Online Desk
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲೇ ಇದು ಕರಾಳ ದಿನ, ರಾಷ್ಟ್ರ ಧ್ವಜವನ್ನು ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಪ್ರತಿಭಟನೆಗಾಗಿ ಸದನದಲ್ಲಿ ಬಳಕೆ ಮಾಡಿರುವುದು ಸದನ, ಸಂವಿಧಾನ ಹಾಗೂ ತಿರಂಗ ಧ್ವಜಕ್ಕೆ ಮಾಡಿದ ಅಪಮಾನ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ನಿಲುವಳಿ ಸೂಚನೆ ತಿರಸ್ಕೃತ
ಧ್ವಜ ಸಂಹಿತೆಯ ಬಗ್ಗೆ ಸದನದಲ್ಲಿ ಗಂಟೆಗಳ ಕಾಲ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಸದನದಲ್ಲಿ ತಮ್ಮ ಪಕ್ಷದ ಶಾಸಕರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಾಗ ಮೌನಕ್ಕೆ ಜಾರಿದ್ದರು. ಇದು ಜಾಣ ಮೌನವೋ, ಅಸಹಾಯಕತೆಯೋ ? ಎಂದು ಪ್ರಶ್ನೆ ಮಾಡಿದರು.
ಸದನದ ನಿಯಮಾವಳಿ ಪ್ರಕಾರ ರಾಷ್ಟ್ರ ಧ್ವಜವನ್ನು ಸದನಕ್ಕೆ ತರುವಂತಿಲ್ಲ, ಆದರೆ ಕಾಂಗ್ರೆಸ್ ಶಾಸಕರು ರಾಷ್ಟ್ರ ಧ್ವಜವನ್ನು ಭಿತ್ತಿಪತ್ರದ ರೀತಿ ಬಳಸಿಕೊಂಡಿದ್ದಾರೆ. ಈ ದುರ್ವತನೆಗಾಗಿ ಕಾಂಗ್ರೆಸಿಗರು ಬೇಷರತ್ತಾಗಿ ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Read more
[wpas_products keywords=”deal of the day”]