Online Desk
ಬೆಂಗಳೂರು: ಹಿಜಾಬ್ ನಿರ್ಬಂಧ ವಿರುದ್ಧ ಹೋರಾಡುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮನೆ ವಿಳಾಸ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡ ರಾಜ್ಯ ಬಿಜೆಪಿ ವಿರುದ್ದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೆಪದಲ್ಲಿ ಈ ಪ್ರಕರಣದಲ್ಲಿ ದೂರುದಾರರಾದ ಆರು ವಿದ್ಯಾರ್ಥಿನಿಯರ ವಿಳಾಸ, ವಯಸ್ಸು, ತಂದೆ ತಾಯಿ ಹೆಸರು ಇತ್ಯಾದಿ ವಿವರಗಳಲ್ಲದೇ ಅವರ ಭಾವಚಿತ್ರಗಳನ್ನು ಕೂಡಾ ಹಂಚಿಕೊಳ್ಳಲಾಗಿತ್ತು. ನಂತರ ಡಿಲೀಟ್ ಮಾಡಲಾಗಿದೆ.
ಇದನ್ನೂ ಓದಿ: ‘ನಮ್ಮ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಅಷ್ಟೆ’: ಸೋಷಿಯಲ್ ಮೀಡಿಯಾದಲ್ಲಿ ವಿವರ ಬಹಿರಂಗಗೊಂಡ ವಿದ್ಯಾರ್ಥಿನಿಯರ ಪೋಷಕರ ಬೇಡಿಕೆ
‘ಹಿಜಾಬ್ ವಿವಾದದಲ್ಲಿ ತೊಡಗಿಸಿಕೊಂಡಿರುವ ಐವರು ವಿದ್ಯಾರ್ಥಿನಿಯರು ಅಪ್ರಾಪ್ತೆಯರು. ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಅವರು ರಾಜಕೀಯದಲ್ಲಿ ಪ್ರಸ್ತುತವಾಗಲು ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡಿರುವುದಕ್ಕೆ ಯಾವುದೇ ಅಪರಾಧವಿಲ್ಲವೇ? ಚುನಾವಣೆ ಗೆಲ್ಲಲು ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ? ಎಂದು ಟ್ವೀಟ್ ಮಾಡಲಾಗಿತ್ತು.
A Twitter account @BJP4Karnataka has shared personal details of minors girls from Karnataka including their house address. Isn’t it against policy? @DgpKarnataka @BlrCityPolice @CPBlr
Isn’t sharing house adress of minors against @Policy @TwitterIndia policy? #KatnatakaHijabRow pic.twitter.com/uiuuNeHuCT
— Mohammed Zubair (@zoo_bear) February 15, 2022
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಇದೇ ಇಮೇಜ್ ಹಂಚಿಕೊಂಡಿದ್ದರು. ನಂತರ ಡಿಲೀಟ್ ಮಾಡಲಾಗಿದೆ. ಈ ಟ್ವೀಟ್ ವಿರುದ್ಧ ಅನೇಕ ಟ್ವಿಟಿಗರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕರ್ನಾಟಕದ ಪೊಲೀಸ್, ಟ್ವೀಟರ್ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
Read more
[wpas_products keywords=”deal of the day”]