Online Desk
‘ಕನ್ನಡತಿ’ ಧಾರಾವಾಹಿಯ ‘ಹರ್ಷ’ ಪಾತ್ರದ ಮೂಲಕ ಮನೆಮಾತಾಗಿರುವ ನಟ ಕಿರಣ್ ರಾಜ್, ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ಮಂಗಳಮುಖಿಯರಿಗೆ ನೆರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಂಗಳಮುಖಿಯರಿಗೆ ಆಹಾರ ಕಿಟ್, ಬೆಚ್ಚಗಿನ ಬೆಡ್ ಶೀಟುಗಳನ್ನು ವಿತರಿಸಿ ಅವರು ಸಹಕರಿಸಿದ್ದಾರೆ.
ಇದನ್ನೂ ಓದಿ: ಆರ್ಕಿಯಲಾಜಿಸ್ಟ್ ಪಾತ್ರದಲ್ಲಿ ಮಗಳು ಜಾನಕಿ ಗಾನವಿ ಲಕ್ಷ್ಮಣ್: ‘ಭಾವಚಿತ್ರ’ ಸಿನಿಮಾ ಈ ವಾರ ತೆರೆಗೆ
ಅಲ್ಲದೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಂಗಳಮುಖಿಯರಿಗೆ ಬಾಳೆ ಎಲೆ ಊಟ ನೀಡಿ ಅವರೊಂದಿಗೆ ಭೋಜನವನ್ನು ಸವಿದಿದ್ದಾರೆ ಕಿರಣ್. ಕೊರೊನಾ ಸಮಯದಲ್ಲೂ ಅವರು ಮಂಗಳಮುಖಿಯರು, ಆರ್ಥಿಕವಾಗಿ ಅಶಕ್ತರ ನೆರವಿಗೆ ಕಿರಣ್ ರಾಜ್ ನಿಂತಿದ್ದರು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಸೂರಿ-ಅಭಿಷೇಕ್ ಅಂಬರೀಷ್ ಕಾಂಬಿನೇಷನ್ ನ ‘ಬ್ಯಾಡ್ ಮ್ಯಾನರ್ಸ್’ ಶೂಟಿಂಗ್ ಮತ್ತೆ ಶುರು
ನಾವು ದುಡಿದಿದ್ದರಲ್ಲಿ ತಮ್ಮ ಜೀವನಕ್ಕೆ ಬೇಕದಷ್ಟನ್ನು ಮಾತ್ರ ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕು ಎನ್ನುವುದು ಕಿರಣ್ ರಾಜ್ ತತ್ವ.
ಇದನ್ನೂ ಓದಿ: ಡೈರೆಕ್ಟರ್ ಗುರುಪ್ರಸಾದ್ ಅಭಿನಯದ ‘ಬಾಡಿ ಗಾಡ್’ ಸಿನಿಮಾಗೆ ಪುನೀತ್ ರಾಜ್ ಕುಮಾರ್ ‘ಆರೇಸ ಡಂಕಣಕ’ ಹಾಡು
ಹೊರ ರಾಜ್ಯ ಹಾಗೂ ಊರುಗಳಿಂದ ಬಂದು ವಸತಿಯಿಲ್ಲದೆ ಫುಟ್ ಪಾತ್ ಆಶ್ರಯ ಪಡೆದಿರುವ ಹಲವಾರು ಮಂದಿಗೆ ಬೆಡ್ ಶೀಟ್ ಮುಂತಾದವುಗಳನ್ನು ತಮ್ಮ ಕಿರಣ್ ರಾಜ್ ಫೌಂಡೇಶನ್ ಮೂಲಕ ಹಂಚಿದ್ದಾರೆ.
ಇದನ್ನೂ ಓದಿ: ನಿವಿನ್ ಪೌಲಿ ಸಿನಿಮಾಗೆ ‘ಅವನೇ ಶ್ರೀಮನ್ನಾರಾಯಣ’ ನಟಿ ಶಾನ್ವಿ ಶ್ರೀವಾಸ್ತವ ನಾಯಕಿ: ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ
ದೇವರು ತಾನು ಎಲ್ಲಾ ಕಡೆ ಇರಲಾಗುವುದಿವೆಂದು ಕಿರಣ್ ರಾಜ್ ಥರದ ಒಳ್ಳೆಯ ಗುಣ ಇರುವವರನ್ನು ಈ ಭೂಮಿಗೆ ಕಳುಹಿಸಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಮಂಗಳಮುಖಿಯರು ಮನಸ್ಸಾರೆ ಹಾರೈಸಿದ್ದಾರೆ.
ಇದನ್ನೂ ಓದಿ: ಜಮೀರ್ ಪುತ್ರ ಝೈದ್ ಖಾನ್ ಸ್ಟಾರರ್ ‘ಬನಾರಸ್’ ಕನ್ನಡ ಸಿನಿಮಾ ನೂತನ ಪೋಸ್ಟರ್ ಬಿಡುಗಡೆ
ಕಿರುತೆರೆಯಷ್ಟೇ ಹಿರಿತೆರೆಯಲ್ಲೂ ಕಿರಣ್ ರಾಜ್ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ‘ಭರ್ಜರಿ ಗಂಡು’ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ.
Read more…
[wpas_products keywords=”party wear dress for women stylish indian”]