Online Desk
ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿ ನಟಿಸಿದ್ದ ‘ರಾಜಧಾನಿ’ ಚಿತ್ರದಲ್ಲಿ ಅಭಿನಯಿಸಿದ್ದ ನಟ ರವಿತೇಜ ಈಗ ‘ರಾಜ್ಯಭಾರ’ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಎ.ಸಿ.ವೆಂಕಟೇಶ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ರಾಜೇಶ್ ಗುರೂಜಿಯವರಿಂದ ಇತ್ತೀಚಿಗೆ ನೆರವೇರಿತು.
ಇದನ್ನೂ ಓದಿ: ಆರ್ಕಿಯಲಾಜಿಸ್ಟ್ ಪಾತ್ರದಲ್ಲಿ ಮಗಳು ಜಾನಕಿ ಗಾನವಿ ಲಕ್ಷ್ಮಣ್: ‘ಭಾವಚಿತ್ರ’ ಸಿನಿಮಾ ಈ ವಾರ ತೆರೆಗೆ
ರವಿತೇಜ ಅವರ ಭಾಮೈದ ಆರ್. ಕಾರ್ತಿಕ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಸಿನಿಮಾದ ಪಾತ್ರವರ್ಗದಲ್ಲಿ ರವಿತೇಜ, ಅರ್ವ, ಸನತ್, ಕಲ್ಯಾಣ್, ಅಕ್ಷಯ್, ಉಷಾಭಂಡಾರಿ, ಸೋನು, ಶಿವು ಮುಂತಾದವರು ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಸೂರಿ-ಅಭಿಷೇಕ್ ಅಂಬರೀಷ್ ಕಾಂಬಿನೇಷನ್ ನ ‘ಬ್ಯಾಡ್ ಮ್ಯಾನರ್ಸ್’ ಶೂಟಿಂಗ್ ಮತ್ತೆ ಶುರು
ಈ ಸಂದರ್ಭ ಮಾತನಾಡಿದ ನಾಯಕನಟ ರವಿತೇಜ ‘ಎಲ್ಲಾ ಕಡೆ ತಮ್ಮದೇ ಹವಾ, ದರ್ಬಾರ್ ನಡೀಬೇಕು ಎಂದುಕೊಂಡಿದ್ದ ನಾಲ್ವರು ಹುಡುಗರ ಕಥೆಯಿದು. ರಾಜಧಾನಿ ಚಿತ್ರದ ಇನ್ನೊಂದು ವರ್ಷನ್ ಎನ್ನಬಹುದು’ ಎಂದಿದ್ದಾರೆ.
ಇದನ್ನೂ ಓದಿ: ನಿವಿನ್ ಪೌಲಿ ಸಿನಿಮಾಗೆ ‘ಅವನೇ ಶ್ರೀಮನ್ನಾರಾಯಣ’ ನಟಿ ಶಾನ್ವಿ ಶ್ರೀವಾಸ್ತವ ನಾಯಕಿ: ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ
ಎಲ್ಲಾ ವಯಸ್ಸಿನ ಹುಡುಗರಿಗೂ ನನ್ನದೇ ಹವಾ ನಡೆಯಬೇಕು ಎಂದಿರುತ್ತದೆ. ಹಾಗೇ ಈ 4 ಜನ ಹುಡುಗರು ದರ್ಬಾರ್ ನಡೆಸಲು ಹೋಗುತ್ತಾರೆ. ಈ ವಿಷಯವನ್ನು ಸಿನಿಮಾದಲ್ಲಿ ಹೇಳ ಹೊರಟಿದ್ದೇವೆ ಎನ್ನುತ್ತಾರೆ ರವಿತೇಜ.
ಇದನ್ನೂ ಓದಿ: ಜಮೀರ್ ಪುತ್ರ ಝೈದ್ ಖಾನ್ ಸ್ಟಾರರ್ ‘ಬನಾರಸ್’ ಕನ್ನಡ ಸಿನಿಮಾ ನೂತನ ಪೋಸ್ಟರ್ ಬಿಡುಗಡೆ
ಏಪ್ರಿಲ್ ಎರಡನೇ ವಾರ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಅಲ್ಲದೆ ಪ್ರಮುಖ ಪಾತ್ರವೊಂದರಲ್ಲಿ ಸ್ಟಾರ್ ಕಲಾವಿದರೊಬ್ಬರು ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂದಿದೆ.
Read more…
[wpas_products keywords=”party wear dress for women stylish indian”]