ದಾವಣಗೆರೆ: ಬೀರಬಲ್ ಖ್ಯಾತಿಯ ನಟ, ನಿರ್ದೇಶಕ ಶ್ರೀನಿ ಅವರ ‘ಓಲ್ಡ್ ಮಾಂಕ್’ ಚಿತ್ರ ಫೆ.25ರಂದು ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಮಂದಿರಗಳಲ್ಲಿ ತೆರೆಕಾಣಲಿದೆ.
ಬುಧವಾರ ಇಲ್ಲಿನ ಮೂವಿಟೈಮ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ಓಲ್ಡ್ ಮಾಂಕ್ ಎಂದರೆ ಕನ್ನಡಲ್ಲಿ ಹಳೇ ಸನ್ಯಾಸಿ ಎಂದರ್ಥ. ಚಿತ್ರದ ಕಥೆ ದೇವಲೋಕದಲ್ಲಿ ಶುರುವಾಗುತ್ತದೆ. ಶ್ರೀಕೃಷ್ಣ ಪರಮಾತ್ಮ ನಾರದನಿಗೆ ಶಾಪ ಕೊಡುತ್ತೇನೆ. ಆಗ ನಾರದ ಭೂಲೋಕಕ್ಕೆ ಬರುತ್ತಾನೆ. ಇಡೀ ಕಥೆಗೆ ನಾರದ ಮೂಲ. ನಾರದ ಸನ್ಯಾಸಿಯಾಗಿರುವುದರಿಂದ ‘ಓಲ್ಡ್ ಮಾಂಕ್’ ಎಂದು ಹೆಸರಿಡಲಾಗಿದೆ’ ಎಂದರು.
‘ಚಿತ್ರದ ಆರಂಭಕ್ಕೂ ಮುನ್ನ ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿ ಇಡೀ ರಾಜ್ಯದಾದ್ಯಂತ ಆಡಿಷನ್ ಮೂಲಕ ಹೊಸ ಪಾತ್ರಗಳನ್ನು ಆಯ್ಕೆ ಮಾಡಲಾಗಿದೆ. ಹೊಸ ಮುಖಗಳು ಕಾಣಿಸಿಕೊಂಷ್ಟೂ ಚಿತ್ರ ಹೊಸತನದಿಂದ ಕೂಡಿರುತ್ತದೆ. ದಾವಣಗೆರೆಯ ಮೂವಿಟೈಮ್ ಹಾಗೂ ತ್ರಿನೇತ್ರ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ನಾಯಕಿ ಆದಿತಿ ಪ್ರಭುದೇವ ದಾವಣಗೆರೆಯವರು’ ಎಂದರು.
‘ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ‘ಗಿಚ್ಚ ಗಿಲಿಗಿಲಿ’ ಹಾಡನ್ನು ಉತ್ತರ ಕರ್ನಾಟಕ ಶೈಲಿಯಲ್ಲಿಯೇ ರಚಿಸಲಾಗಿದೆ. ಚಿತ್ರದ ಟ್ರೇಲರ್ ಅನ್ನು ಪುನೀತ್ ರಾಜ್‌ಕುಮಾರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರವೂ ಮನರಂಜನಾ ಆಧರಿತ ಹಾಸ್ಯಪ್ರಧಾನ ಸಿನಿಮಾವಾಗಿದ್ದು, ಮನೆಮಂದಿಯೆಲ್ಲರೂ ಕುಳಿತು ಸಂಭ್ರಮಿಸಬಹುದು’ ಎಂದರು.
‘ಆದಿತಿ ಪ್ರಭುದೇವ ಚಿತ್ರದ ನಾಯಕಿಯಾಗಿರುವ ಈ ಚಿತ್ರದಲ್ಲಿ ಕಲಾತಪಸ್ವಿ ರಾಜೇಶ್, ಸುನಿಲ್ ರಾವ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಜಯ್ ಶಾಸ್ತ್ರಿ, ಎಸ್. ನಾರಾಯಣ್, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್ ಅವರ ತಾರಾಂಗಣವಿದೆ. ಸಂತೋಷ್ ನಂದಕುಮಾರ್, ಪ್ರಸನ್ನ, ನಾನು ಕಥೆ ಬರೆದಿದ್ದೇವೆ. ಪ್ರಸನ್ನ ವಿ.ಎಂ. ಸಂಭಾಷಣೆ ಬರೆದಿದ್ದು, ದೀಪು ಎಸ್ ಹಾಗೂ ಸೌರಭ್ ವೈಭವ್ ಅವರು ಸಂಗೀತದಲ್ಲಿ ಹಾಡುಗಳು ಮೆಚ್ಚುಗೆ ಗಳಿಸಿವೆ’ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆಯ ಕಲಾವಿದರಾದ ಗುರು, ರಾಜು, ತನ್ವೀರ್ ಇದ್ದರು.
Read More…Source link
[wpas_products keywords=”deal of the day party wear for men wedding shirt”]