Karnataka news paper

ಮೆಟ್ರೋ ಟಿಕೆಟ್ ದರ ಹೆಚ್ಚಳದ ನಂತ್ರ ಪ್ರಯಾಣಿಕರಲ್ಲಿ ಇಳಿಮುಖ: ಮೆಟ್ರೋ ಓಡಾಟ ಬಿಟ್ಟ ಶೇ.13 ರಷ್ಟು ಬೆಂಗಳೂರಿಗರು! ಬಿಎಂಆರ್‌ಸಿಎಲ್‌ ಪ್ರತಿಕ್ರಿಯೆ ಏನು?


ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಡಿಮೆ ಆದಾಯದ ಮಧ್ಯಮ ಬಡ ವರ್ಗದ ಜನ, ಆದಾಯವೇ ಇಲ್ಲದ ವಿದ್ಯಾರ್ಥಿಗಳ ದಿನನಿತ್ಯದ ಓಡಾಟಕ್ಕೆ ನಮ್ಮ ಮೆಟ್ರೋ ದುಬಾರಿಯಾಗಿದ್ದು, ಮೆಟ್ರೋದಲ್ಲಿ ಸಂಚಾರವನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಮೆಟ್ರೋ ಸವಾರರ ಸಂಖ್ಯೆಯಲ್ಲಿ ಇಳಿಕೆ ಆಗಿದೆ.ಫೆಬ್ರವರಿ ಎರಡನೇ ವಾರದಲ್ಲಿ ದರ ಹೆಚ್ಚಳ ಮಾಡಲಾಗಿದೆ. ನಂತರ, ಪ್ರತಿದಿನ ಸರಾಸರಿ 13% ರಷ್ಟು ಪ್ರಯಾಣಿಕರು ಕಡಿಮೆಯಾಗಿದ್ದಾರೆ. ದರ ಹೆಚ್ಚಳಕ್ಕೆ ಮೊದಲು, ದಿನಕ್ಕೆ ಸರಾಸರಿ 8.2 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ದರ ಹೆಚ್ಚಳದ ನಂತರದ 20 ದಿನಗಳಲ್ಲಿ, ಈ ಸಂಖ್ಯೆ 7.1 ಲಕ್ಷಕ್ಕೆ ಇಳಿದಿದೆ.

ಆಟೋ- ಮೆಟ್ರೋ ಬೆಂಗಳೂರಲ್ಲಿ ಯಾವುದು ಬೆಸ್ಟ್‌ ? ಯಾವುದರಿಂದ ಹೆಚ್ಚು ಲಾಭ? ನೆಟ್ಟಿಗರ ಬಿಸಿಬಿಸಿ ಚರ್ಚೆ

ಫೆಬ್ರವರಿ ಮೆಟ್ರೋ ಪ್ರಯಾಣಿಕರೆಷ್ಟು?

ಈ ವರ್ಷದ ಜನವರಿಯಲ್ಲಿ 2.5 ಕೋಟಿ ಪ್ರಯಾಣಿಕರಿದ್ದರೆ, ಟಿಕೆಟ್ ಹೆಚ್ಚಾದ ಫೆಬ್ರವರಿಯಲ್ಲಿ 2 ಕೋಟಿಗೆ ಇಳಿದಿದೆ. ಇದರರ್ಥ ಫೆಬ್ರವರಿಯಲ್ಲಿ ತಿಂಗಳಿಗೆ 20% ರಷ್ಟು ಪ್ರಯಾಣಿಕರ ಇಳಿಕೆ ಕಂಡುಬಂದಿದೆ. ಬಿಎಂಆರ್ ಸಿಎಲ್ ಪ್ರಕಾರ, ಮೆಟ್ರೋದಲ್ಲಿ ಪ್ರಯಾಣಿಸುವವರ ಸರಾಸರಿ ದರ ಹೆಚ್ಚಳ 46% ಇದೆ. ಆದರೆ, ಕೆಲವು ಮಾರ್ಗಗಳಲ್ಲಿ 110% ರಷ್ಟು ಹೆಚ್ಚಳ ಆಗುತ್ತಿತ್ತು ಎಂದು ಪ್ರಯಾಣಿಕರು ದೂರಿದ್ದಾರೆ.

ದರ ಇಳಿಕೆ ದೂರದ ಪ್ರಯಾಣಕ್ಕೆ ಲಾಭವಾಗಿಲ್ಲ

ಜನರ ಒತ್ತಡಕ್ಕೆ ಮಣಿದ ಬಿಎಂಆರ್‌ಸಿಎಲ್ ಸರ್ಕಾರದ ಸೂಚನೆ ಮೇರೆಗೆ, ಕೆಲವು ಹಂತಗಳಲ್ಲಿ ದರಗಳನ್ನು ಪರಿಷ್ಕರಿಸಿತು. ಆದರೆ ದೂರದ ಪ್ರಯಾಣಿಕರಿಗೆ ಈ ಬದಲಾವಣೆ ಸಹಾಯಕವಾಗಿಲ್ಲ ಎಂಬ ದೂರುಗಳಿವೆ. ಪರಿಷ್ಕೃತ ದರಗಳ ಪ್ರಕಾರ, ಮೆಟ್ರೋದ ಕನಿಷ್ಠ ದರ 10 ರೂಪಾಯಿ ಮತ್ತು ಗರಿಷ್ಠ ದರ 90 ರೂಪಾಯಿ. ದರ ಪರಿಷ್ಕರಣೆಯ ನಂತರವೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಫೆಬ್ರವರಿ 23 ರಂದು ಕೇವಲ 4.9 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದರ ಹೆಚ್ಚಳದ ನಂತರ, ಫೆಬ್ರವರಿ 10 ಮತ್ತು 24 ರಂದು ಮಾತ್ರ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟಿದೆ. ದರ ಹೆಚ್ಚಳದಿಂದಾಗಿ, ಸಾವಿರಾರು ಪ್ರಯಾಣಿಕರು ಖಾಸಗಿ ವಾಹನಗಳು ಹಾಗೂ ಬಿಎಂಟಿಸಿ ಬಸ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಹೆಚ್ಚಿನ ಹೊರೆಯಾಗಿದೆ.

ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರತಿಕ್ರಿಯೆ ಏನು?

ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು BMRCL ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿದಾಗ, BMRCL ನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್, “ನಾವು ಅಂಕಿಅಂಶ ಮತ್ತು ಪ್ರಯಾಣಿಕರ ಸಂಖ್ಯೆಯ ಮೇಲಿನ ಪರಿಣಾಮವನ್ನು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ. ಮೆಟ್ರೋ ದರ ಹೆಚ್ಚಳವನ್ನು ಮರುಪರಿಶೀಲಿಸುತ್ತದೆಯೇ ಎಂಬ ಪ್ರಶ್ನೆಗೆ, ಅವರು ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದಾರೆ.

ಜನರ ಸಮಸ್ಯೆಗೆ ಸರ್ಕಾರಗಳು ಕಿವುಡಾಗಿದ್ದೇಕೆ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದರ ಹೆಚ್ಚಳದಿಂದ ತೊಂದರೆಗೊಳಗಾದವರ ಸಮಸ್ಯೆಗಳನ್ನು ಪರಿಹರಿಸಲು ಏಕೆ ಸಮಯ ತೆಗೆದುಕೊಳ್ಳುತ್ತಿವೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಪ್ರಯಾಣಿಕರಾದ ಸುಬ್ರಹ್ಮಣ್ಯ ಬಿ ಮಾತನಾಡಿ, “ಮೆಟ್ರೋದ ಪ್ರಮುಖ ಉದ್ದೇಶ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು. ಆದರೆ ಸರ್ಕಾರಗಳು ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಹೋಗುತ್ತಿವೆ” ಎಂದು ಹೇಳಿದ್ದಾರೆ.

ನಮ್ಮ ಮೆಟ್ರೋ ಹಳದಿ ಮಾರ್ಗ: ಚೀನಾದಿಂದ ಬಂದ ಹೊಸ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿ; ಉದ್ಘಾಟನೆ ಯಾವಾಗ?

ವಿದ್ಯಾರ್ಥಿ ಪಾಸ್ ಸಿಗುತ್ತದೆಯೇ?

ಇತರ ನಗರಗಳ ಮೆಟ್ರೋಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್‌ಗಳನ್ನು ನೀಡುತ್ತಿರುವಾಗ, ವಿದ್ಯಾರ್ಥಿಗಳಿಂದ ಇತರ ಪ್ರಯಾಣಿಕರಂತೆಯೇ ದರ ವಿಧಿಸುತ್ತಿದೆ. ವಿದ್ಯಾರ್ಥಿನಿ ಅನುಪಮಾ ಮಾತನಾಡಿ, “ವಿದ್ಯಾರ್ಥಿಗಳು ತಿಂಗಳಿಗೆ 3,500 ರೂಪಾಯಿಗಳನ್ನು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಪಾವತಿಸಲು ಸಾಧ್ಯವಿಲ್ಲ. ಇದು ಪೋಷಕರ ಮೇಲೆ ಹೊರೆಯಾಗಿದೆ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನ ಜನ ಆರಾಮದಾಯಿಕ ಹಾಗೂ ಅತ್ಯಂತ ವೇಗದ ಓಡಾಟಕ್ಕಾಗಿ ಮೆಟ್ರೋ ಬಳಸುತ್ತಿದ್ದರು. ಈಗ ಹೆಚ್ಚುನ ಶುಲ್ಕದ ಕಾರಣಕ್ಕಾಗಿ ಬೇರೆ ವಾಹನಗಳಲ್ಲಿ ಓಡಾಡುತ್ತಿದ್ದಾರೆ.



Read more

[wpas_products keywords=”deal of the day sale today offer all”]