The New Indian Express
ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ 7 ತಿಂಗಳ ಮಗುವಿನ ಸಾವನ್ನು ಸಹಿಸಲಾಗದೆ 26 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಸ್‌ಜಿ ಪಾಳ್ಯದಲ್ಲಿ ಸೋಮವಾರ ನಡೆದಿದೆ. ಮೃತರನ್ನು ಪಲ್ಲವಿ ಎಂದು ಗುರುತಿಸಲಾಗಿದೆ.
ಪಲ್ಲವಿ 3 ವರ್ಷಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ಸಂತೋಷ್ ಎನ್ನುವವರನ್ನು ಮದುವೆಯಾಗಿದ್ದು, ಕಳೆದ 7 ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ 2 ತಿಂಗಳ ಈ ಮಗುವಿಗೆ ಹೃದಯ ಸಂಬಂಧಿತ ಕಾಯಿಲೆ ಕಾಣಿಸಿಕೊಂಡಿತ್ತು.
ಮಗುವಿನ ಹೃದಯಲ್ಲಿ ಹೋಲ್ ಇರುವುದಾಗಿ ವೈದ್ಯರು ತಿಳಿಸಿದ್ದರು. ಮುಂದಿನ ದಿನಗಳಲ್ಲಿ ಆಪರೇಷನ್ ಮಾಡಿಸಬೇಕಾಗಿ ವೈದ್ಯರು ತಿಳಿಸಿದ್ದರು. ಶಸ್ತ್ರ ಚಿಕಿತ್ಸೆಗಾಗಿ ಮಗುವಿನ ಪೋಷಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಸೋಮವಾರ ಮುಂಜಾನೆ ಸಂತೋಷ್ ಕೆಲಸಕ್ಕೆ ತೆರಳಿದ್ದು, ಪಲ್ಲವಿ ಮಗುವನ್ನು ನೋಡಿಕೊಳ್ಳುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಮಗು ಉಸಿರಾಟ ನಿಲ್ಲಿಸಿದ್ದನ್ನು ಆಕೆ ಗಮನಿಸಿದಳು. ಮಗುವಿನ ಸಾವಿನಿಂದ ಆಘಾತಕ್ಕೊಳಗಾದ ಪಲ್ಲವಿ ಕೊಠಡಿಯೊಳಗೆ ಹೋಗಿ ನೇಣು ಬಿಗಿದುಕೊಂಡಿದ್ದಾಳೆ.
ಕರುಳ ಕುಡಿಯ ಅಗಲಿಕೆಯಿಂದ ಮನನೊಂದಿದ್ದ ಪಲ್ಲವಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಸಂತೋಷ್ ಕೆಲಸ ಮುಗಿಸಿ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಸುದ್ದಗುಂಟೆ ಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.
Read more
[wpas_products keywords=”deal of the day”]