Deal Of The Day
oi-Mutthuraju H M
ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಅಮೆಜಾನ್ ನೆಚ್ಚಿನ ತಾಣವಾಗಿದೆ. ಅಮೆಜಾನ್‌ನಲ್ಲಿ ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ಮೇಳಗಳನ್ನು ಆಯೋಜಿಸುತ್ತಾ ಬಂದಿದೆ. ಅಲ್ಲದೆ ವಿಕೆಂಡ್, ಮಂತ್‌ಎಂಡ್ ಸೇಲ್‌ಗಳಲ್ಲಿಯೂ ಕೂಡ ವಿಶೇಷ ಆಫರ್‌ಗಳನ್ನು ನೀಡಲಿದೆ. ಜೊತೆಗೆ ಅಮೆಜಾನ್ ಸಾಮಾನ್ಯ ದಿನಗಳಲ್ಲಿಯೂ ಕೂಡ ವಿಶೇಷ ಡಿಸ್ಕೌಂಟ್‌ಗಳನ್ನು ನೀಡಲಿದೆ. ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳಿಗೆ ರಿಯಾಯಿತಿ ನೀಡುತ್ತಾ ಬಂದಿದೆ.

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಮಾನ್ಯ ದಿನಗಳಲ್ಲಿಯೂ ಸಹ ವಿಶೇಷ ರಿಯಾಯಿತಿ ನೀಡಲಿದೆ. ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಇತರೆ ಗ್ಯಾಜೆಟ್ಸ್‌ಗಳು ಕೂಡ ನಿಮಗೆ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ. ಸದ್ಯ ಇದೀಗ ಅಮೆಜಾನ್ ಲ್ಯಾಪ್‌ಟಾಪ್‌ಗಳ ಮೇಲೆ 30% ತನಕ ಡಿಸ್ಕೌಂಟ್ ನೀಡುತ್ತಿದೆ. ಹೊಸ ಲ್ಯಾಪ್‌ಟಾಪ್ ಖರೀದಿಸಬೇಕೆಂದು ಕೊಂಡವರಿಗೆ ಅತ್ಯುತ್ತಮ ರಿಯಾಯಿತಿಗಳನ್ನು ಕೊಡುತ್ತಿದೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ರಿಯಾಯಿತಿ ಪಡೆದಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಡೆಲ್ 15 (2021)
ಡೆಲ್ ಕಂಪೆನಿಯ ಡೆಲ್ 15 (2021) ಲ್ಯಾಪ್‌ಟಾಪ್ ಅಮೆಜಾನ್‌ನಲ್ಲಿ 30% ಡಿಸ್ಕೌಂಟ್ ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಅಥ್ಲಾನ್ ಸಿಲ್ವರ್ 3050U ಪ್ರೊಸೆಸರ್ ಹೊಂದಿದ್ದು, ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GBRAM ಮತ್ತು 256GB ಇಂಟರ್ ಸ್ಟೊರೇಜ್ ಅನ್ನು ಹೊಂದಿದೆ. ಜೊತೆಗೆ AMD ವೇಗಾ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇದು ಯುಎಸ್‌ಬಿ 3.2 ಜೆನ್ 1, ಹೆಚ್‌ಡಿಎಂಐ 1.4b, SD ಕಾರ್ಡ್ ರೀಡರ್, ಆಡಿಯೋ ಜ್ಯಾಕ್ ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್ ಮೇಲೆ ನೋ ಕಾಸ್ಟ್ ಇಎಂಐ ಆಫರ್ ಕೂಡ ಲಭ್ಯವಿದೆ.
ಆಸುಸ್ ಟಫ್ ಗೇಮಿಂಗ್ F15
ಆಸುಸ್ ಟಫ್ ಗೇಮಿಂಗ್ F15 ಲ್ಯಾಪ್‌ಟಾಪ್ 15.6 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಇಂಟೆಲ್ ಕೋರ್ i5-10300H ಪ್ರೊಸೆಸರ್ ಹೊಂದಿದ್ದು, ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ 100 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ಗೇಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಹಾಗೆಯೇ 8GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಜೊತೆಗೆ ಎನ್‌ವಿಡಿಯಾ ಜಿಫೋರ್ಸ್ GTX 1650 ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ HD 720p CMOS ಮಾಡ್ಯೂಲ್ ವೆಬ್ ಕ್ಯಾಮೆರಾವನ್ನು ಒಳಗೊಂಡಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್ 31% ಡಿಸ್ಕೌಂಟ್ ಪಡೆದುಕೊಂಡಿದೆ.
ಡೆಲ್ ನ್ಯೂ 15
ಡೆಲ್ ನ್ಯೂ ಇಂಟೆಲ್ i3 1115G4 ಲ್ಯಾಪ್‌ಟಾಪ್ 15.6 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಇಂಟೆಲ್ i3 1115G4 ಪ್ರೊಸೆಸರ್ ಹೊಂದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇದು 2x ಯುಎಸ್‌ಬಿ 3.2 Gen1, 1x ಯುಎಸ್‌ಬಿ 2.0, HDMI 1.4, SD ಕಾರ್ಡ್ ರೀಡರ್, ಆಡಿಯೋ ಜ್ಯಾಕ್ ಅನ್ನು ಬೆಂಬಲಿಸಲಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್ ಅಮೆಜಾನ್‌ನಲ್ಲಿ 29% ಡಿಸ್ಕೌಂಟ್ ಪಡೆದುಕೊಂಡಿದೆ.
ಹೆಚ್‌ಪಿ ವಿಕ್ಟಸ್ ಎಎಂಡಿ ರೈಜನ್ 5
ಹೆಚ್‌ಪಿ ವಿಕ್ಟಸ್ ಎಎಂಡಿ ರೈಜನ್ 5 ಲ್ಯಾಪ್‌ಟಾಪ್ 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 16.1 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು 250ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು ಎಎಂಡಿ ರೈಜನ್ 5 ಪ್ರೊಸೆಸರ್ ಬಲವನ್ನು ಪಡೆದಿದ್ದು, ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 512GB ಇಂಟರ್ ಸ್ಟೊರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಬ್ಲೂಟೂತ್ 5.2 ಬೆಂಬಲಿಸಲಿದೆ. ಸದ್ಯ ಈ ಲ್ಯಾಪ್‌ಟಾಪ್ ಅಮೆಜಾನ್‌ನಲ್ಲಿ 19% ಡಿಸ್ಕೌಂಟ್ ಪಡೆದಿದೆ.
ಡೆಲ್ ಇನ್‌ಸ್ಪೈರಾನ್
ಡೆಲ್ ಇನ್‌ಸ್ಪೈರಾನ್ ಲ್ಯಾಪ್‌ಟಾಪ್ 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 5.6 ಇಂಚಿನ ಫುಲ್ ಹೆಚ್‌ಡಿ AG ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಆಂಟಿ-ಗ್ಲೇರ್ LED ನ್ಯಾರೋ ಬಾರ್ಡರ್ WVA ಡಿಸ್‌ಪ್ಲೇ ಆಗಿದೆ. ಇದು i5 1135G7 ಪ್ರೊಸೆಸರ್ ಹೊಂದಿದೆ. ಹಾಗೆಯೇ 4GB RAM + 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಯುಎಸ್‌ಬಿ 3.2 Gen 1 (x2), ಯುಎಸ್‌ಬಿ 2.0 (x1), ಹೆಚ್‌ಡಿಎಂಐ 1.4(x1), ಒಂದು SD-ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸಲಿದೆ.
ಡೆಲ್ ನ್ಯೂ 14 2 ಇನ್ 1 ಲ್ಯಾಪ್‌ಟಾಪ್
ಡೆಲ್ ನ್ಯೂ 14 2 ಇನ್ 1 ಲ್ಯಾಪ್‌ಟಾಪ್ 14 ಇಂಚಿನ ಟಚ್ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು i3-1125G4 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್ ವಿಧ್ಯಾರ್ಥಿಗಳು ಬಳಸುವುದಕ್ಕೆ ಸೂಕ್ತವಾದ ವಿನ್ಯಾಸವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟಲ್ ಗ್ರಾಫಿಕ್ಸ್ ಅನ್ನು ಹೊಂದಿದೆ. ಸದ್ಯ ಈ ಲ್ಯಾಪ್‌ಟಾಪ್ ಅಮೆಜಾನ್‌ನಲ್ಲಿ 18% ಡಿಸ್ಕೌಂಟ್ ದೊರೆಯಲಿದೆ.
ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3
ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3 ಲ್ಯಾಪ್‌ಟಾಪ್ 1920×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 15.6 ಇಂಚಿನ ಫುಲ್‌ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120 Hz ರಿಫ್ರೆಶ್ ರೇಟ್ ಹೊಂದಿದ್ದು, 250 ನಿಟ್ಸ್ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇದು ಆಂಟಿ-ಗ್ಲೇರ್ ಡಿಸ್‌ಪ್ಲೇ ಆಗಿದೆ. ಈ ಲ್ಯಾಪ್‌ಟಾಪ್ ಎಎಂಡಿ ರೈಜೆನ್ 7 5800H ಪ್ರೊಸೆಸರ್ ಹೊಂದಿದ್ದು, ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ.
Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.
Read more…
[wpas_products keywords=”smartphones under 15000 6gb ram”]