Karnataka news paper

ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ರಾಜ್ಯದಲ್ಲೂ ಜಾರಿಗೆ ಬರಲಿ: ಪೇಜಾವರ ಶ್ರೀ ಆಗ್ರಹ


ಕಲಬುರಗಿ: ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಘೋಷಣೆ ಮಾಡಿರುವ ಶೇ. 10 ಮೀಸಲಾತಿಯನ್ನು ರಾಜ್ಯ ಸರಕಾರ ಏಕೆ ನೀಡುತ್ತಿಲ್ಲ? ಈ ಕುರಿತು ಕೂಡಲೇ ಸರಕಾರ ಆದೇಶ ಹೊರಡಿಸಿ ಮೀಸಲಾತಿ ಜಾರಿಗೆ ತರಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.

ಕಲಬುರಗಿ ನಗರದ ವಿದ್ಯಾ ನಗರದ ಕೃಷ್ಣ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ರಾಜ್ಯದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗಾಗಿ ಕೇಂದ್ರ ಕೊಡ ಮಾಡಿದ ಮೀಸಲಾತಿ ಜಾರಿ ಮಾಡಿಲ್ಲ. ಇದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ, ಯುವಕರಿಗೆ ತೊಂದರೆ ಆಗುತ್ತಿದೆ. ಗದಗದಲ್ಲಿ ವಿದ್ಯಾರ್ಥಿಯೊಬ್ಬ ಹೆಚ್ಚು ಅಂಕ ಗಳಿಸಿದ್ದರೂ, ಮೀಸಲಾತಿ ಪರಿಣಾಮ ಆತನಿಗೆ ಮೆಡಿಕಲ್‌ ಸೀಟು ಸಿಗಲಿಲ್ಲ. ಉದ್ಯೋಗದಲ್ಲೂ ಇದೇ ರೀತಿಯಾಗಿ ಅವಕಾಶಗಳು ತಪ್ಪಿ ಹೋಗುತ್ತಿವೆ. ಆದ್ದರಿಂದ ಕೂಡಲೇ ಸರಕಾರ ಶೇ. 10 ಮೀಸಲಾತಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದರು.

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಉದ್ಯೋಗ ಮೀಸಲು: ಸುಪ್ರೀಂನಲ್ಲಿ ಹರ್ಯಾಣಕ್ಕೆ ಗೆಲುವು
ಮುಖ್ಯಮಂತ್ರಿ ಭೇಟಿ

ಈ ನಿಟ್ಟಿನಲ್ಲಿ ಹಲವು ಅರ್ಹರಿಗೆ ಮತ್ತು ಸಾಮರ್ಥ್ಯ ಇದ್ದವರಿಗೆ ಮೀಸಲಾತಿ ಇಲ್ಲದೆ ಇರುವುದರಿಂದ ಆಗುವ ತೊಂದರೆಗಳನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಗಮನಕ್ಕೆ ತರುವ ನಿಟ್ಟಿನಲ್ಲಿ ಶೀಘ್ರವೇ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ತಿಳಿಸುತ್ತೇನೆ ಎಂದರು.

ಗುರುಗಳಿಗೆ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕೊರೊನಾದಿಂದಾಗಿ ಭಕ್ತರು ಗುರುಗಳ ಪೂಜೆ ಮಾಡಿ ಸಂಭ್ರಮಿಸುವುದು ಸಾಧ್ಯವಾಗಿರಲಿಲ್ಲ. ಈಗ ಕಲಬುರಗಿಯಲ್ಲಿ ಶೋಭಾ ಯಾತ್ರೆ ಕಾರ್ಯಕ್ರಮ ನಡೆಯುತ್ತಿದೆ. ಆದ್ದರಿಂದ ಮುಂದೆ ಆಹ್ವಾನ ಬಂದರೆ ಎಲ್ಲೆಡೆಯೂ ಹೋಗಿ ಆಶೀರ್ವಾದ ಮಾಡುವುದಾಗಿ ಅವರು ಹೇಳಿದರು. ರಾಘವೇಂದ್ರ ಕುಲಕರ್ಣಿ, ಕೃಷ್ಣಾ ಛಾತ್ರಾ ಇದ್ದರು.

ಸದನದಲ್ಲಿ ಚರ್ಚೆಗೆ ಬಂದ ಹಾಲಕ್ಕಿ ಜನಾಂಗಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರ!
ಹಿಜಾಬ್‌ ಕೋರ್ಟ್‌ ಆದೇಶ ಪಾಲಿಸಲಿ

ಹಿಜಾಬ್‌ ವಿಚಾರದಲ್ಲಿ ಸ್ಪಷ್ಟವಾದ ಅಭಿಪ್ರಾಯವೇನೆಂದರೆ ಹೈಕೋರ್ಟ್‌ ತೀರ್ಪನ್ನು ಎಲ್ಲರೂ ಗೌರವಿಸಿ ಪಾಲನೆ ತರಬೇಕಿದೆ. ಶೈಕ್ಷಣಿಕ ವಲಯದಲ್ಲಿ ಉಂಟಾಗಿರುವ ಧರ್ಮ, ಜಾತಿಗಳ ಭಿನ್ನಾಭಿಪ್ರಾಯ ಹೋಗಬೇಕು. ಸಮವಸ್ತ್ರಕ್ಕೆ ಯಾವುದೇ ವಿವಾದದ ಕಲೆ ಅಂಟಿಸುವುದು ಬೇಡ ಎಂದ ವಿಶ್ವ ಪ್ರಸನ್ನ ತೀರ್ಥರು, ವಿವಾದ ಉಂಟಾಗಿರುವ ಶಾಲೆಗಳಲ್ಲಿ ಇತ್ತೀಚೆಗೆ ಹಿಜಾಬ್‌ ಹಾಕಿಕೊಂಡು ಬರಲಾಗುತ್ತಿದೆ ಎನ್ನುವುದು ನಮ್ಮ ಗಮನಕ್ಕೂ ಬಂದಿದೆ. ಇಂತಹದೊಂದು ಸಂಪ್ರದಾಯ ಅಥವಾ ಸಂಸ್ಕೃತಿ ಹಿಂದೆ ಇರಲಿಲ್ಲ. ಆದರೆ, ಈಗ ಇದನ್ನು ವಿವಾದವಾಗಿ ಮಾಡುತ್ತಿರುವುದು ಯಾರು? ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳ ವಿಕಾಸ ಮತ್ತು ಶಿಕ್ಷಣದ ಹಿನ್ನೆಲೆಯಲ್ಲಿ ಕೋರ್ಟ್‌ ತೀರ್ಪು ಪಾಲಿಸಿಕೊಂಡು ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದರು.

ಕಲಬುರಗಿ ನಗರದ ವಿದ್ಯಾನಗರದ ಕೃಷ್ಣಮಂದಿರದಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ಅವರಿಗೆ ಕೇಂದ್ರ ಸರಕಾರ ನೀಡಿದ ಪದ್ಮವಿಭೂಷಣ ಪ್ರಶಸ್ತಿಗೆ ಸ್ವಾಗತ ಕಾರ್ಯಕ್ರಮಕ್ಕೆ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು, ವಿದ್ಯಾಧೀಶ ತೀರ್ಥ ಶ್ರೀಪಾದರು ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆ ತಿಂಗಳಲ್ಲೇ ಭರ್ತಿ: ಶ್ರೀರಾಮುಲು



Read more

[wpas_products keywords=”deal of the day sale today offer all”]