ಮುಂಬರುವ ವರ್ಷದಲ್ಲಿ ರಾಜ್ಯಕ್ಕೆ ಉತ್ತಮ ಮಳೆ, ಬೆಳೆ ಮತ್ತು ಸುಭೀಕ್ಷೆ ಇರುತ್ತದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಜಾಗತಿಕವಾಗಿ ತೊಂದರೆಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದ್ದಾರೆ. ಭೂಕಂಪ, ಸುನಾಮಿಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಯುಗಾದಿ ನಂತರ ವಿವರವಾದ ಭವಿಷ್ಯ ನುಡಿಯುವುದಾಗಿ ಹೇಳಿದ್ದಾರೆ.
ಹಾಲುಮತ ಸಮಾಜದವರಿಂದ ಅಧಿಕಾರ ಬಿಡಿಸುವುದು ಅಷ್ಟು ಸುಲಭವಲ್ಲ!!
ಕೋಡಿಮಠದ ಸ್ವಾಮೀಜಿ, “ಸಿಎಂ ಸಿದ್ದರಾಮಯ್ಯ ಕುರ್ಚಿ ಸೇಫಾ, ಸಿಎಂ ಗದ್ದುಗೆಯಿಂದ ಇಳಿಸುವದು ಕಷ್ಟನಾ, ಸಿಎಂ ಸಿದ್ದರಾಮಯ್ಯ ತಾನಾಗೇ ಅಧಿಕಾರ ತ್ಯಜಿಸಬಹುದಾ ಎಂಬ ಬಗ್ಗೆ ಹೇಳಿದ್ದಾರೆ. ಹಾಲುಮತ ಸಮಾಜದ ಬಗ್ಗೆ ಮಾತನಾಡುತ್ತ, “ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವದಾರಾಧನೆ ಮಾಡುವ ಸಮಾಜ, ಹಾಲು ಕೆಟ್ಟರು ಹಾಲು ಸಮಾಜ ಕೆಡದು, ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ, ಸಿಎಂ ಕುರ್ಚಿಯಿಂದ ಬಿಡಿಸುವದು ಅಷ್ಟು ಸುಲಭವಲ್ಲ, ಸಿಎಂ ಸಿದ್ದರಾಮಯ್ಯ ಅವರು ಅವರಾಗೆ ಸಿಎಂ ಸ್ಥಾನ ಬಿಡಬೇಕು ಹೊರತು ನೀವು ಬಿಡಿಸಿಕೊಳ್ಳುವದು ಅಷ್ಟು ಸುಲಭವಲ್ಲ” ಎಂದಿದ್ದಾರೆ.
ಜಾಗತಿಕವಾಗಿ ಅಲ್ಲೋಲ ಕಲ್ಲೋಲ ಪರಿಸ್ಥಿತಿಯ ಮುನ್ಸೂಚನೆ
ಮುಂಬರುವ ವರ್ಷದ ಬಗ್ಗೆ, ಸ್ವಾಮೀಜಿ “ಯುಗಾದಿ ಇನ್ನೂ ಒಂದು ತಿಂಗಳು ತಡವಿದ್ದು ಹೇಳುವದು ಕಷ್ಟ, ನಮ್ಮ ದೃಷ್ಟಿಯಲ್ಲಿ ಬರುವ ಸಂವತ್ಸರದಲ್ಲಿ ರಾಜ್ಯಕ್ಕೆ ತೊಂದರೆ ತಾಪತ್ರೆವಿಲ್ಲ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಸುಭೀಕ್ಷತೆ ಇರುತ್ತದೆ, ನಾಡಿನಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ, ಯುಗಾದಿ ನಂತರ ಕರ್ನಾಟಕ ಬಗ್ಗೆ ಗೊತ್ತಾಗಲಿದೆ” ಎಂದು ಹೇಳಿದ್ದಾರೆ. ಜಾಗತಿಕ ಪರಿಸ್ಥಿತಿ ಕುರಿತು, “ಜಾಗತೀಕವಾಗಿ ಬಹಳ ಅಜಾಗರೂಕತೆ ಇದ್ದು ಬಹಳ ತೊಂದರೆ ಇದೆ, ಕಳೆದ ವರ್ಷಕ್ಕಿಂತಲೂ ಭೀಕರತೆ ಕಾಣುವ ಲಕ್ಷಣವಿದೆ, ಇತ್ತೀಚಿನ ದಿನಗಳಲ್ಲಿ ಭೂಕಂಪ ಹೆಚ್ಚಾಗುತ್ತಿವೆ, ಇದನ್ನು ಹೋದ ವರ್ಷ ನಾನು ಹೇಳಿದ್ದೆ, ಭೂಕಂಪ, ಜನರ ಸಾವು ನೋವು ಆಗುವುದು, ಕಟ್ಟಡ ಬಿಳುವದು ಮುಂದುವರೆಯಲಿದೆ, ಭೂ ಸುನಾಮಿ, ಜಲ ಸುನಾಮಿ, ವಾಯು ಸುನಾಮಿ ಕಾಣಿಸಿಕೊಳ್ಳಲಿವೆ, ಇಲ್ಲಿ ವರಗೆ ಜಲ ಸುನಾಮಿ ಆಗುತಿತ್ತು ಈ ಬಾರಿ ಭೂ ಸುನಾಮಿ ಇದೆ, ಜಲ ಸುನಾಮಿ ಹಾಗೂ ವಾಯು ಸುನಾಮಿ ಹೆಚ್ಚಾಗಲಿದೆ, ಬಾಹ್ಯ ಸುನಾಮಿ ಅಂದರೆ ಬಾಹ್ಯಾಕಾಶದಲ್ಲಿ ತೊಂದರೆ ಆಗಲಿದೆ ಅದು ಯುಗಾದಿ ನಂತರ ಹೇಳುತ್ತೇನೆ” ಎಂದು ವಿವರಿಸಿದ್ದಾರೆ.
Read more
[wpas_products keywords=”deal of the day sale today offer all”]