Karnataka news paper

Fact Check: ಟ್ರಂಪ್ ಮತ್ತು ಝೆಲೆನ್ಸ್ಕಿ ವೈಟ್‌ಹೌಸ್‌ನಲ್ಲಿ ಕೈ ಕೈ ಮಿಲಾಯಿಸಿ ಜಗಳವಾಡಿರುವ ವಿಡಿಯೋ ವೈರಲ್‌! ಸತ್ಯವೇನು?


ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ನಡುವೆ ವೈಟ್ ಹೌಸ್‌ನಲ್ಲಿ ಮಾತಿನ ಚಕಮಕಿ ನಡೆದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಉಕ್ರೇನ್-ರಷ್ಯಾ ಯುದ್ಧ ಮತ್ತು ಅಮೆರಿಕದ ಸೇನಾ ನೆರವು ಕುರಿತಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಇಬ್ಬರು ನಾಯಕರ ನಡುವೆ ವಾಗ್ವಾದ ಉಂಟಾಗಿತ್ತು. ಇಬ್ಬರೂ ಒಬ್ಬರ ಮೇಲೆ ಒಬ್ಬರು ಕೈಕೈ ಮಿಲಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಆದರೆ, ಈ ವಿಡಿಯೋ ನಕಲಿ ಹಾಗೂ ಎಐ ಬಳಸಿ ಸೃಷ್ಟಿಲಾಗಿದೆ ಎಂದು ಸಜಗ್‌ ತನಿಖೆಯಲ್ಲಿ ದೃಢವಾಗಿದೆ.

Meme×100 ಮತ್ತು Anonymous ಎಂಬ ಎಕ್ಸ್‌ ( ಟ್ವಿಟ್ಟರ್ ) ಖಾತೆಗಳಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೆಲೆನ್‌ಸ್ಕಿ – ಟ್ರಂಪ್ಹಠಾತ್ತಾಗಿ ಜಗಳವಾಡುತ್ತಿರುವಂತೆ ತೋರಿಸಲಾಗಿದೆ.

ಸತ್ಯಾಸತ್ಯತೆ ಏನು?

ವೈರಲ್ ಆಗುತ್ತಿರುವ ವಿಡಿಯೋವನ್ನು ಸಜಗ್‌ ತಂಡ ತನಿಖೆ ನಡೆಸಿತು. ಸೂಕ್ಷ್ಮವಾಗಿ ಗಮನಿಸಿದರೆ ಜಗಳ ಆರಂಭವಾಗುತ್ತಿದ್ದಂತೆ ಟ್ರಂಪ್ ಅವರ ಮುಖ ಬದಲಾಗುತ್ತಿರುವುದು ಕಂಡುಬರುತ್ತದೆ. ಆದ್ದರಿಂದ, ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿರಬಹುದು ಎಂಬ ಅನುಮಾನ ಮೂಡಿತು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಅಲ್ಲಿ ಎನ್‌ಡಿಟಿವಿ ಹಿರಿಯ ಪತ್ರಕರ್ತ ಉಮಾಶಂಕರ್ ಸಿಂಗ್ ಅವರ ಟ್ವೀಟ್ ಸಿಕ್ಕಿತು. ವೈಟ್ ಹೌಸ್‌ನಲ್ಲಿ ಜೆಲೆನ್‌ಸ್ಕಿ ಮತ್ತು ಟ್ರಂಪ್ ನಡುವೆ ನಡೆದ 49 ನಿಮಿಷ 53 ಸೆಕೆಂಡುಗಳ ಸಂಪೂರ್ಣ ಸಂಭಾಷಣೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಟ್ರಂಪ್ ಮತ್ತು ಜೆಲೆನ್‌ಸ್ಕಿ ಸುಮಾರು 35 ನಿಮಿಷಗಳ ಕಾಲ ಸಾಮಾನ್ಯವಾಗಿ ಮಾತನಾಡುತ್ತಾರೆ. ಆದರೆ, ಕೊನೆಯ 10 ನಿಮಿಷಗಳಲ್ಲಿ ತೀವ್ರ ವಾಗ್ವಾದ ನಡೆಯುತ್ತದೆ. ಆದರೆ, ವೀಡಿಯೊದಲ್ಲಿ ಎಲ್ಲಿಯೂ ಕೈಕೈ ಮಿಲಾಯಿಸುವುದು, ಹೊಡೆದಾಟ ನಡೆದಿರುವುದು ಕಾಣಿಸುವುದಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಸ್ಪಷ್ಟವಾಗಿದೆ.

ಅಂತಿಮ ತೀರ್ಮಾನ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಮತ್ತು ಯೆಲೆನ್‌ಸ್ಕಿ ಅವರು ಕೈಕೈ ಮಿಲಾಯಿಸಿ ಜಗಳ ಮಾಡುವ ವಿಡಿಯೋ ಸುಳ್ಳು. ಸಜಗ್ ತಂಡದ ಪರಿಶೀಲನೆಯಲ್ಲಿ ಎಐ ಬಳಸಿ ತಿರುಚಿರುವುದು ಎಂದು ದೃಢವಾಗಿದೆ. ಇಬ್ಬರು ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದೆಯಾದರೂ ಕೈ ಕೈ ಮಿಲಾಯಿಸಿಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.



Read more

[wpas_products keywords=”deal of the day sale today offer all”]