Karnataka news paper

ಉಕ್ರೇನ್ ಬಿಕ್ಕಟ್ಟಿನ ನಡುವೆ ತಮ್ಮ ನೆಲೆಯತ್ತ ಕೆಲ ಪಡೆಗಳು ವಾಪಸ್- ರಷ್ಯಾ


The New Indian Express

ಮಾಸ್ಕೋ: ಉಕ್ರೇನ್ ಬಿಕ್ಕಟ್ಟಿನ ನಡುವೆ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ ಕೆಲವು ಸೇನಾಪಡೆಗಳು ತಮ್ಮ ಮೂಲನೆಲೆಗಳಿಗೆ ಮರಳುತ್ತಿರುವುದಾಗಿ ರಷ್ಯಾ ಮಂಗಳವಾರ ಹೇಳಿದೆ. ಆದಾಗ್ಯೂ, ವಾಪಸ್ಸಾತಿ  ಕುರಿತು ಯಾವುದೇ ವಿವರಣೆ ನೀಡಿಲ್ಲ.

ಉಕ್ರೇನ್ ಬಿಕ್ಕಟ್ಟಿಗೆ ಕಾರಣವಾಗಿದ್ದ ಭದ್ರತಾ ಕುಂದುಕೊರತೆ  ಬಗ್ಗೆ ಮಾತನಾಡಲು ದೇಶ ಸಿದ್ಧವಿರುವುದಾಗಿ ರಷ್ಯಾ ವಿದೇಶಾಂಗ ಹೇಳಿದ ಮಾರನೇ ದಿನವೇ ಈ ರೀತಿಯ ಘೋಷಣೆಯನ್ನು ರಷ್ಯಾ ಮಾಡಿದೆ. ಯಾವುದೇ ಕ್ಷಣದಲ್ಲಾದರೂ ಆಕ್ರಮಣ ಎದುರಾಗಬಹುದೆಂದು ಈಗಲೂ ಪಾಶ್ಚಿಮಾತ್ಯ ಅಧಿಕಾರಿಗಳು ಎಚ್ಚರಿಕೆಯನ್ನು ಮುಂದುವರೆಸಿದ್ದಾರೆ. ಕೆಲ ಪಡೆಗಳು ಮತ್ತು ಮಿಲಿಟರಿ ಗಡಿ ಕಡೆಗೆ ಬರುತ್ತಿರುವುದಾಗಿ ಹೇಳುತ್ತಿದ್ದಾರೆ. 

ಇದನ್ನೂ ಓದಿ: ಪರಿಸ್ಥಿತಿ ತುಂಬಾ ಸೂಕ್ಷ್ಮ: ಉಕ್ರೇನ್ ವಿಚಾರವಾಗಿ ರಷ್ಯಾ ಬೆಂಬಲಕ್ಕೆ ನಿಂತ ಚೀನಾ ವಿರುದ್ಧ ಅಮೆರಿಕ ಆಕ್ರೋಶ

ನಿಯೋಜಿತ ಪಡೆಗಳು ತಮ್ಮ ನೆಲೆಗೆ ಮರಳುತ್ತಿವೆಯೇ ಅಥವಾ ಎಷ್ಟು ಮಂದಿ ಜಾಗ ತೊರೆಯುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ ಎಂದು ರಷ್ಟಾ ರಕ್ಷಣಾ ಸಚಿವಾಲಯ ಹೇಳಿದೆ. ಜರ್ಮನಿ ಛಾನ್ಸಲರ್ ಓಲಾಫ್ ಸ್ಕೋಜ್ ಉಕ್ರೇನ್ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾಗಲು ಯೋಜಿಸಿದ್ದಾರೆ. 

ಇದನ್ನೂ ಓದಿ: ಉಕ್ರೇನ್-ರಷ್ಯಾ ಬಿಕ್ಕಟ್ಟು ತೀವ್ರ: ಉಕ್ರೇನ್ ತೊರೆಯುವಂತೆ ತನ್ನ ದೇಶದ ನಾಗರಿಕರಿಗೆ ಭಾರತ ಸೂಚನೆ

ಉಕ್ರೇನ್ ಮತ್ತಿತರ ಮಾಜಿ ಸೋವಿಯತ್ ರಷ್ಯಾಗಳನ್ನು ನ್ಯಾಟೋ ತನ್ನ ಸದಸ್ಯರನ್ನಾಗಿ ಮಾಡುವುದಿಲ್ಲ ಎಂಬ ಖಾತ್ರಿಯನ್ನು ಮಾಸ್ಕೋ ಬಯಸಿದೆ. ಈ ಬಗ್ಗೆ ಅಮೆರಿಕ ಮೃಧುವಾಗಿ ಪ್ರತಿಕ್ರಿಯಿಸಿದೆ. ರಷ್ಯಾ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಆಯ್ಕೆ ಮಾಡಿದರೆ ರಾಯಭಾರತ್ವದ ದಾರಿ ಲಭ್ಯವಾಗಲಿದೆ ಎಂದು ಶ್ವೇತ ಭವನ ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿದ್ದಾರೆ.



Read more

[wpas_products keywords=”deal of the day”]