PTI
ಮುಂಬೈ: ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ವಿರುದ್ಧ ಹಾಜರಾತಿ ವಾರೆಂಟ್ ವೊಂದನ್ನು ಮುಂಬೈ ನ್ಯಾಯಾಲಯ ಬುಧವಾರ ಹೊರಡಿಸಿದೆ.
ಆರೋಪಿ ಬೆಂಗಾವಲಿಗೆ ಇಡಿ ಎಲ್ಲಾ ವ್ಯವಸ್ಥೆ ಮಾಡಲಿದ್ದು, ಫೆಬ್ರವರಿ 18 ರಂದು ನ್ಯಾಯಾಲಯದ ಮುಂದೆ ಆತನನ್ನು ಹಾಜರುಪಡಿಸಬೇಕೆಂದು ವಿಶೇಷ ನ್ಯಾಯಾಧೀಶ ಎಂಜಿ ದೇಶಪಾಂಡೆ ಹೇಳಿದ್ದಾರೆ. ಸುಲಿಗೆ ಪ್ರಕರಣದಲ್ಲಿ ತನಿಖಾ ಏಜೆನ್ಸಿ ಮತ್ತೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ ಎಂದು ಕೋರ್ಟ್ ಹೇಳಿದೆ.
ಹಣ ವರ್ಗಾವಣೆ ತನಿಖೆಯ ಭಾಗವಾಗಿ ಭೂಗತ ಜಗತ್ತಿನ ಕಾರ್ಯಾಚರಣೆಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳ ಬಗ್ಗೆ ಮುಂಬೈನಲ್ಲಿ ಅನೇಕ ಕಡೆಗಳಲ್ಲಿ ಶೋಧಗಳನ್ನು ನಡೆಸಿದ ಒಂದು ದಿನದ ನಂತರ ಕಸ್ಕರ್ ವಿಚಾರಣೆಗೆ ಇಡಿ ಮುಂದಾಗಿದೆ. 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂನ ದಿವಂಗತ ಸಹೋದರಿ ಹಸೀನಾ ಪಾರ್ಕರ್, ಕಸ್ಕರ್ ಮತ್ತು ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸೋದರ ಸಂಬಂಧಿ ಸೇರಿದಂತೆ 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಭೂಗತ ಪಾತಕಿ ಇಬ್ರಾಹಿಂ ಮತ್ತು ಇತರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಇಡಿ ಪ್ರಕರಣವನ್ನು ಆಧರಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್‌ಗಳ ಅಡಿಯಲ್ಲಿ ಎನ್‌ಐಎ ತನ್ನ ಕ್ರಿಮಿನಲ್ ದೂರು ದಾಖಲಿಸಿದೆ.
Read more
[wpas_products keywords=”deal of the day”]