12 ಸಾವಿರ ಮನೆಗೆ ಸಂಪರ್ಕ:
‘ಸದ್ಯ ರಾಮಕೃಷ್ಣ, ಹೂಟಗಳ್ಳಿ, ಕುವೆಂಪುನಗರ ದಟ್ಟಗಳ್ಳಿ ಸೇರಿದಂತೆ ಕೇವಲ ಒಂದೆರಡು ಬಡಾವಣೆಗಳಲ್ಲಿ 2000 ಮನೆಗಳಲ್ಲಿ ಸದ್ಯ ಸಿಎನ್‌ಜಿ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ. ವರ್ಷಾಂತ್ಯಕ್ಕೆ 12000 ಮನೆಗೆ ಸಂಪರ್ಕ ದೊರೆಯಲಿದೆ. ಮಾತ್ರವಲ್ಲದೇ ಈ ಮಾದರಿಯ ಗ್ಯಾಸ್ ಬಳಕೆ ಮಾಡಲಿ ಬಿಡಲು ನಾನಾ ಬಡಾವಣೆಗಳ 50 ಸಾವಿರ ಮನೆ ಮುಂದೆ ಗ್ಯಾಸ್ ಸರಬರಾಜು ಪೈಪ್‌ಲೈನ್ ಇರುವಂತೆ ಮಾಡಲಾಗುತ್ತಿದೆ,’’ ಎಂದು ಎಜಿ ಆ್ಯಂಡ್ ಪಿ ಪ್ರಥಮ್ ಸಂಸ್ಥೆ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ನಿತಿನ್ ಉಯಿಲ್‌ಗೋಳ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಬಗೆಹರಿದ ಗೊಂದಲ:
ಯೋಜನೆಯ ಆರಂಭದಲ್ಲಿ ಪೈಪ್‌ಲೈನ್ ಅಳವಡಿಸಲು ಬಳಕೆ ಮಾಡುವ ಜಾಗಕ್ಕೆ ಅನುಮತಿ ನೀಡಲು ಮೈಸೂರು ಮಹಾನಗರ ಪಾಲಿಕೆಯು ಪ್ರತಿ ಮೀಟರ್‌ಗೆ 1857 ರೂ. ಅನುಮತಿ ಶುಲ್ಕ ಹಾಗೂ 100 ಮೇಲ್ವಿಚಾರಣೆ ಶುಲ್ಕ ಒಳಗೊಂಡಂತೆ ಒಟ್ಟು 1957 ರೂ. ನಿಗದಿಗೊಳಿಸಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ ಯೋಜನೆ ಅನುಷ್ಠಾನಗೊಳಿಸುತ್ತಿರುವ ಎಜಿ ಆ್ಯಂಡ್ ಪ್ರಥಮ್ ಸಂಸ್ಥೆ ಪಾಲಿಕೆಗೆ 9.64 ಕೋಟಿ ರೂ. ಪಾವತಿಸಿದೆ. ಅದಾದ ಬಳಿಕ ಕಂಪನಿಯವರು ಕೇಂದ್ರದ ರಾಷ್ಟ್ರೀಯ ನೀತಿಯಂತೆ ಪ್ರತಿ ಕಿ.ಮೀ.ಗೆ 1 ರೂ. ಶುಲ್ಕ ನಿಗದಿಗೊಳಿಸುವಂತೆ ಮನವಿ ಮಾಡಿದ್ದರು. ಈ ಮನವಿಯಂತೆ ದರ ಪರಿಷ್ಕರಣೆ ಮಾಡಿ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತು.
ಇತರ ಇಂಧನಗಳಿಗಿಂತ ಸಿಎನ್‌ಜಿ ಕಡಿಮೆ ಬೆಲೆಗೆ ಸಿಗುತ್ತದೆ. ಇದರಲ್ಲಿ ಕಾರ್ಬನ್ ಎಮಿಷನ್ ಕಡಿಮೆಯಾಗಿದ್ದು, ಪರಿಸರ ಸ್ನೇಹಿಯಾಗಿದೆ. ಸಲ್ಫರ್ ಆಕ್ಸೈಡ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಇತರ ಇಂಧನಗಳ ಬದಲಿಗೆ ಇದನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಅಡುಗೆ ಅನಿಲಕ್ಕೂ ಇದು ಉಪಯುಕ್ತವಾಗಿದ್ದು, ನಾಗರಿಕರು ಇದಕ್ಕೆ ಮೊದಲ ಆದ್ಯತೆ ನೀಡಬೇಕು.
– ನಿತಿನ್ ಉಯಿಲ್‌ಗೋಳ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಎಜಿ ಆ್ಯಂಡ್ ಪಿ ಪ್ರಥಮ್ ಸಂಸ್ಥೆ.
ಪ್ರಮುಖಾಂಶ
- ಗ್ಯಾಸ್ ಸರಬರಾಜು ಮಾಡುವ ಮುಖ್ಯಪೈಪ್‌ಲೈನ್ ಕಾಮಗಾರಿ ಪೂರ್ಣ
- ಬಿಡದಿಯಿಂದ-ಮೈಸೂರುವರೆಗಿನ ಪೈಪ್‌ಲೈನ್ ಶೀಘ್ರದಲ್ಲೇ ಮುಕ್ತಾಯ
- ಕೈಗಾರಿಕೆಗಳಿಗೂ ಸಿಎನ್‌ಜಿ ಬಳಕೆ
- ಪರಿಸರ ಸ್ನೇಹಿ ಇಂಧನ
Read more
[wpas_products keywords=”deal of the day sale today offer all”]