Online Desk
ಬೆಂಗಳೂರು: ಶಬ್ಧ ಮಾಲೀನ್ಯ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಗಣಪತಿ ದೇವಸ್ಥಾನ ನೋಟಿಸ್ ನೀಡಿಲ್ಲ ಸಚಿವ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
‘ದೊಡ್ಡ ಗಣಪತಿ ದೇವಾಲಯದಲ್ಲಿ ಘಂಟೆ ಶಬ್ದ ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ನೋಟಿಸ್ ನೀಡಿಲ್ಲ’ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ದಕ್ಷಿಣ ಪ್ರಾದೇಶಿಕ ಕಚೇರಿಯಿಂದ ಯಾವುದೇ ಆದೇಶ ಹೊರಡಿಸಿಲ್ಲ. ಅಲ್ಲದೆ, ಪೊಲೀಸ್ ನೋಟಿಸ್‌ನಲ್ಲಿ ಉಲ್ಲೇಖಿಸಿರುವಂತೆ ಬೆಂಗಳೂರು ನಗರ ದಕ್ಷಿಣ ಪ್ರಾದೇಶಿಕ ಕಚೇರಿಯಿಂದ ಈ ರೀತಿಯ ಯಾವುದೇ ಪತ್ರವನ್ನು ನೀಡಿಲ್ಲ. ಈ ಬಗ್ಗೆ ಇಲಾಖೆಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ’ ಎಂದೂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ದೇಗುಲಗಳ ಘಂಟಾನಾದ ಶಬ್ದದಿಂದ ಮಾಲಿನ್ಯ: ಜೋರಾಗಿ ಗಂಟೆ ಹೊಡೆದರೆ ಬೀಳುತ್ತೆ ಕೇಸ್!
ಶಬ್ಧ ಮಾಲೀನ್ಯ ನಿಯಂತ್ರಣದಡಿಯಲ್ಲಿ ಪ್ರಸಿದ್ಧ ದೊಡ್ಡ ಗಣಪತಿ ದೇವಸ್ಥಾನ ಸೇರಿದಂತೆ 11 ಪೂಜಾ ಸ್ಥಳಗಳಿಗೆ ಬೆಂಗಳೂರಿನ ಬಸವನಗುಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿತ್ತು. ಕಲಾಸಿಪಾಳ್ಯದ ಮಿಂಟೋ ಆಂಜನೇಯ ದೇವಸ್ಥಾನ, ಕಾರಂಜಿ ಆಂಜನೇಯ ದೇವಸ್ಥಾನ ಮತ್ತು ದೊಡ್ಡ ಬಸವಣ್ಣ ದೇವಸ್ಥಾನಕ್ಕೆ ನೋಟಿಸ್ ಕಳುಹಿಸಲಾಗಿತ್ತು.
ಚರ್ಚ್, ಮಸೀದಿ, ಜೈನ ಮಂದಿರ ಮತ್ತು ಮದುವೆ ಮಂಟಪಗಳನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ. ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
Read more
[wpas_products keywords=”deal of the day”]