Karnataka news paper

ಚಿತ್ರಗೀತೆಯ ಅಪರಂಜಿ ಚಿನ್ನ ಬಪ್ಪಿ ದಾರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆತಂದಿದ್ದ ದ್ವಾರಕೀಶ್


(ಬಬಿತಾ ಎಸ್‌.)
ಸೋನ ನಹಿ, ಚಾಂದಿ ನಹಿ, ಯಾರ್‌ ತೋ ಮಿಲಾ, ಅರೇ ಪ್ಯಾರ್‌ ಕರ್ಲೇ… ಎಂದು ಹೇಳುತ್ತಲೇ ಸೋನ ಅಂದರೆ ಬಂಗಾರದ ಒಡವೆಯ ಮೇಲೆ ವಿಪರೀತ ಪ್ರೀತಿ ಬೆಳೆಸಿಕೊಂಡು, ಮೈತುಂಬಾ ಚಿನ್ನದ ಒಡವೆಗಳನ್ನು ಪೇರಿಸಿಕೊಂಡು ನಡೆದಾಡುವ ‘ಚಿನ್ನದ ಪುತ್ಥಳಿ’ಯಂತೆಯೇ ಭಾಸವಾಗುತ್ತಿದ್ದ ಸಂಗೀತ ಸಂಯೋಜಕ, ಗಾಯಕ ಬಪ್ಪಿ ಲಹರಿ ಸಂಗೀತ ನೀಡಿದ ಮತ್ತು ಹಾಡಿದ ಹಾಡುಗಳೆಲ್ಲವೂ ಅಪ್ಪಟ ಚಿನ್ನವೇ ಹೌದು.

ಸುಮಾರು 80ರ ದಶಕದವರೆಗೆ ಮೆಲು ಸಂಗೀತ, ನಾಯಕ-ನಾಯಕಿ ಮರ ಸುತ್ತುವ ಹಾಡುಗಳು, ಸಾಂಪ್ರದಾಯಿಕ ಸಂಗೀತ ವಾದನಗಳಿಗೆ ಸೀಮಿತವಾಗಿದ್ದ ಭಾರತೀಯ ಚಿತ್ರ ಜಗತ್ತಿನಲ್ಲಿ ಫ್ಯೂಷನ್‌ ಡಿಸ್ಕೊ ಬೀಟ್‌ಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಬಪ್ಪಿ ದಾಗೆ ಸಲ್ಲುತ್ತದೆ. 1982ರಲ್ಲಿ ಬಂದ ‘ಡಿಸ್ಕೊ ಡಾನ್ಸರ್‌’ ಸಿನಿಮಾದ ‘ಐ ಆ್ಯಮ್‌ ಎ ಡಿಸ್ಕೊ ಡಾನ್ಸರ್‌’ನಿಂದ ಹಿಡಿದು ‘ಜಿಮ್ಮಿ ಜಿಮ್ಮಿ…’, ಗಾಯಕಿ ಉಷಾ ಉತ್ತುಪ್‌ ಜತೆಗೆ ಅವರೇ ಹಾಡಿದ ‘ಕೊಯೀ ಯಹಾ ನಚೇ ನಚೇ’ ಮತ್ತು ‘ಯಾದ್‌ ಆ ರಹಾ ಹೇ’ ಹಾಡುಗಳು ಭಾರತೀಯ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಈ ಸಿನಿಮಾದ ಮೂಲಕ ನಟ ಮಿಥುನ್‌ ಚಕ್ರವರ್ತಿ ‘ಡಿಸ್ಕೊ ಕಿಂಗ್‌’ ಎಂದು ಜನಪ್ರಿಯರಾದರೆ ಬಪ್ಪಿ ಲಹರಿ ಈ ಹಾಡುಗಳ ಮೂಲಕ ಇಡೀ ಭಾರತ ಮಾತ್ರವಲ್ಲದೆ, ರಷ್ಯಾ ಮತ್ತು ಚೀನಾದವರನ್ನೂ ಕುಣಿಸಿದ ಅಕ್ಷರಶಃ ‘ಡಿಸ್ಕೊ ಮಾಸ್ಟರ್‌’!

ಬಪ್ಪಿ ಲಹರಿ ಧರಿಸುತ್ತಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಈಗ ಯಾರಿಗೆ ಸೇರುತ್ತೆ?

ಡ್ರಮ್ಸ್‌, ಬಾಸ್‌ ಗಿಟಾರ್‌, ರೊಲ್ಯಾಂಡ್‌ ಮುಂತಾದ ಪಾಶ್ಚಾತ್ಯ ಸಂಗೀತ ವಾದ್ಯಗಳನ್ನು ಭಾರತೀಯ ಸಿನಿಮಾ ಗೀತೆಗಳ ಸನ್ನಿವೇಶಗಳಿಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ ಬಪ್ಪಿ ಲಹರಿ ಅವರ ಅಬ್ಬರದ ಮಾಸ್‌ ಸಂಗೀತಗಳಿಗೆ ಈಗಲೂ ಎಲ್ಲರನ್ನೂ ಕುಣಿಸುವ ಶಕ್ತಿಯಿದೆ. ಅದು ‘ಥಾನೇದಾರ್‌’ ಸಿನಿಮಾಗೆ ಹಾಡಿದ ‘ತಮ್ಮಾ ತಮ್ಮಾ ಲೋಗೇ…’ ಹಾಡಿರಬಹುದು, ‘ಸಾಹೇಬ್‌’ ಚಿತ್ರದ ‘ಯಾರ್‌ ಬಿನಾ ಚೈನ್‌ ಕಹಾರೇ…’, ‘ಡಾನ್ಸ್‌ ಡಾನ್ಸ್‌’ ಚಿತ್ರದ ‘ಝೂಬಿ ಝೂಬಿ…’, ‘ಶರಾಬಿ’ ಚಿತ್ರದ ‘ದೆ ದೇ ಪ್ಯಾರ್‌ ದೆ…’ ‘ಡರ್ಟಿ ಪಿಕ್ಚರ್‌’ನ ‘ಊ..ಲಾ..ಲಾ’, ‘ಗುಂಡೇ’ ಸಿನಿಮಾದ ‘ತೂನೆ ಮಾರಿ ಎಂಟ್ರಿ ಔರ್‌’ ಹಾಡಿರಬಹುದು… ಇವೆಲ್ಲವೂ ಭಾರತೀಯ ಚಿತ್ರರಂಗದ ಗೋಲ್ಡನ್‌ ಹಾಡುಗಳು. ಹಾಗಂತ ಇವರು ಇಂಥ ಪ್ರವಾಹದಂಥ ಹಾಡುಗಳಿಗೆಯೇ ಸೀಮಿತವಾಗಿರಲಿಲ್ಲ.

ಅಯ್ಯೋ ವಿಧಿಯೇ.. ಮಗಳ ತೋಳಲ್ಲೇ ಕುಸಿದು ಬಿದಿದ್ದ ಬಪ್ಪಿ ಲಹಿರಿ

ಮಧುರವಾರ ಪ್ರೇಮಗೀತೆ ಮತ್ತು ವಿರಹ ಗೀತೆಗಳನ್ನೂ ‘ನಮಕ್‌ ಹಲಾಲ್‌’ನ ‘ರಾತ್‌ ಬಾಕಿ…’, ‘ಚಲ್ತೇ ಚಲ್ತೇ…’, ‘ಥೋಡಿ ಸಿ ಜೊ ಪೀ ಲಿ ಹೇ’, ‘ಕಿಸೀ ನಝರ್‌ ಕೊ ತೇರಾ’, ‘ಹಮ್‌ಕೊ ಆಜ್‌ ಕಲ್‌ ಹೇ’, ‘ಆಪ್‌ ಕಿ ಖಾತಿರ್‌’ ಸಿನಿಮಾದ ‘ಬಂಬಯಿ ಸೆ ಆಯಾ ಮೇರಾ ದೋಸ್ತ್‌’, ‘ಪ್ಯಾರ್‌ ಕಭೀ ಕಮ್‌ ನಹಿ ಕರ್ನಾ’, ‘ದಿಲ್‌ ಮೆ ಹೋ ತುಮ್‌’ ಮುಂತಾದ ಹಾಡುಗಳು ಈಗಲೂ ಎವರ್‌ಗ್ರೀನ್‌.

ಬಂಬಯಿ ಸೆ ಬೆಂಗಳೂರು…

ಕನ್ನಡಿಗರಿಗೆ ಬಪ್ಪಿ ಲಹರಿ ಎಂದರೆ ತಕ್ಷಣ ಅವರ ಚಿನ್ನದ ಒಡವೆಗಳೇ ನೆನಪಾಗುತ್ತವೆ. ಆದರೆ ಅವರು ಕನ್ನಡದ ಕೆಲವು ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರನ್ನು ಮುಂಬಯಿಯಿಂದ ಬೆಂಗಳೂರಿಗೆ ಕರೆತಂದ ಶ್ರೇಯಸ್ಸು ಹಿರಿಯ ನಟ ದ್ವಾರಕೀಶ್‌ಗೆ ಸಲ್ಲುತ್ತದೆ. 1986ರಲ್ಲಿ ತೆರೆಕಂಡ ಇವರ ನಿರ್ಮಾಣದ ‘ಆಫ್ರಿಕಾದಲ್ಲಿ ಶೀಲಾ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಬಪ್ಪಿ ದಾ. ಅದೇ ವರ್ಷ ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾಗೆ ಇವರು ಸಂಗೀತ ಸಂಯೋಜನೆ ಮಾಡಿದ ಹಾಡುಗಳೂ ಜನಪ್ರಿಯವಾಗಿದ್ದವು. 1991ರಲ್ಲಿ‘ಪೊಲೀಸ್‌ ಮತ್ತು ದಾದಾ’, 1989ರಲ್ಲಿ‘ಗುರು’ ಸಿನಿಮಾಗಳಿಗೆ ಸಂಗೀತ ನೀಡಿದ್ದ ಬಪ್ಪಿ 2014ರಲ್ಲಿ‘ಲವ್‌ ಇನ್‌ ಮಂಡ್ಯ’ ಸಿನಿಮಾದಲ್ಲಿ ಹಾಡಿದ್ದರು.



Read more

[wpas_products keywords=”deal of the day party wear dress for women stylish indian”]