ಮಗಳ ತೋಳಲ್ಲಿ ಕುಸಿದ ಬಪ್ಪಿ ದಾ
ಅನಾರೋಗ್ಯದ ಕಾರಣದಿಂದ ಒಂದು ತಿಂಗಳ ಹಿಂದೆಯೇ ಬಪ್ಪಿ ಲಹಿರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಸೋಮವಾರವಷ್ಟೇ ಆಸ್ಪತ್ರೆಯಿಂದ ಬಪ್ಪಿ ಲಹಿರಿ ಡಿಸ್ಚಾರ್ಜ್ ಆಗಿದ್ದರು. ಆದರೆ, ಮಂಗಳವಾರ ಮತ್ತೆ ಬಪ್ಪಿ ಲಹಿರಿ ಅವರ ಹದಗೆಟ್ಟಿತು. ಆರೋಗ್ಯ ಸಮಸ್ಯೆಯಿಂದಾಗಿ ಬಪ್ಪಿ ಲಹಿರಿ ಚಿರನಿದ್ರೆಗೆ ಜಾರಿದರು.
ಕೊನೆಯುಸಿರೆಳೆಯುವ ಮುನ್ನ ಮಗಳು ರೀಮಾ ಲಹಿರಿ ಜೊತೆ ಬಪ್ಪಿ ಲಹಿರಿ ಮಾತನಾಡಿದ್ದರು. ಪುತ್ರಿ ರೀಮಾ ಲಹಿರಿಯ ತೋಳಲ್ಲೇ ಬಪ್ಪಿ ಲಹಿರಿ ಕುಸಿದುಬಿದ್ದಿದ್ದರು. ಬಪ್ಪಿ ಲಹಿರಿ ಅವರನ್ನು ಕಳೆದುಕೊಂಡ ಇಡೀ ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.
ಕೋವಿಡ್-19 ನಿಂದ ಬಪ್ಪಿ ಲಹಿರಿ ಚೇತರಿಸಿಕೊಳ್ಳಲೇ ಇಲ್ಲ!
ಕಳೆದ ವರ್ಷ.. ಅಂದ್ರೆ, 2021ರ ಏಪ್ರಿಲ್ ತಿಂಗಳಿನಲ್ಲಿ ಬಪ್ಪಿ ಲಹಿರಿ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಕೋವಿಡ್-19 ಪಾಸಿಟಿವ್ ಕಂಡುಬಂದ ಬಳಿಕ ಬಪ್ಪಿ ಲಹಿರಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಅಂದಿನಿಂದ ಅನಾರೋಗ್ಯ ಬಪ್ಪಿ ಲಹಿರಿ ಅವರಿಗೆ ಕಾಡುತ್ತಲೇ ಇತ್ತು.
ಇಂದು ಅಂತ್ಯ ಸಂಸ್ಕಾರ
ಬಪ್ಪಿ ಲಹಿರಿ ಅವರ ಅಂತ್ಯ ಸಂಸ್ಕಾರ ಇಂದು (ಫೆಬ್ರವರಿ 17 – ಗುರುವಾರ) ನಡೆಯಲಿದೆ. ಬಪ್ಪಿ ಲಹಿರಿಯ ಪುತ್ರ ಬಪ್ಪಾ ಲಹಿರಿ ಅಮೇರಿಕಾದಿಂದ ಮರಳಿದ್ದು, ಇಂದು ಅಂತಿಮ ವಿಧಿ ವಿಧಾನಗಳು ನೆರವೇರಲಿದೆ.
ಬಪ್ಪಿ ಲಹಿರಿ
ನವೆಂಬರ್ 27, 1952 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದವರು ಬಪ್ಪಿ ಲಹಿರಿ. ಇವರ ನಿಜನಾಮ ಅಲೋಕೇಶ್ ಲಹಿರಿ. ಸಂಗೀತದ ಕುಟುಂಬದಲ್ಲೇ ಹುಟ್ಟಿ ಬೆಳೆದ ಬಪ್ಪಿ ಲಹಿರಿ, ತಮ್ಮ ಮೂರನೇ ವಯಸ್ಸಿಗೇ ತಬಲ ಬಾರಿಸುವುದನ್ನು ಕಲಿತಿದ್ದರು. ಚಿಕ್ಕ ವಯಸ್ಸಿಗೇ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತ ಬಪ್ಪಿ ಲಹಿರಿ 70, 80 ಮತ್ತು 90ರ ದಶಕದಲ್ಲಿ ಡಿಸ್ಕೋ ಸಾಂಗ್ಸ್ ಮತ್ತು ಡ್ಯಾನ್ಸ್ ನಂಬರ್‌ಗಳನ್ನು ನೀಡಿ ಜನರ ಮನ ಗೆದ್ದಿದ್ದರು. ಬರೀ ಬಾಲಿವುಡ್‌ನಲ್ಲಿ ಮಾತ್ರವಲ್ಲ.. ಬೆಂಗಾಲಿ, ತಮಿಳು, ತೆಲುಗು, ಗುಜರಾತಿ ಮತ್ತು ಕನ್ನಡ ಚಿತ್ರಗಳಿಗೂ ಬಪ್ಪಿ ಲಹಿರಿ ಸಂಗೀತ ಸಂಯೋಜನೆ ಮಾಡಿದ್ದರು.
ಕನ್ನಡ ಚಿತ್ರರಂಗದ ನಂಟು
ದ್ವಾರಕೀಶ್ ನಿರ್ಮಿಸಿ, ನಿರ್ದೇಶಿಸಿದ್ದ ‘ಆಫ್ರಿಕಾದಲ್ಲಿ ಶೀಲಾ’ ಚಿತ್ರಕ್ಕೆ ಬಪ್ಪಿ ಲಹಿರಿ ಸಂಗೀತ ನೀಡಿದ್ದರು. 1986ರಲ್ಲಿ ತೆರೆಕಂಡ ‘ಆಫ್ರಿಕಾದಲ್ಲಿ ಶ್ರೀಲಾ’ ಸಿನಿಮಾದ ಮೂಲಕ ಮೊದಲ ಬಾರಿಗೆ ಬಪ್ಪಿ ಲಹಿರಿ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ವಿಷ್ಣುವರ್ಧನ್ ಅವರ ‘ಕೃಷ್ಣ ನೀ ಬೇಗನೇ ಬಾರೋ’, ‘ಪೊಲೀಸ್ ಮತ್ತು ದಾದಾ’, ಅಂಬರೀಷ್ ನಟಿಸಿದ್ದ ‘ಗುರು’ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಸತೀಶ್ ನೀನಾಸಂ ಹೀರೋ ಆಗಿದ್ದ ‘ಲವ್ ಇನ್ ಮಂಡ್ಯ’ ಚಿತ್ರದ ‘ಕರೆಂಟ್ ಹೋದ ಟೈಮಲಿ..’ ಹಾಡನ್ನು ಬಪ್ಪಿ ಲಹಿರಿ ಹಾಡಿದ್ದರು.
Read more
[wpas_products keywords=”deal of the day party wear dress for women stylish indian”]