ಸಾಮಾನ್ಯವಾಗಿ ಸಂಪ್ರದಾಯದಂತೆ ರಾಜ್ಯಪಾಲದ ಜೊತೆಗೆ ಸಿಎಂ ಬರುವುದು ರೂಢಿ. ಆದರೆ ಕಾಲು ನೋವಿನಿಂದಾಗಿ ರಾಜ್ಯಪಾಲರನ್ನು ಸ್ವಾಗತ ಮಾಡಿದ ಬಳಿಕ ಸಿಎಂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಆಗಮಿಸಿದರು. ಸಿಎಂ ಬಂದ ನಂತರ ಸ್ಪೀಕರ್ ಪೀಠದ ಕಡೆಗೆ ರಾಜ್ಯಪಾಲರು ತೆರಳಿದರು.
ಬಿಜೆಪಿ ಶಾಸಕರ ಆಕ್ಷೇಪ
ಈ ಮಧ್ಯೆ ಕೆಲವು ಬಿಜೆಪಿ ಶಾಸಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರಿಗೆ ಅವಮಾನ ಮಾಡಲಾಗ್ತಿದೆ ಎಂದು ಶಾಸಕ ಚನ್ನಬಸಪ್ಪ ( ಚೆನ್ನಿ) ಕೂಗಿದರು. ಆದರೆ ಈ ವೇಳೆ ಚೆನ್ನಿಗೆ ಹಿರಿಯ ಬಿಜೆಪಿ ಶಾಸಕರು ಬೆಂಬಲ ನೀಡದೆ ಸುಮ್ಮನಾದರು.
ಗದರಿದ ಕೈ ಶಾಸಕ
ಇನ್ನು ಸಿಎಂ ಸಿದ್ದರಾಮಯ್ಯ ಕಾಲು ನೀವು ಕಾರಣದಿಂದಾಗಿ ಸಂಪ್ರದಾಯ ಪಾಲನೆ ಮಾಡದೆ ಇದ್ದಿದ್ದಕ್ಕೆ ಆಕ್ಷೇಪ ಎತ್ತಿದ ಬಿಜೆಪಿ ಶಾಸಕ ಚೆನ್ನಿ ನಡೆಗೆ ಕಾಂಗ್ರೆಸ್ ಶಾಸಕ ಆಕ್ಷೇಪ ವ್ಯಕ್ತಪಡಿಸಿದರು. ಸುಮ್ಮನಿರಿ, ಸಿಎಂ ರಾಜ್ಯಪಾಲರನ್ನು ಸ್ವಾಗತ ಮಾಡಿ ಬರ್ತಿದ್ದಾರೆ ಎಂದು
ನಾಗರಾಜ್ ಯಾದವ್ ಅವರು ಗದರಿದರು.
ಗಾಲಿ ಖುರ್ಚಿಯಲ್ಲಿ ಬಂದ ಸಿಎಂ
ಸಿಎಂ ಸಿದ್ದರಾಮಯ್ಯ ಅವರು ಮಂಡಿ ಚಿಪ್ಪು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಗಾಲಿ ಕುರ್ಚಿಯಲ್ಲೇ ಅವರು ವಿಧಾನಸೌಧದಕ್ಕೆ ಆಗಮಿಸಿದ್ದರು. ಒಟ್ಟು ಆರು ವಾರಗಳ ವಿಶ್ರಾಂತಿಯನ್ನು ಪಡೆದುಕೊಳ್ಳಲು ಸಿದ್ದರಾಮಯ್ಯಗೆ ವೈದ್ಯರು ಸೂಚನೆ ನೀಡಿದ್ದಾರೆ. ಹಾಗಾಗಿ ನಡೆದಾಡದೆ ಗಾಲಿ ಕುರ್ಚಿ ಹಾಗೂ ವಾಕರ್ ಬಳಸಿಕೊಂಡು ಸಿದ್ದರಾಮಯ್ಯ ನಡೆದಾಡುತ್ತಿದ್ದಾರೆ.
ವಿಧಾಮಂಡಲ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು,
ರಾಜ್ಯದಲ್ಲಿ ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡ್ತಿವೆ. ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಒಟ್ಟು 39 ಪುಟಗಳ ಭಾಷಣದಲ್ಲಿ ಆರಂಭದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಸ್ವಾಗತಿಸಿದರು. ತಮ್ಮ ಭಾಷಣದ ಉದ್ದಕ್ಕೂ ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲದು ಲಿಖಿತ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
Read more
[wpas_products keywords=”deal of the day sale today offer all”]