Source : ANI
ಕೊಚ್ಚಿನ್: ಕೇರಳದಲ್ಲಿ ಬುಧವಾರ ಒಂದೇ ದಿನ 4 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಹೊಸ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ 5ಕ್ಕೇರಿದೆ.
Kerala on Wednesday reported four more Omicron cases, and with this, the state’s tally has reached five: State Health Minister Veena George pic.twitter.com/qf7vPAFAiM
— ANI (@ANI) December 15, 2021
ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಾಹಿತಿ ನೀಡಿದ್ದು, ಕೇರಳದಲ್ಲಿ ಬುಧವಾರ 4 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಹೊಸ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ 5ಕ್ಕೇರಿದೆ ಎಂದು ಹೇಳಿದ್ದಾರೆ.
Among the total 4 cases reported, 2 are the people who’ve come into contact with the 1st positive case which was reported in Kochi. 3rd person is from Ernakulam who’d come from Congo. 4th case has been reported from Thiruvananthapuram, who’d come from UK: Kerala Health Minister pic.twitter.com/9U6NSzpOqS
— ANI (@ANI) December 15, 2021
ಅಂತೆಯೇ ವರದಿಯಾದ ಒಟ್ಟು 4 ಪ್ರಕರಣಗಳಲ್ಲಿ, 2 ಕೊಚ್ಚಿಯಲ್ಲಿ ವರದಿಯಾದ 1 ನೇ ಪ್ರಕರಣದೊಂದಿಗೆ ಸಂಪರ್ಕಕ್ಕೆ ಬಂದ ಜನರಾಗಿದ್ದಾರೆ. 3 ನೇ ವ್ಯಕ್ತಿ ಕಾಂಗೋದಿಂದ ಎರ್ನಾಕುಲಂ ವ್ಯಕ್ತಿಯಾಗಿದ್ದಾರೆ. ಅಂತೆಯೇ ಬ್ರಿಟನ್‌ನಿಂದ ತಿರುವನಂತಪುರಂಕ್ಕೆ ಬಂದ ವ್ಯಕ್ತಿಗೂ ಓಮಿಕ್ರಾನ್ ಒಕ್ಕರಿಸಿದ್ದು, ಇದು ದಿನದ 4ನೇ ಪ್ರಕರಣವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನಿಂದ ಬಂದ ಕೇರಳ ಮೂಲದವರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಇದು ಕೇರಳದಲ್ಲಿ ಪತ್ತೆಯಾದ ಮೊದಲ ಹೊಸ ರೂಪಾಂತರಿ ಸೋಂಕು ಪ್ರಕರಣವಾಗಿತ್ತು.