ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, ಡಿಸೆಂಬರ್ ತಿಂಗಳ ಬಿಲ್ ಆಗಿದ್ದು, ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಇರೋ ತನಕ ಗೃಹಲಕ್ಷ್ಮೀ ಯೋಜನೆ ಇರುತ್ತೆ
ಇದು ಚುನಾವಣೆಗೋಸ್ಕರ ಮಾಡಿರುವ ಯೋಜನೆಗಳಲ್ಲ. ಚುನಾವಣೆ ಮುಗಿದ ಬಳಿಕವೂ ಯೋಜನೆಗಳು ಮುಂದುವರಿದಿವೆ. ಗೃಹಲಕ್ಷ್ಮೀ ಯೋಜನೆ ನಿರಂತರವಾಗಿ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಗೃಹಲಕ್ಷ್ಮೀ ಯೋಜನೆ ಇರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮೂರು ತಿಂಗಳ ಹಣ ಬಾಕಿ
ಗೃಹಲಕ್ಷ್ಮಿ ಯೋಜನೆಯ ಹಣ ಅಕ್ಟೋಬರ್ ತಿಂಗಳದ್ದು ಮಾತ್ರ ಬಿಡುಗಡೆಯಾಗಿದೆ. ನವೆಂಬರ್, ಡಿಸೆಂಬರ್, ಜನವರಿ ಹಣ ಬಿಡುಗಡೆಗೆ ಬಾಕಿ ಇದೆ. ಇನ್ನು ಫೆಬ್ರವರಿ ಕೂಡ ಮುಕ್ತಾಯವಾಗಿದ್ದು, ಒಟ್ಟು ನಾಲ್ಕು ತಿಂಗಳ ತಲಾ 8 ಸಾವಿರ ಹಣ ಬರಬೇಕಿದೆ. ಇನ್ನು ಯೋಜನೆಯ ಹಣ ಮೂರು ತಿಂಗಳಿಂದ ಬಾಕಿ ಇದ್ದ ಹಿನ್ನೆಲೆ ಫಲಾನುಭವಿಗಳು ಶೀಘ್ರ ಹಣ ಬಿಡುಗಡೆಗೆ ಒತ್ತಾಯಿಸಿದ್ದರು. ಇತ್ತ ವಿರೋಧ ಪಕ್ಷಗಳಾದ ಜೆಡಿಎಸ್ ಬಿಜೆಪಿ ಕೂಡ ಹೋರಾಟ ನಡೆಸಿದ್ದವು.
ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ
ಜೆಡಿಎಸ್ ವತಿಯಿಂದ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಆಗ್ರಹಿಸಿ “ಗ್ಯಾರಂಟಿ ದಿನಾಂಕ ಹೇಳಿ ಸಿದ್ರಾಮಣ್ಣ” ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪಕ್ಷದ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಗೃಹಲಕ್ಷ್ಮಿ ಹಣ ಬಿಡುಗಡೆಗೊಳಿಸಿ ನಾಳೆ (ಸೋಮವಾರ) ಬೆಳಗ್ಗೆ 11.30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್‌ನ ಎಲ್ಲಾ ನಾಯಕರು ಪ್ರತಿಭಟನೆ ಮಾಡಲಿದ್ದೇವೆ.ಅಲ್ಲೇ ಕ್ಯಾಲೆಂಡರ್ ತರ್ತೀವಿ ಗ್ಯಾರಂಟಿ ದಿನಾಂಕವನ್ನು ಘೋಷಣೆ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಹಿಸಿದರು. ಗೃಹಲಕ್ಷ್ಮಿ ಹಣ ಲೋಕಸಭಾ ಉಪಚುನಾವಣೆಯ ಸಂಧರ್ಭದಲ್ಲಿ ಬಿಡುಗಡೆ ಮಾಡಿದ್ರು. ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡೋದು ನಮ್ಮ ಕೆಲಸ. ಉಚಿತ ಹಣ, ವಿದ್ಯುತ್, ನೀರು ಕೊಡೋದಾಗಿ ಘೋಷಣೆ ಮಾಡಿದ್ರು ನಾಲ್ಕೈದು ತಿಂಗಳಿಂದ ಹಣ ಬಂದಿಲ್ಲ ಅಂತ ಜನ ಗೊಂದಲದಲ್ಲಿ ಇದ್ದಾರೆ ನಾಡಿನ ಜನತೆಗೆ ಉತ್ತರ ನೀಡಿ ಎಂದು ಅಗ್ರಹಿಸಿದರು.
Read more
[wpas_products keywords=”deal of the day sale today offer all”]