”ನನ್ನ ಪುತ್ರಿ ಮತ್ತು ಆಕೆಯ ಗೆಳತಿಯರು ಕೊಥಾಲಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂತ ಮುಕ್ತಾಯಿ ಯಾತ್ರೆಗೆಂದು ಶುಕ್ರವಾರ ತೆರಳಿದ್ದರು. ಅವರ ರಕ್ಷಣೆಗೆ ಮೂವರು ಸಿಬ್ಬಂದಿಯೂ ಇದ್ದರು. ಆದರೆ ಪುಂಡರ ಗುಂಪು ನನ್ನ ಮಗಳು ಹಾಗೂ ಗೆಳೆತಿಯರನ್ನು ಹಿಂಬಾಲಿಸಿ ಅವರನ್ನು ತಳ್ಳಾಡಿ ಫೋಟೊ ತೆಗೆದು ವಿಡಿಯೊ ಮಾಡಿ ಕಿರುಕುಳ ನೀಡಿದೆ. ಅವರ ಜತೆಗಿದ್ದ ಸಿಬ್ಬಂದಿ ಜತೆಗೂ ಪುಂಡರು ಅನುಚಿತವಾಗಿ ವರ್ತಿಸಿದ್ದಾರೆ,” ಎಂದು ಸಚಿವರು ಹೇಳಿದ್ದಾರೆ.
ಸಿಎಂ ಫಡ್ನವಿಸ್ ಭರವಸೆ
”ಆರೋಪಿಗಳು ರಾಜಕೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದಾರೆ. ಆದರೆ ಯಾರಾದರೂ ಸರಿ ಬಿಡುವುದಿಲ್ಲ,” ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭರವಸೆ ನೀಡಿದ್ದಾರೆ. ಈಗಾಗಲೇ ಪ್ರಕರಣದಲ್ಲಿಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್, ರಾಜ್ಯದಲ್ಲಿಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದೆ.
ಫೆಬ್ರವರಿ 28 ರಂದು ಈ ಘಟನೆ ನಡೆದಿದೆ. ಪೊಲೀಸ್ ಮಾಹಿತಿ ಪ್ರಕಾರ ಸಂಜೆ 8-45 ರ ಸುಮಾರಿಗೆ ಈ ಘಟನೆ ನಡೆದಿದೆ. ಶಿವರಾತ್ರಿ ಪ್ರಯುಕ್ತ ನಡೆಯುತ್ತಿದ್ದ ಯಾತ್ರೆಯಲ್ಲಿ, ಸೆಕ್ಯುರಿಟಿ ಸಿಬ್ಬಂದಿಗಳ ಜೊತೆ ಇದ್ದಾಗ ಯುವಕರ ಗುಂಪು ಅಟ್ಯಾಕ್ ಮಾಡಿದೆ.
ಆರೋಪಿಗಳನ್ನು ಕಿರಣ್ ಮಾಲಿ, ಅನುಜ್ ಪಾಟೀಲ್, ಅನಿಕೇತ್ ಬೋಯ್, ಪೀಯುಷ್ ಮೋರ್, ಸಹಮ್ ಕೋಲಿ, ಸಚಿನ್ ಪಲ್ವಿ ಎಂದು ಗುರುತಿಸಲಾಗಿದೆ. ಈ ಪುಂಡರು ಯುವತಿಯರ ಫೋಟೋ, ವಿಡಿಯೋ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ ವೇಳೆ, ಸಚಿವರ ಸೆಕ್ಯುರಿಟಿ ಸಿಬ್ಬಂದಿಗಳು ತಡೆಯಲು ಯತ್ನಿಸಿದಾಗ ಅವರ ಮೇಲೂ ಹಲ್ಲೆಯಾಗಿದೆ.
ಘಟನೆ ಬಗ್ಗೆ ಸಚಿವೆ ಹೇಳಿದ್ದೇನು?
ಬಿಜೆಪಿ ಮುಖಂಡೆ ಹಾಗೂ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರು ಮಾತನಾಡಿ, ನಾನು ಗುಜರಾತ್ ನಲ್ಲಿ ಇದ್ದೆ. ಈ ವೇಳೆ ಮಗಳು ಫೋನ್ ಮಾಡಿ ಯಾತ್ರೆಗೆ ಹೋಗಲು ಅನುಮತೊ ಕೇಳಿದ್ದಾಳೆ. ಮೂವರು ಸೆಕ್ಯುರಿಟಿ ಹಾಗೂ ಸಿಬ್ಬಂದಿಗಳನ್ನು ಜೊತೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದೆ. ಆದರೂ ಮಗಳು ಹಾಗೂ ಆಕೆಯ ಸ್ನೇಹಿತೆಯರನ್ನು ತಳ್ಳಾಡಿ ಫೋಟೋ,ವಿಡಿಯೋ ತೆಗೆದಿದ್ದಾರೆ. ಪುಂಡರು ರಕ್ಷಣಾ ಸಿಬ್ಬಂದಿ ಜೊತೆಯೂ ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಆಗ 30-40 ಜನ ಗುಂಪುಗೂಡಿದ್ದಾರೆ ಎಂದರು. ಇನ್ನು ಇದೇ ಗುಂಪು ಫೆ.24 ರಂದೂ ಸಹ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೆಟ್ಟದಾಗಿ ನಡೆದುಕೊಂಡಿರವ ಬಗ್ಗೆ ಮಗಳು ಹೇಳಿದ್ದಾಳೆ ಎಂದು ಸಚಿವೆ ರಕ್ಷಾ ಖಡ್ಸೆ ಮಾಧ್ಯಮಗಳಿಗೆ ಹೇಳಿದ್ದಾರೆ.
Read more
[wpas_products keywords=”deal of the day sale today offer all”]