Karnataka news paper

ಭಾರತೀಯ ಯುವತಿಯನ್ನು ವರಿಸಲಿರುವ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್: ಆಹ್ವಾನ ಪತ್ರಿಕೆ ಫೋಟೋ ವೈರಲ್!


Online Desk

ಮೆಲ್ಬರ್ನ್: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಭಾರತೀಯ ಮೂಲದ ವಿನಿ ರಾಮನ್ ಅವರನ್ನ ವಿವಾಹವಾಗಲಿದ್ದಾರೆ. 2020ರಲ್ಲೇ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. 

ಇಬ್ಬರು ಬಹಳ ದಿನಗಳಿಂದ ಡೇಟಿಂಗ್ ನಲ್ಲಿದ್ದರು. ಇವರ ವಿವಾಹ ಸಂಪೂರ್ಣವಾಗಿ ಭಾರತೀಯ ಸಂಪ್ರದಾಯದ ಪ್ರಕಾರ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಮದುವೆಯ ಆಮಂತ್ರಣ ಪತ್ರಿಕೆಯನ್ನು ತಮಿಳಿನಲ್ಲಿ ಮುದ್ರಿಸಲಾಗಿದ್ದೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾರ್ಚ್ 27ರಂದು ಮದುವೆ ಸಮಾರಂಭ ನಡೆಯಲಿದ್ದು, ಕಸ್ತೂರಿ ಶಂಕರ್ ಮದುವೆ ಕಾರ್ಡ್ ಅನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ, ಮದುವೆ ಹಿನ್ನೆಲೆಯಲ್ಲಿ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಕೆಲವು ಪಂದ್ಯಗಳನ್ನು ಆಡಲು ಲಭ್ಯರಿರುವುದಿಲ್ಲ. ಈ ಬಾರಿಯ ಐಪಿಎಲ್ ಮಾರ್ಚ್ 27ಕ್ಕೆ ಆರಂಭವಾಗಲಿದ್ದು, ಮ್ಯಾಕ್ಸ್ ವೆಲ್ ಅದೇ ದಿನ ರಾಮನ್ ರನ್ನ ವರಿಸಲಿದ್ದಾರೆ. ಕರೋನಾ ಹಿನ್ನೆಲೆಯಲ್ಲಿ ಐಪಿಎಲ್ ಬಯೋ ಬಬಲ್‌ಗೆ ಸೇರುವ ಮೊದಲು ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ, ಈ ಪರಿಸ್ಥಿತಿಯಲ್ಲಿ ಕೆಲವು ಪಂದ್ಯಗಳನ್ನ ಆಡುವುದು ಮಿಸ್ ಆಗುವ ಸಾಧ್ಯತೆ ಇದೆ.

ಇತ್ತೀಚಿಗೆ ನಡೆದ ಐಪಿಎಲ್ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ವಿನಿ ರಾಮನ್ ಅವರ ಪೋಷಕರು ಹಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ್ದೂ ವಿನಿ ರಾಮನ್ ಕೂಡ ಅಲ್ಲಿಯೇ ಹುಟ್ಟಿ ಬೆಳೆದವರು.ಪ್ರಸ್ತುತ ವೃತ್ತಿಪರ ಫಾರ್ಮಸಿಸ್ಟ್‍ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ಲೆನ್‌ಮ್ಯಾಕ್ಸ್‌ವೆಲ್ ಒತ್ತಡದಲ್ಲದ್ದಾಗ ರಾಮನ್  ಅವರು ಮ್ಯಾಕ್ಸ್ ವೆಲ್ ಆಸರೆಯಾಗಿ ನಿಂತಿದ್ದರು. ಈ ಸಂದರ್ಭದಲ್ಲೆ ಇಬ್ಬರು ನಡುವೆ ಪ್ರೇಮಾಂಕುರವಾಗಿದೆ.





Read more…

[wpas_products keywords=”deal of the day sports items”]