Karnataka news paper

ಎಲ್‌ಐಸಿ: 21,500 ಕೋಟಿಗೂ ಅಧಿಕ ಕ್ಲೈಮ್ ಮಾಡದ ಹಣ: ನಿಮ್ಮ ಮೊತ್ತ ಪರಿಶೀಲನೆ ಹೇಗೆ?


Classroom

|

ಎಲ್‌ಐಸಿ ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಅನ್ನು ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಭಾನುವಾರ ಸಲ್ಲಿಸಿದೆ. ಡಿಆರ್‌ಎಚ್‌ಪಿ ಪ್ರಕಾರ ಎಲ್‌ಐಸಿಯಲ್ಲಿ ಸುಮಾರು 21,539 ಕೋಟಿ ರೂ. ಕ್ಲೈಮ್‌ ಮಾಡದ ಹಣವಿದೆ.

ಈ ಅಂಕಿಅಂಶಗಳು ಸೆಪ್ಟೆಂಬರ್ 2021ರದ್ದು ಆಗಿದೆ. ಮಿಂಟ್‌ನ ವರದಿಯ ಪ್ರಕಾರ, ಈ ಮೊತ್ತವು ಮಾರ್ಚ್ 2021 ರ ವೇಳೆಗೆ 18,495 ಕೋಟಿ ರೂ.ಗಳಷ್ಟಿತ್ತು ಮತ್ತು ಮಾರ್ಚ್ 2020 ರ ಹೊತ್ತಿಗೆ 16,052 ಕೋಟಿ ರೂ ಆಗಿದೆ. ಎಲ್‌ಐಸಿ ಐಪಿಒದಲ್ಲಿ ಸರ್ಕಾರವು ಎಲ್‌ಐಸಿಯಲ್ಲಿ ತನ್ನ ಶೇ 5 ರಷ್ಟು ಪಾಲನ್ನು ಮಾರಾಟ ಮಾಡಲಿದೆ. ಈ ನಡುವೆ ಮಿಂಟ್ ಪ್ರಕಾರ, ಕ್ಲೈಮ್ ಮಾಡದ ಮೊತ್ತವು ಕ್ಲೈಮ್ ಮಾಡದ ಮೊತ್ತದ ಮೇಲಿನ ಬಾಕಿ ಬಡ್ಡಿಯನ್ನು ಒಳಗೊಂಡಿರುತ್ತದೆ.

ಎಲ್‌ಐಸಿ ಐಪಿಒ: ಹೂಡಿಕೆ ಮಾಡುವ ಮುನ್ನ ಇದನ್ನು ಓದಿ

ಯಾವುದೇ ಕ್ಲೈಮ್ ಮಾಡದ ಮೊತ್ತವು ರೂ 1,000 ಕ್ಕಿಂತ ಹೆಚ್ಚಿದ್ದರೆ ಮಾಹಿತಿಯನ್ನು ನೀಡಲು ಭಾರತದ ಪ್ರತಿಯೊಬ್ಬ ವಿಮಾದಾರರು ಬಾಧ್ಯತೆ ಹೊಂದಿದ್ದಾರೆ ಎಂದು ವರದಿಯು ಸೇರಿಸಿದೆ. ಮಾಹಿತಿಯನ್ನು ಸುಲಭವಾಗಿ ಪಡೆಯಲು ವೆಬ್‌ಸೈಟ್‌ಗೆ ಭೇಟಿ ನೀಡಬಹಹದು ಎಂದು ಕೂಡಾ ವರದಿಯು ಹೇಳಿದೆ.

ಎಲ್‌ಐಸಿ: 21,500 ಕೋಟಿಗೂ ಅಧಿಕ ಕ್ಲೈಮ್ ಮಾಡದ ಹಣ: ನಿಮ್ಮ ಮೊತ್ತ ಪರಿಶೀಲನೆ ಹೇಗೆ?

ಐಆರ್‌ಡಿಎಐ ಕ್ಕಪತ್ರ ನಿರ್ವಹಣೆ ಮತ್ತು ಮೊತ್ತದ ಪಾವತಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಸಹ ಸೂಚಿಸುತ್ತದೆ. ಕ್ಲೈಮ್ ಮಾಡದ ಮೊತ್ತಗಳ ಬಗ್ಗೆ ಐಆರ್‌ಡಿಎಐ ಸುತ್ತೋಲೆಯ ಪ್ರಕಾರ, “ಎಲ್ಲಾ ವಿಮಾದಾರರು ಎಸ್‌ಸಿಡಬ್ಲ್ಯೂಎಫ್‌ಗೆ ಹಕ್ಕು ಪಡೆಯದ ಮೊತ್ತವನ್ನು ವರ್ಗಾಯಿಸಲು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ, ಬಜೆಟ್ ವಿಭಾಗ ನೀಡಿದ ಲೆಕ್ಕಪತ್ರ ಕಾರ್ಯವಿಧಾನಕ್ಕೆ ಬದ್ಧರಾಗಿರಬೇಕು.”

ನಿಮ್ಮ ಎಲ್‌ಐಸಿ ಕ್ಲೈಮ್‌ ಮಾಡದ ಮೊತ್ತವನ್ನು ಪರಿಶೀಲಿಸುವುದು ಹೇಗೆ?

* ಪಾಲಿಸಿದಾರರು ಮೊದಲು ಲಿಂಕ್‌ಗೆ ಭೇಟಿ ನೀಡಬೇಕು , https://licindia.in/Bottom-Links/Unclaimed-Policy-Dues
* ಎಲ್‌ಐಸಿ ಪಾಲಿಸಿ ಸಂಖ್ಯೆ ನಮೂದಿಸಿ
* ಎಲ್‌ಐಸಿ ಪಾಲಿಸಿದಾರರ ಹೆಸರು, ಹುಟ್ಟಿದ ದಿನಾಂಕ ಉಲ್ಲೇಖ ಮಾಡಿ
* ಪಾಲಿಸಿದಾರರ ಪ್ಯಾನ್‌ ಕಾರ್ಡ್ ವಿವರವನ್ನು ಕೂಡಾ ಭರ್ತಿ ಮಾಡಿ
* ‘Submit’ ಮೇಲೆ ಕ್ಲಿಕ್‌ ಮಾಡಿ
* ವಿವರಗಳು ಈಗ ನಿಮಗೆ ಲಭ್ಯವಾಗಲಿದೆ

ಎಲ್‌ಐಸಿ ಐಪಿಒ: ಪಾಲಿಸಿದಾರರಿಗೆ ಏನಿದೆ ಆಫರ್‌?, ಇಲ್ಲಿದೆ ಸಂಫೂರ್ಣ ಮಾಹಿತಿ

ಶೀಘ್ರವೇ ಎಲ್‌ಐಸಿ ಐಪಿಒ

ಬಹುನಿರೀಕ್ಷಿತ ಎಲ್‌ಐಸಿ ಐಪಿಒ ಶೀಘ್ರದಲ್ಲೇ ಆರಂಭ ಆಗುವ ಸಾಧ್ಯತೆ ಇದೆ. ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸರ್ಕಾರವು ಇತ್ತೀಚೆಗೆ ಕರಡು ಪತ್ರಗಳನ್ನು ಸಲ್ಲಿಸಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ (ಡಿಐಪಿಎಎಂ) ತುಹಿನ್ ಕಾಂತಾ ಪಾಂಡೆ ಭಾನುವಾರ ಸಂಜೆ ಈ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

ಎಲ್‌ಐಸಿ ಐಪಿಒ ಭಾರತದ ಅತಿದೊಡ್ಡ IPO ಆಗಿದ್ದು, ಮಾರ್ಚ್ 2022 ರ ಎರಡನೇ ವಾರದಲ್ಲಿ ಸಾರ್ವಜನಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಎಲ್‌ಐಸಿಯು ಕೂಡಾ ಖಾಸಗೀಕರಣದತ್ತ ಮುಖ ಮಾಡಲಿದೆ. ಸೆಬಿಗೆ ಕರಡು ಪತ್ರಗಳನ್ನು ಸಲ್ಲಿಕೆ ಮಾಡುವ ಮೊದಲು ಭಾರತ ಸರ್ಕಾರವು ಮುಂಬರುವ ಹಣಕಾಸು ವರ್ಷಕ್ಕೆ 65,000 ಕೋಟಿ ರೂಪಾಯಿಗಳ ಹೂಡಿಕೆಯ ಗುರಿಯನ್ನು ಬಜೆಟ್ 2022 ರಲ್ಲಿ ನಿಗದಿಪಡಿಸಿದೆ. ಐಪಿಒ ಬೆಲೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದಾಗ್ಯೂ, ಭಾರತವು ಇದುವರೆಗೆ ಕಂಡಿರುವ ಅತಿ ದೊಡ್ಡ ಐಪಿಒ ಇದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವರದಿಗಳ ಪ್ರಕಾರ ಸರ್ಕಾರವು ಶೇಕಡ 5ರಷ್ಟು ಹಣವನ್ನು ಹೂಡಿಕೆ ಮಾಡಲಿದೆ. ಅಂದರೆ ಸರ್ಕಾರವು 75,000 ಕೋಟಿ ರೂ ಮೌಲ್ಯದ ಎಲ್‌ಐಸಿ ಐಪಿಒ ನಡೆಸಲಿದೆ.

English summary

LIC Has More Than Rs 21,500 Crore Unclaimed Funds: How Can You Check Your Amount?

LIC Has More Than Rs 21,500 Crore Unclaimed Funds: How Can You Check Your Amount?. Here’s Details.

Story first published: Thursday, February 17, 2022, 16:10 [IST]



Read more…

[wpas_products keywords=”deal of the day”]