ನಂತರ ಮಾತನಾಡಿ, “ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿರುವಾಗ ಪಕ್ಷದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಡಿಕೆಶಿಯವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ಮತದಾರರಲ್ಲಿ ಸಂಚಲನ ಮೂಡಿಸಿದ್ದಾರೆ. ರಾಷ್ಟ್ರದ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಟ ಮಾಡಿದ ಧೀಮಂತ ನಾಯಕ ಎಂದು ಬಣ್ಣಿಸಿದರು.
ನಂತರ, ಡಿಕೆಶಿಯವರತ್ತ ತಿರುಗಿ, “ಪಕ್ಷಕ್ಕೆ ಒಳ್ಳೆಯ ನಾಯಕತ್ವ ಕೊಟ್ಟಿದ್ದೀರಿ, ಸಂಘಟನೆ ಮಾಡಿದ್ದೀರಿ. ಹೇಳಿಕೆಗಳು ಬರಬಹುದು ಹೋಗಬಹುದು. ನೀವು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರೂ ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ವಯಕ್ತಿಕ ತೃಪ್ತಿಗೆ ಟೀಕೆ ಮಾಡಬಹುದು. ಮುಖ್ಯಮಂತ್ರಿ ಹುದ್ದೆ ಯಾರು ಕೊಡುವ ವರ ಅಲ್ಲ. ಅದು ಅವರು ಸಂಪಾದನೆ ಮಾಡಿರುವ ಶಕ್ತಿ. ಸಂಪಾದನೆ ಮಾಡಿರುವ ಶಕ್ತಿಯೇ ಮುಖ್ಯಮಂತ್ರಿ ಪದವಿ” ಎಂದು ಹೇಳಿದರು.
“ಕಾರ್ಕಳದ ಪುಣ್ಯ ಭೂವಿಯಲ್ಲಿ ಆಡಿದ ಈ ಮಾತು ನೂರಕ್ಕೆ ನೂರು ಸತ್ಯ ಎಂದು ಹೇಳಿದ ಮೊಯ್ಲಿ, “ಆದರೆ ಡಿಕೆಶಿ ಅವರೇ ನೀವು ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ಕೊಡಬಾರದು. ಡಿಕೆಶಿ ಮುಖ್ಯಮಂತ್ರಿ ಆಗುವುದು ಸೆಟಲ್ಡ್ ಮ್ಯಾಟರ್. ಇದು ತೀರ್ಮಾನ ಆಗಿರುವ ವಿಷಯ. ಜನರ ಮನಸ್ಸಿನಲ್ಲಿ ತೀರ್ಮಾನವಾಗಿದೆ,ಇತಿಹಾಸ ತೀರ್ಮಾನ ಮಾಡಿದೆ. ಮ್ಯಾಟರ್ ಆಫ್ ಟೈಮ್ ಅಷ್ಟೇ. ಅವರ ಬೆಂಬಲಿಗರು ಕೂಡ ನಾವೇ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳಬೇಕಾಗಿಲ್ಲ’’ ಎಂದರು.
“ಕೋಟಿ ಕೋಟಿ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ ಅನ್ನೋದು ಶತಸಿದ್ಧ. ನೀವು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ದೇವರ ಭೂಮಿ. ಆದರೆ ಬಿಜೆಪಿ ದೇವರ ಭೂಮಿಯನ್ನು ಋಣಭೂಮಿ ಮಾಡಿದೆ’’ ಎಂದು ಹೇಳಿದರು.
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಡಿಕೆ ಶಿವಕುಮಾರ್ ಮುಂದುವರಿಯಬಾರದು (ಅವರು ಸಚಿವರಾಗಿರುವ ಕಾರಣದಿಂದ) ಎಂಬ ಕೂಗು ಸಹ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ, ಡಿಕೆ ಶಿವಕುಮಾರ್ ಅವರು ಈ ವರ್ಷಾಂತ್ಯದೊಳಗೆ ಸಿಎಂ ಗಾದಿಗೆ ಏರಲಿದ್ದಾರೆ ಎಂದು ಅವರ ಬೆಂಬಲಿಗರು ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರ ಬೆನ್ನಲ್ಲೇ, ಈಗ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೂಡ ಅದನ್ನೇ ಹೇಳಿರುವುದು ಗಮನಾರ್ಹವಾಗಿದೆ.
Read more
[wpas_products keywords=”deal of the day sale today offer all”]