ವಿಧಾನ ಸೌಧದಲ್ಲಿ ಕಾಂಗ್ರೆಸ್ ಮುಸ್ಲಿಂ ಶಾಸಕರ ಜೊತೆ ಅನೌಪಚಾರಿಕ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮುಸ್ಲಿಂ ನಾಯಕರ ಜೊತೆ ಸೌಹಾರ್ದ ಭೇಟಿಯಾಗಿದ್ದೇನೆ. ಕೆಲವು ಕಡೆ ಆಗಿರೋ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಚರ್ಚೆ ಮಾಡಿದ್ವಿ ಎಂದರು.
ಕೆಲವು ಕಡೆಗಳಲ್ಲಿ ಬುರ್ಖಾ ಬಿಚ್ಚಿಸಿರೋ ಬಗ್ಗೆ ಮಾತನಾಡಿದ್ರು. ನೌಕರರಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿದ್ರು. ಶಿಕ್ಷಕಿಯರು ಬುರ್ಖಾ ಧರಿಸಬಾರದು ಅಂತ ಹೇಳಲಾಗಿದೆ. ಬುರ್ಖಾ ಧರಿಸಿ ಸರಿಯಾಗಿ ಪಾಠ ಮಾಡಲು ಆಗಲ್ಲ ಎಂದರು.
1.20 ಲಕ್ಷ ಅಲ್ಪ ಸಂಖ್ಯಾತರ ಮಕ್ಕಳಲ್ಲಿ 80 ಸಾವಿರ ಹೆಣ್ಣು ಮಕ್ಕಳು ಇದ್ದಾರೆ. ಗುರುವಾರ 38 ಮಕ್ಕಳು ಶಾಲೆ ಹೋಗದೇ ಮರಳಿದ್ದಾರೆ. ಹಿಜಾಬ್ ತೆಗೆಯಲ್ಲ ಅಂತಾ ಶಾಲೆಗೆ ಹೋಗಿಲ್ಲ. ಶಾಲೆಗೆ ಬಾರದ ಮಕ್ಕಳ ಕಡೆ ಒತ್ತು ಕೊಡ್ತಿದ್ದೇವೆ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.
ನ್ಯಾಯಾಲಯದ ಆದೇಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಎರಡು ಮೂರು ಕಡೆ ಆದ ಗೊಂದಲದ ಬಗ್ಗೆ ಚರ್ಚೆ ಆಯ್ತು. ಬುರ್ಖಾ ಹಾಕೊಂಡು ಯಾವುದೇ ಕ್ಲಾಸ್ ರೂಮ್ ನಲ್ಲಿ ಪಾಠ ಮಾಡೋಕೆ ಅವಕಾಶ ಇಲ್ಲ. ಶಿಕ್ಷಕರಿಗೆ ಡ್ರೆಸ್ ಕೋಡ್ ಇಲ್ಲ ಎಂದು ಹೇಳಿದ್ದೇವೆ. ಬುಧವಾರ 112 ಮಂದಿ, ಗುರುವಾರ 38 ಜನ ವಿದ್ಯಾರ್ಥಿಗಳು ವಾಪಸ್ಸು ಹೋಗಿದ್ದಾರೆ. 80 ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಇದ್ದಾರೆ. ಇದರಲ್ಲಿ ಬಹುತೇಕರು ಕೋರ್ಟ್ ಆದೇಶ ಪಾಲನೆ ಮಾಡಿದ್ದಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ತರಗತಿಗೆ ಬಂದಿಲ್ಲ ಎಂದರು.
ಡಿಗ್ರಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಇಲ್ಲ. ಡ್ರೆಸ್ ಕೋಡ್ ಇರೋ ಕಡೆ ಪಾಲನೆ ಮಾಡಬೇಕು. ಬುಧವಾರ 11 ಕಾಲೇಜುಗಳಲ್ಲಿ ತೀವ್ರ ವಿರೋಧ ಆಗಿತ್ತು. ಗುರುವಾರ ನಾಲ್ಕು ಶಾಲೆಗಳಲ್ಲಿ ಮಾತ್ರ ಕಂಡು ಬಂದಿದೆ. ಕೆಲವೇ ಮಕ್ಕಳು ಭಾವನಾತ್ಮಕವಾಗಿ ಯೋಚಿಸಿ ಶಾಲೆಗಳಿಗೆ ಬಂದಿಲ್ಲ. ಸ್ವಲ್ಪ ದಿನದಲ್ಲೇ ಇದು ಸರಿಹೋಗುತ್ತೆ ಎಂದು ಬಿ. ಸಿ. ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಫ್ ಐ ನವರು ಇದರ ಹಿಂದೆ ನಾವಿದ್ದೀವಿ ಅಂತಾ ಹೇಳಿಕೊಂಡಿದ್ದಾರೆ. ಯಾರ ಕುಮ್ಮಕ್ಕು ಅನ್ನೋ ಬಗ್ಗೆ ತನಿಖೆ ನಡೀತಿದೆ. ತನಿಖೆಯಿಂದ ಗೊತ್ತಾಗುತ್ತದೆ ಎಂದರು.
ಸಮವಸ್ತ್ರ ನೀತಿಯಲ್ಲಿ ಯಾವೆಲ್ಲಾ ಗೊಂದಲಗಳಿವೆ ಅದನ್ನು ನಿವಾರಿಸುವ ಚಿಂತನೆ ಇದೆ. ಹೈಕೋರ್ಟ್ ಆದೇಶದ ನಂತರ ತೀರ್ಮಾನ ಮಾಡ್ತೀವಿ. ಕೆಲವೊಂದು ಗೊಂದಲಗಳಿವೆ, ಎಲ್ಲಾ ಚರ್ಚೆ ಮಾಡ್ತೇವೆ ಎಂದರು.
ಹಿಜಾಬ್ ವಿವಾದದ ಜೊತೆಗೆ ಮಕ್ಕಳು ಹಣೆಗೆ ಬೊಟ್ಟು ಅಥವಾ ಕೈ , ಕಿವಿ ಹಾಕಿಕೊಂಡು ಬರುವ ವಸ್ತುಗಳು, ಹೂ ಮುಡ್ಕೊಂಡು ಬರುವ ಬಗ್ಗೆ ವಿವಾದ ಸೃಷ್ಟಿ ಆಗುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಮೊದಲು ಕೋರ್ಟ್ ನಲ್ಲಿ ಅರ್ಜಿದಾರರ ಪರ ವಕೀಲರು ಎತ್ತಿದ್ದಾರೆ. ನಾವು ಎಲ್ಲೂ ಈ ಬಗ್ಗೆ ಮಾತಾಡಿಲ್ಲ. ಇವೆಲ್ಲವೂ ಸಮವಸ್ತ್ರಕ್ಕೆ ಬರುವುದಿಲ್ಲ, ಅಲಂಕಾರದ ವಸ್ತುಗಳು. ಬಹಳ ಹಿಂದಿನಿಂದಲೂ ಮಕ್ಕಳು ಈ ಅಲಂಕಾರಿಕ ವಸ್ತುಗಳನ್ನು ಹಾಕಿಕೊಂಡು ಬರುತ್ತಿದ್ದಾರೆ. ಆದ್ರೆ ಈ ವಸ್ತುಗಳನ್ನು ಹಾಕಿಕೊಂಡು ಬಂದಿಲ್ಲವೆಂದ್ರೂ ಯಾರು ಕೇಳುವುದಿಲ್ಲ ಎಂದು ಸಮಜಾಯಿಶಿ ನೀಡಿದರು.
Read more
[wpas_products keywords=”deal of the day sale today offer all”]