Karnataka news paper

ಸ್ನ್ಯಾಪ್‌ಚಾಟ್‌ ಸೇರಿದ ಈ ಹೊಸ ಫೀಚರ್ಸ್‌ನಿಂದ ನೀವು ಹಣಗಳಿಸಬಹುದು!


ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಇದೀಗ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದರ ಮೂಲಕ ಕಂಟೆಂಟ್‌ ಕ್ರಿಯೆಟರ್ಸ್‌ಗಳು ಹಣ ಗಳಿಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಬಳಕೆದಾರರು ಶೇರ್‌ ಮಾಡುವ ಸ್ಟೋರಿಗಳ ಮಧ್ಯದಲ್ಲಿ ಗೋಚರಿಸುವ ಜಾಹೀರಾತುಗಳನ್ನು ಪರೀಕ್ಷಿಸಲು ಮುಂದಾಗಿದೆ. ಇದರಿಂದ ಕ್ರಿಯೆಟರ್ಸ್‌ಗಳ ವೀಡಿಯೋಗಳನ್ನು ಪ್ರೇಕ್ಷಕರು ವೀಕ್ಷಿಸುವಾಗ ಜಾಹಿರಾತುಗಳ ವೀಕ್ಷಣೆ ಕೂಡ ಅಧಿಕವಾಗಲಿದೆ. ಇದರಿಂದ ಬಳಕೆದಾರರು ಆದಾಯಗಳಿಸಲು ಸಾಧ್ಯವಾಗಲಿದೆ. ಹಾಗಾದ್ರೆ ಬಳಕೆದಾರರು ಸ್ನ್ಯಾಪ್‌ಚಾಟ್‌ ಮೂಲಕ ಹಣಗಳಿಸುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನ್ಯಾಪ್‌ಚಾಟ್‌ನ

ಸ್ನ್ಯಾಪ್‌ಚಾಟ್‌ನ ಹೊಸ ಫೀಚರ್ಸ್‌ ಇದೀಗ ಸ್ನ್ಯಾಪ್ ಸ್ಟಾರ್‌ಗಳಿಗೆ ಲಭ್ಯವಿದೆ. ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಪರಿಶೀಲಿಸಿದ ಕ್ರಿಯೆಟರ್ಸ್‌ಗಳಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ. ಇವರುಗಳು ಅಕೌಂಟ್‌ ಅನ್ನು ಗೋಲ್ಡನ್‌ ಸ್ಟಾರ್‌ ಮೂಲಕ ಸೂಚಿಸಲಾಗುತ್ತದೆ. ಸದ್ಯ ಈ ಫೀಚರ್ಸ್‌ ಯುಎಸ್‌ನಲ್ಲಿ ಕೆಲವು ಖಾತೆಗಳಿಗೆ ಮಾತ್ರ ಸೀಮಿತವಾಗಿದೆ. ಮುಂಬರುವ ತಿಂಗಳುಗಳಲ್ಲಿ ಈ ಫೀಚರ್ಸ್‌ ಎಲ್ಲರಿಗೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇದರಿಂದ ಸ್ನ್ಯಾಪ್‌ಚಾಟ್ ಕ್ರಿಯೆಟರ್ಸ್‌ ಸ್ಟೋರಿಗಳಲ್ಲಿನ ಜಾಹೀರಾತು ಆದಾಯದಿಂದ ಹಣವನ್ನು ಗಳಿಸಲು ಇದರಿಂದ ಸಾಧ್ಯವಾಗುತ್ತದೆ.

ಸ್ನ್ಯಾಪ್‌ಚಾಟ್‌ನಲ್ಲಿ

ಹಾಗಂತ ಸ್ನ್ಯಾಪ್‌ಚಾಟ್‌ನಲ್ಲಿ ಹಣಗಳಿಸುವುದಕ್ಕೆ ಇದೇ ಮೊದಲ ಅವಕಾಶವೇನಲ್ಲ. ಈ ಹಿಂದೆಯೇ ಸ್ನ್ಯಾಪ್‌ಚಾಟ್‌ ಸ್ಟೋರಿಗಳ ನಡುವೆ ಮತ್ತು ಡಿಸ್ಕವರ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳ ಮೂಲಕ ಅಪ್ಲಿಕೇಶನ್‌ನಲ್ಲಿ ಹಣಗಳಿಸಲು ಕ್ರಿಯೆಟರ್ಸ್‌ಗಳಿಗೆ ಅಪ್ಲಿಕೇಶನ್ ಅವಕಾಶ ಮಾಡಿಕೊಟ್ಟಿತು. ಸದ್ಯ ಈ ಹೊಸ ಫೀಚರ್ಸ್‌ ಸ್ನ್ಯಾಪ್‌ಚಾಟ್‌ ಬಳಕೆದಾರರ ಪ್ರಮುಖ ಪ್ರವೃತ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ಸದ್ಯ ಸ್ನ್ಯಾಪ್‌ಚಾಟ್ ತನ್ನ ಕ್ರಿಯೆಟರ್ಸ್‌ಗಳನ್ನು ಉಳಿಸುಕೊಳ್ಳುವುದಕ್ಕಾಗಿ ಈ ರೀತಿಯ ಟ್ರಿಕ್ಸ್‌ಗಳನ್ನು ಪ್ರಯೋಗಿಸುತ್ತಿದೆ. ಕಂಟೆಂಟ್ ಕ್ರಿಯೆಟರ್ಸ್‌ಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅವರನ್ನು ಪ್ರೋತ್ಸಾಹಿಸುವುದಕ್ಕೆ ಮುಂದಾಗಿದೆ.

ಸ್ನ್ಯಾಪ್‌ಚಾಟ್

ಇನ್ನು ಸ್ನ್ಯಾಪ್‌ಚಾಟ್ ಈಗಾಗಲೇ ತನ್ನ ಬಳಕೆದಾರರಿಗಾಗಿ ಕಳೆದ ವರ್ಷ ಹೊಸ ಕ್ರಿಯೇಟರ್ ಹಬ್ ಅನ್ನು ಕೂಡ ಪರಿಚಯಿಸಿತ್ತು. ಇದರಿಂದ ಸ್ನ್ಯಾಪ್ ಸ್ಟಾರ್‌ಗಳು ಮತ್ತು ಕ್ರಿಯೆಟರ್ಸ್‌ ತಮ್ಮ ಪಬ್ಲಿಕ್‌ ಸ್ಟೋರೀಸ್, ಪ್ಲೇ ಮತ್ತು ಡಿಸ್ಕವರ್‌ನಲ್ಲಿ ಸ್ನ್ಯಾಪ್ ಒರಿಜಿನಲ್ಸ್ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ. ಈ ಕ್ರಿಯೇಟರ್ ಹಬ್ ಬಳಕೆದಾರರಿಗೆ ವಿಷಯ ತಂತ್ರವನ್ನು ಹೇಗೆ ಕ್ರಿಯೆಟ್‌ ಮಾಡುವುದು. ಸ್ನ್ಯಾಪ್‌ಚಾಟ್‌ ನಲ್ಲಿ ಹೊಸ ವಿಷಯದ ಮೇಲೆ ಹೆಚ್ಚು ಟ್ರಾಫಿಕ್ ಪಡೆಯುವುದಕ್ಕೆ ಹಾಗೂ ಪ್ರೇಕ್ಷಕರನ್ನು ವಿಶ್ಲೇಷಣೆ ಮಾಡುವುದು ಹೇಗೆ ಅನ್ನೊದ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಸ್ನ್ಯಾಪ್‌ಚಾಟ್‌ ಕ್ರಿಯೇಟರ್‌ ಹಬ್‌ ಸ್ಥಳಿಯ ಭಾಷೆಗಳನ್ನು ಬೆಂಬಲಿಸುವದರಿಂದ ಶೈಕ್ಷಣಿಕ ಮಾಹಿತಿ ಪಡೆಯುವುದು ಸುಲಭವಾಗಿದೆ. ನಿಮಗೆ ವೀಡಿಯೋಗಳಲ್ಲಿ ಬಳಕೆದಾರರಿಗೆ ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಆಪ್‌ನಲ್ಲಿನ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಸ್ನ್ಯಾಪ್‌ ಕ್ರಿಯೆಟರ್‌ ಹಂಚಿಕೊಳ್ಳುವ ವಿಡಿಯೋಗಳಿಗೆ ಪ್ರೇಕ್ಷಕರ್‌ ಟ್ರಾಫಿಕ್‌ ಪಡೆಯುವುದು ಸುಲಭವಾಗಲಿದೆ. ಈ ಮೂಲಕ ವಿಡಿಯೋಗಳನ್ನುಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ಸಾದ್ಯವಾಗಲಿದೆ.



Read more…

[wpas_products keywords=”smartphones under 15000 6gb ram”]