ಬೆಂಗಳೂರು: ಕಾಂಗ್ರೆಸ್ ರಾಜಕೀಯಕ್ಕಾಗಿ ತ್ರಿವರ್ಣ ಧ್ವಜ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ ಎಂದು ಬಿಜೆಪಿ ಆರೋಪಿಸಿದೆ.
ತ್ರಿವರ್ಣ ಧ್ವಜ ವಿಷಯವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ತನ್ನದೇ ಆದ ಸ್ಥಾನವಿದೆ. ಆದರೆ, ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತು ಸದನದ ಗೌರವವನ್ನು ಹಾಳು ಮಾಡಿದೆ. ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘ಕಾಂಗ್ರೆಸ್ಸಿಗರೇ, ಮತದಾರರು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದು ಜನರ ಸಂಕಷ್ಟಗಳಿಗೆ ಧ್ವನಿಯಾಗಿ, ಸಮಸ್ಯೆ ಬಗೆಹರಿಸಿ ಎಂದೇ ಹೊರತು ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವುದಕ್ಕೆ ಅಲ್ಲ. ಜನರ ತೆರಿಗೆ ಹಣದಲ್ಲಿ ನಡೆಸುವ ಕಲಾಪವನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿರುವುದು ವಿಷಾದನೀಯ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ್ದ ಹೇಳಿಕೆ ಎರಡು ದಿನಗಳಿಂದ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್– ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಓದಿ… ಸಂವಿಧಾನ, ತ್ರಿವರ್ಣ ಧ್ವಜವನ್ನು ಬಿಜೆಪಿ ಸದಾ ಅವಮಾನಿಸಿಕೊಂಡೇ ಬಂದಿದೆ: ಕಾಂಗ್ರೆಸ್
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ತನ್ನದೇ ಆದ ಸ್ಥಾನವಿದೆ.
ಆದರೆ ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತು ಸದನದ ಗೌರವವನ್ನು ಹಾಳು ಮಾಡಿದೆ.
ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ.
ಇದು ಕ್ಷಮಿಸಲನರ್ಹ.#ದೇಶದ್ರೋಹಿಕಾಂಗ್ರೆಸ್
— BJP Karnataka (@BJP4Karnataka) February 17, 2022
ಕಾಂಗ್ರೆಸ್ಸಿಗರೇ, ಮತದಾರರು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದು ಜನರ ಸಂಕಷ್ಟಗಳಿಗೆ ಧ್ವನಿಯಾಗಿ, ಸಮಸ್ಯೆ ಬಗೆಹರಿಸಿ ಎಂದು, ತ್ರಿವರ್ಣಕ್ಕೆ ಅವಮಾನ ಮಾಡಲು ಅಲ್ಲ.
ಜನರ ತೆರಿಗೆ ಹಣದಲ್ಲಿ ನಡೆಸುವ ಕಲಾಪವನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿರುವುದು ವಿಷಾದನೀಯ.#ದೇಶದ್ರೋಹಿಕಾಂಗ್ರೆಸ್
— BJP Karnataka (@BJP4Karnataka) February 17, 2022
ಓದಿ… ಬಿಜೆಪಿಯನ್ನು ಟೀಕಿಸುತ್ತಿರುವ ಕೆಸಿಆರ್‌ಗೆ ಪ್ರಧಾನಿ ಮೋದಿಯಿಂದ ಜನ್ಮದಿನದ ಶುಭಾಶಯ
Read more from source
[wpas_products keywords=”deal of the day sale today kitchen”]