ಮುಂಬೈ: ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ(69) ಅವರು ಮುಂಬೈನಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಬಾಲಿವುಡ್‌ನಲ್ಲಿ ‘ಡಿಸ್ಕೊ ಕಿಂಗ್’ ಎಂದೇ ಖ್ಯಾತರಾಗಿದ್ದ ಅವರು ಸಂಗೀತ ಸಂಯೋಜನೆಯೊಂದಿಗೆ ಗಾಯನದ ಕಾಯಕದಲ್ಲಿಯೂ ತೊಡಗಿದ್ದರು. ಬಪ್ಪಿ ಅವರು ಸಂಯೋಜನೆ ಮಾಡಿದ್ದ ಟ್ಯೂನ್‌ಗಳು ಬಾಲಿವುಡ್‌ನ ಸಂಗೀತವನ್ನೇ ಮರುವ್ಯಾಖ್ಯಾನಿಸಿದ್ದವು.
ಅವರು 2006ರಲ್ಲಿ ಹಿಂದಿಯ ರಿಯಾಲಿಟಿ ಶೋ ‘ಸರಿಗಮಪ’ದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.
ಯುವ ಸಂಗೀತಗಾರರಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಬಪ್ಪಿ ಮಾಡುತ್ತಿದ್ದರು. ರಿಯಾಲಿಟಿ ಶೋನಲ್ಲಿ ಸ್ಪಷ್ಟ ಅಭಿಪ್ರಾಯಗಳನ್ನು ನೀಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಬಪ್ಪಿ ರಿಯಾಲಿಟಿ ಶೋನಿಂದ ದೂರ ಉಳಿದಿದ್ದರು. ಆದರೆ, ಕಳೆದ ನವೆಂಬರ್‌ನಲ್ಲಿ ಪ್ರಸಾರವಾದ ‘ಸರಿಗಮಪ’ ಶೋನ ಸಂಚಿಕೆಯೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂಚಿಕೆಯ ಮೂಲಕ ಬಪ್ಪಿಯವರು ಕೊನೆಯದಾಗಿ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದು, ಇದು ಅಭಿಮಾನಿಗಳ ನೆನಪಿನಲ್ಲಿ ಸದಾ ಉಳಿಯಲಿದೆ.
Read More…Source link
[wpas_products keywords=”deal of the day party wear for men wedding shirt”]