Karnataka news paper

ಕಾವೇರಿ ಕಣಿವೆಯಲ್ಲಿ 203 ಪಕ್ಷಿ ಪ್ರಭೇದಗಳು ಪತ್ತೆ..! ಈ ಪೈಕಿ ವಲಸೆ ಹಕ್ಕಿಗಳೇ 53..!


ನಾಗರಾಜ್‌ ನವೀಮನೆ
ಮೈಸೂರು:
ಮೈಸೂರು ನೇಚರ್‌ ವತಿಯಿಂದ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ನಡೆದ ‘ವಿಂಟರ್‌ ಬರ್ಡ್‌ ಮಾನಿಟರಿಂಗ್‌ ಪ್ರೋಗ್ರಾಮ್‌’ನಡಿ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ನಡೆಸಿದ ಸರ್ವೆಯಲ್ಲಿ 203 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ. ಇದರಲ್ಲಿ 53 ಪಕ್ಷಿಗಳು ವಲಸೆ ಹಕ್ಕಿಗಳು ಎಂಬುದೇ ವಿಶೇಷ. ಜನವರಿ 26ರಿಂದ ಒಟ್ಟು 13 ದಿನದ ಮ್ಯಾಪಿಂಗ್‌ನಲ್ಲಿ 147 ಜಾಗದಲ್ಲಿ 20 ತಂಡಗಳ ಮೂಲಕ ಒಟ್ಟು 34,361 ಪಕ್ಷಿಗಳು ಗೋಚರಿಸಿವೆ.

mysuru

ಸರ್ವೆಯಲ್ಲಿ 73 ಪಕ್ಷಿ ವೀಕ್ಷಕರು ಭಾಗವಹಿಸಿದ್ದರು. ಹೊಸ ಪ್ರಭೇದದ ಒಂದು ಪಕ್ಷಿ ಹಾಗೂ ಅಪರೂಪದ ಮೂರು ಪಕ್ಷಿಗಳು ಕಾಣಿಸಿಕೊಂಡಿರುವುದು ಈ ಬಾರಿಯ ವಿಶೇಷ. ಕಳೆದ ವರ್ಷ 204 ಪ್ರಭೇದದ ಪಕ್ಷಿಗಳು ಕಾಣಿಸಿದ್ದವು.

ಕಾರವಾರ: ಕೋವಿಡ್‌ ನಂತರ ವಿದ್ಯಾರ್ಥಿಗಳ ಪಕ್ಷಿ ವೀಕ್ಷಣೆ ಕಾರ್ಯಾಗಾರಕ್ಕೆ ಮರು ಚಾಲನೆ
ಒಟ್ಟು 34,304 ಪಕ್ಷಿಗಳು ಪತ್ತೆಯಾಗಿದ್ದವು. ಅಮೆರಿಕದ ‘ಈ ಬರ್ಡ್‌ ಗ್ರೂಪ್‌’ ಎಂಬ ಆ್ಯಪ್‌ ಇದೆ. ಇಡೀ ಪ್ರಪಂಚದಲ್ಲಿ ಯಾರೇ ಪಕ್ಷಿಗಳನ್ನು ನೋಡಿದರೂ ಅದನ್ನು ಇಲ್ಲಿಅಪ್ಡೇಟ್‌ ಮಾಡಬೇಕು. 2014ರಲ್ಲಿ ಇದು ಭಾರತಕ್ಕೆ ಬಂತು. ಆಗ ಮೈಸೂರಿನ ಪಕ್ಷಿಗಳನ್ನು ಮೈಸೂರು ನೇಚರ್‌ ಮ್ಯಾಪಿಂಗ್‌ ಇಲ್ಲಿ ದಾಖಲಿಸಿತು. ಈ ಕೆಲಸ ಭಾರತದಲ್ಲೇ ಮೊದಲು ಎಂಬುದು ಹೆಗ್ಗಳಿಕೆ. ಇದಾದ ಬಳಿಕ ಕೇರಳದವರು ಇಡೀ ರಾಜ್ಯಕ್ಕೆ ಇದನ್ನು ಅಳವಡಿಸಿದರು.

mysuru

ಅಪರೂಪದ ಪಕ್ಷಿಗಳು ಪತ್ತೆ: ಈ ಬಾರಿ ಈಸ್ಟರ್ನ್‌ ಎಲ್ಲೋ ವ್ಯಾಟ್‌ ಟೇಲ್‌ (ಮೂಡಣ ಹಳದಿ ಶಿಪಿಲೆ) ಎಂಬ ಹೊಸ ಪಕ್ಷಿ ಮ್ಯಾಪಿಂಗ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಗ್ರೇ ನೆಕ್ಕಿಡು ಬಂಟಿಂಗ್‌ (ಬೂದುಗತ್ತಿನ ಕಾಳು ಗುಬ್ಬಿ), ಬಾಸ್ಸ್‌ ವೇಲೊ (ಕವಲುತೊಕೆ) ಅಪರೂಪದ ಹಕ್ಕಿಯಾಗಿದೆ. ಒಂದೇ ಜಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನಾರ್ದನ್‌ ಶೋವಲರ್‌ ಪಕ್ಷಿ ಲಿಂಗಾಂಬುಧಿ ಕೆರೆಯಲ್ಲಿ ಕಾಣಿಸಿಕೊಂಡಿರುವುದು ಗಣತಿಯಲ್ಲಿ ಗಮನಕ್ಕೆ ಬಂದಿದೆ.

mysuru

ಮೈಸೂರಿನ ರಾಯನಕೆರೆಯಲ್ಲಿ 94 ಪ್ರಭೇದದ ಪಕ್ಷಿಗಳು ಕಾಣಿಸಿಕೊಂಡಿವೆ. ಶ್ರೀರಂಗಪಟ್ಟಣದ ರಂಗನತಿಟ್ಟಿನಲ್ಲಿ 530 ಸ್ಪಾಟ್‌ ಬಿಲ್ಡ್ ಪೆಲಿಕಾನ್‌, 480 ಏಷಿಯನ್‌ ಓಪನ್‌ ಬಿಲ್ಸ್‌, 410 ಇಂಡಿಯನ್‌ ಕಾರ್ಮೊರೆಸ್ಸ್‌ ಕಾಣಿಸಿಕೊಂಡಿವೆ. ಚಾಮರಾಜನಗರದ ಯಳಂದೂರಿನ ಅಗರದಲ್ಲಿ 1,450, ಲಿಂಗಾಂಬುಧಿಯಲ್ಲಿ 926 ಪಕ್ಷಿಗಳು ಗೋಚರಿಸಿವೆ.

ವಿದೇಶಿ ಅತಿಥಿ ಪಕ್ಷಿಗಳ ಸಂಖ್ಯೆ ಕ್ಷೀಣ; ಪಕ್ಷಿಪ್ರೇಮಿಗಳಲ್ಲಿ ಆತಂಕ!
ನಂಜನಗೂಡಿನ ದೂರ, ಕೊಳ್ಳೇಗಾಲದ ಇರಸವಾಡಿಕೆರೆಯಲ್ಲೂ ಬೇರೆ ಬೇರೆ ಜಾತಿಯ ಪಕ್ಷಿಗಳು ಪತ್ತೆಯಾಗಿವೆ. ಹದಿನಾರು ಕೆರೆಯಲ್ಲಿ ಮಂಗೋಲಿಯನ್‌ನಿಂದ ಬಂದ 400 ಪಟ್ಟೆತಲೆ ಹೆಬ್ಬಾತು ಪಕ್ಷಿ ಕಾಣಿಸಿಕೊಂಡಿದೆ.

3 ದಶಕದಿಂದ ಸರ್ವೆ: ಪ್ರತಿ ವರ್ಷ ಭತ್ತದ ಕುಯ್ಲು ಆಗುವ ಮುನ್ನ ಜನವರಿ ಎರಡನೇ ಭಾನುವಾರ ಚಳಿಗಾಲದ ಪಕ್ಷಿಗಳ ಮ್ಯಾಪಿಂಗ್‌ ಪ್ರೋಗ್ರಾಂ ನಡೆಯುತ್ತಿತ್ತು. ಆದರೆ, ಈ ಬಾರಿ ವೀಕೆಂಡ್‌ ಕರ್ಫ್ಯೂ ಇದ್ದ ಕಾರಣದಿಂದ ಆ ದಿನ ಮ್ಯಾಪಿಂಗ್‌ ಆಗಲಿಲ್ಲ. ಹಾಗಾಗಿ ಈ ಬಾರಿ 13 ದಿನ ಮ್ಯಾಪಿಂಗ್‌ ನಡೆಯಿತು.

ಮೈಸೂರು ಅಮೆಚೂರ್‌ ನ್ಯಾಚುರಲಿಸ್ವ್‌ ಗುರುಪ್ರಸಾದ್‌ ಹಾಗೂ ಮ್ಯಾನ್‌ ಮನು ನೇತೃತ್ವದಲ್ಲಿ 1987ರಿಂದ ಪಕ್ಷಿಗಳ ಮ್ಯಾಪಿಂಗ್‌ ನಡೆಯುತ್ತಿತ್ತು. 2000 ಇಸವಿವರೆಗೆ ಈ ಕಾರ್ಯ ನಡೆಯಿತು. ನಂತರ ಮೈಸೂರು ನೇಚರ್‌ ಈ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದೆ. ಆಗೆಲ್ಲಾ 2-3 ತಿಂಗಳು ಮ್ಯಾಪಿಂಗ್‌ ನಡೆಯುತ್ತಿತ್ತು. ಒಂದು ಲಕ್ಷಕ್ಕೂ ಹೆಚ್ಚು ಪಕ್ಷಿಗಳು ಆಗ ಕಾಣಿಸುತ್ತಿದ್ದವು. ಒಂದೇ ಜಾಗದಲ್ಲಿ 15-20 ಸಾವಿರ ಪಕ್ಷಿಗಳು ಗೋಚರಿಸುತ್ತಿದ್ದವು. ಆದರೆ ಈ ಸಂಖ್ಯೆ ಈಗ ಸಂಪೂರ್ಣ ಕಡಿಮೆ ಆಗಿದೆ.

ಮೈಸೂರು ಮೃಗಾಲಯದ ಸಬ್‌ವೇ ಸೇವೆಗೆ ಸಿದ್ಧ..! ಗೋಡೆಗಳ ಮೇಲೂ ಪ್ರಾಣಿ, ಪಕ್ಷಿಗಳ ಲೋಕ..!



Read more

[wpas_products keywords=”deal of the day sale today offer all”]