”ಕಾವೇರಿ ಹಾಗೂ ಕಬಿನಿ ಮೈಸೂರಿನ ಪ್ರಮುಖ ನೀರಿನ ಸಂಗ್ರಹ ಇರುವ ಎರಡು ಅಣೆಕಟ್ಟುಗಳು. ಪ್ರಸ್ತುತ ಕಾವೇರಿ ಜಲಾಶಯದಲ್ಲಿ 30 ಹಾಗೂ ಕಬಿನಿಯಲ್ಲಿ 14.2 ಟಿಎಂಸಿ ನೀರು ಲಭ್ಯವಿದೆ. ವ್ಯವಸಾಯ ಮತ್ತು ಕುಡಿಯುವ ನೀರಿಗೆ ಪೂರೈಕೆ ಮಾಡಿಯೂ ಮೇ ಅಂತ್ಯದ ವೇಳೆಗೆ 9 ಟಿಎಂಸಿ ಹೆಚ್ಚುವರಿ ನೀರು ಉಳಿಯಲಿದೆ,” ಎಂದು ಅಧಿಕಾರಿಗಳು ವಿವರಿಸಿದರು.
ಮಳೆ ಕೊರತೆ:
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ‘ಕಳೆದ ವರ್ಷ ವಾಡಿಕೆಗಿಂತ ಶೇ.15ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಆದರೆ, ಈ ವರ್ಷ ಜನವರಿಯಿಂದ ಫೆಬ್ರವರಿ ಅಂತ್ಯದವರೆಗೆ ವಾಡಿಕೆ ಪ್ರಕಾರ 7.2 ಮಿಮೀ ಮಳೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೂ 0.3 ಮಿಮೀ ಮಾತ್ರ ಮಳೆಯಾಗಿದ್ದು, – 96 ಮಳೆ ಕೊರತೆಯಾಗಿದೆ, ಎಂದು ಮಾಹಿತಿ ನೀಡಿದರು.
ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ”ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನೀರು ಪೂರೈಸಬೇಕು. ಮೇವು ಅಭಾವ ಆಗಬಾರದು,” ಎಂದು ತಿಳಿಸಿದರು.
ಡಿಸಿ ಸೂಚನೆ:
ಜಿಲ್ಲಾಧಿಕಾರಿ ಜಿ.ಲಕ್ಷ್ಮೇಕಾಂತರೆಡ್ಡಿ ಮಾತನಾಡಿ, ”ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಶಾಸಕರ ಸಮಿತಿಯಲ್ಲಿ ತೀರ್ಮಾನ ಮತ್ತು ಜಿಪಿಎಸ್ ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದರೆ ಬಿಲ್ ಪಾವತಿಗೆ ತೊಂದರೆಯಾಗುತ್ತದೆ,” ಎಂದರು. ಜಿಪಂ ಸಿಇಒ ಅಧಿಕಾರಿ ಉಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇತರರು ಹಾಜರಿದ್ದರು.
Read more
[wpas_products keywords=”deal of the day sale today offer all”]