ಸದನದಲ್ಲಿ ಹೋರಾಟಕ್ಕೆ ಕಮಲ ಪಡೆ ಸಜ್ಜು
ಇನ್ನು ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಹಲವು ಅಸ್ತ್ರಗಳನ್ನು ಬಳಕೆ ಮಾಡಲು ಕಮಲ ಪಡೆ ಸಿದ್ಧತೆ ಮಾಡಿಕೊಂಡಿದೆ. ಆಂತಕ ಭಿನ್ನಾಭಿಪ್ರಾಯಗಳ ನಡುವೆಯೂ ಸದನದಲ್ಲಿ ಸದ್ದು ಮಾಡಲು ಬಿಜೆಪಿ ನಿರ್ಧಾರ ಮಾಡಿದೆ.
ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಆಗುತ್ತಿರುವ ವಿಳಂಬ, ಕೆಪಿಎಸ್‌ಸಿ ಲೋಪ, ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಪ್ರಯತ್ನದ ಆರೋಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರದ ವೈಫಲ್ಯ, ಅನುದಾನ ತಾರತಮ್ಯ, ಅಭಿವೃದ್ದಿಯಲ್ಲಿ ಹಿನ್ನಡೆ, ಬೆಂಗಳೂರಿನಲ್ಲಿ ಟ್ರಾಫಿಕ್ ಹಾಗೂ ರಸ್ತೆ ಸಮಸ್ಯೆಗಳು ಪಕ್ಷಗಳ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಾಗಿವೆ.
ಇಷ್ಟೇ ಅಲ್ಲದೆ, ಸಚಿವರುಗಳ ವಿರುದ್ಧ ಭ್ರಷ್ಟಾಚಾರ ಆರೋಪ, ಗುತ್ತಿಗೆದಾರರಿಂದ ದೂರು, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸೆತ್ತು ಬಡವರ ಆತ್ಮಹತ್ಯೆ ಹಾಗೂ ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ಉಭಯ ಸದನದಲ್ಲೂ ಪ್ರಸ್ತಾಪ ಮಾಡಲು ಬಿಜೆಪಿ ನಿರ್ಧಾರ ಮಾಡಲಿದೆ.
ಒಗ್ಗಟ್ಟಿನ ಹೋರಾಟಕ್ಕೆ ಪ್ಲ್ಯಾನ್
ರಾಜ್ಯದಲ್ಲಿ ಮೈತ್ರಿಯಾಗಿರುವ ಬಿಜೆಪಿ ಮತ್ತು ಜೆಡಿಎಸ್ ಈ ಬಾರಿ ಒಗ್ಗಟ್ಟಿನ ಹೋರಾಟಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳ ಪ್ರಮುಖರು ಸಭೆ ನಡೆಸಿ ಸದನದಲ್ಲಿ ನಡೆಸಬೇಕಾದ ಚರ್ಚೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವಿನ ಒಗ್ಗಟ್ಟು ಸದನದಲ್ಲಿ ಪ್ರದರ್ಶನ ಆಗಿರಲಿಲ್ಲ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಇದಕ್ಕೆ ಅವಕಾಶ ಕೊಡದ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಿದೆ.
ಪ್ರತಿತಂತ್ರಕ್ಕೆ ಸರ್ಕಾರ ಪ್ಲ್ಯಾನ್
ಇನ್ನು ವಿರೋಧ ಪಕ್ಷಗಳ ಒಗ್ಗಟ್ಟು ಹಾಗೂ ತಂತ್ರಕ್ಕೆ ಆಡಳಿತ ಪಕ್ಷವೂ ಪ್ರತಿತಂತ್ರ ಹೂಡಿದೆ. ಸದನದಲ್ಲಿ ಮಾಡಲಿರುವ ಆರೋಪಕ್ಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲು ಸಿದ್ದತೆ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಇನ್ನು ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸಂಜೆ 6 ಗಂಟೆಗೆ ಸಿಎಲ್‌ಪಿ ಸಭೆ ನಡೆಯಲಿದೆ.
Read more
[wpas_products keywords=”deal of the day sale today offer all”]