹೆಚ್ಚು ಇದೆ. ಬಿಸಿಲು ಧಗೆ, ಹಿಮಪಾತ ಆಗುತ್ತದೆ’ ಎಂದು ಎಚ್ಚರಿಕೆ ನೀಡಿದರು.



Read more

[wpas_products keywords=”deal of the day sale today offer all”]