Karnataka news paper

ಸನ್‌ರೈಸರ್ಸ್‌ ಕ್ಯಾಪ್ಟನ್‌ ಕೇನ್‌ಗೆ ಮನಮುಟ್ಟುವ ಸಂದೇಶ ಬರೆದ ವಾರ್ನರ್!


ಬೆಂಗಳೂರು: ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮಾಜಿ ನಾಯಕ ಡೇವಿಡ್‌ ವಾರ್ನರ್‌, ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಬ್ಯಾಟ್‌ ಬೀಸಲಿದ್ದಾರೆ. ಈ ಸಂದರ್ಭದಲ್ಲಿ ಸನ್‌ರೈಸರ್ಸ್‌ನ ನೂತನ ಕಪ್ತಾನ ಕೇನ್‌ ವಿಲಿಯಮ್ಸನ್‌ಗೆ ವಾರ್ನರ್‌ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ.

ಐಪಿಎಲ್‌ 2022 ಟೂರ್ನಿ ಸಲುವಾಗಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆಸೀಸ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರನ್ನು 6.5 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿತು. ಈ ಮೂಲಕ ಬರೋಬ್ಬರಿ 9 ವರ್ಷಗಳ ನಂತರ ವಾರ್ನರ್‌ ದಿಲ್ಲಿ ತಂಡಕ್ಕೆ ಮರಳಿ ಸೇರ್ಪಡೆ ಆಗಿದ್ದಾರೆ. ದಿಲ್ಲಿ ತಂಡದ ಪರ 2009ರಿಂದ 5 ವರ್ಷಗಳ ಕಾಲ ಆಡಿದ್ದ ವಾರ್ನರ್‌, 1435 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 9 ಫಿಫ್ಟಿ ಮತ್ತು 2 ಸೆಂಚುರಿ ಸೇರಿದೆ.

ಅಂದಹಾಗೆ ವಾರ್ನರ್‌, ಹೈದರಾಬಾದ್‌ ತಂಡದಲ್ಲಿ ಬರೋಬ್ಬರಿ 8 ವರ್ಷಗಳ ಕಾಲ ಆಡಿದ್ದಾರೆ. ಅಷ್ಟೇ ಅಲ್ಲದೆ ವಾರ್ನರ್‌ ನಾಯಕತ್ವದ ಅಡಿಯಲ್ಲಿ ಸನ್‌ರೈಸರ್ಸ್‌ ತಂಡ 2016ರ ಆವೃತ್ತಿಯಲ್ಲಿ ಚಾಂಪಿಯನ್ಸ್‌ ಆಗಿಯೂ ಹೊರಹೊಮ್ಮಿತ್ತು. ಆದರೆ, ಟೀಮ್‌ ಮ್ಯಾನೇಜ್ಮೆಂಟ್‌ ಜೊತೆಗಿನ ಕಿತ್ತಾಟ ಮತ್ತು ಕಳಪೆ ಲಯ ಕಾರಣ ಐಪಿಎಲ್‌ 2021 ಟೂರ್ನಿಯ ಮಧ್ಯದಲ್ಲೇ ಸನ್‌ರೈಸರ್ಸ್‌ ತಂಡ ನಾಯಕತ್ವ ಕಳೆದುಕೊಂಡ ವಾರ್ನರ್‌, ತಂಡದ ಆಡುವ ಹನ್ನೊಂದರ ಬಳಗದಿಂದಲೂ ಹೊರಬಿದ್ದರು. ಅವರ ಜಾಗದಲ್ಲಿ ಕಿವೀಸ್‌ ತಾರೆ ಕೇನ್‌ ವಿಲಿಯಮ್ಸನ್‌ ಎಸ್‌ಆರ್‌ಎಚ್‌ ತಂಡದ ನಾಯಕತ್ವ ವಹಿಸಿಕೊಂಡರು.

ಧವನ್‌ ಬೇಡ, ಪಂಜಾಬ್‌ ಕಿಂಗ್ಸ್‌ಗೆ ‘ಕನ್ನಡಿ’ಗನ ಕ್ಯಾಪ್ಟನ್‌ ಮಾಡಿ ಎಂದ ಗವಾಸ್ಕರ್‌!

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳಲ್ಲಿ ಎದುರಾಳಿಗಳಾಗಿ ಹಲವು ವರ್ಷಗಳ ಕಾಲ ಆಡಿರುವ ವಾರ್ನರ್‌ ಮತ್ತು ವಿಲಿಯಮ್ಸನ್‌ ಸನ್‌ರೈಸರ್ಸ್‌ ತಂಡದಲ್ಲಿ ಜೊತೆಯಾಗಿ ಆಡಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೀಗ ಹೊಸ ತಂಡ ಸೇರುವ ಮುನ್ನ ತಮ್ಮ ಮಾಜಿ ತಂಡ ಆಪ್ತ ಜೊತೆಗಾರ ವಿಲಿಯಮ್ಸನ್‌ಗೆ ವಾರ್ನರ್‌ ಮನಮುಟ್ಟುವ ಸಂದೇಶ ಒಂದನ್ನು ಇನ್‌ಸ್ಟಾಗ್ರಾಮ್‌ ಮೂಲಕ ರವಾನಿಸಿದ್ದಾರೆ.

“ಬ್ರೇಕ್‌ಫಾಸ್ಟ್‌ ಸಮಯದಲ್ಲಿ ಕೇನ್‌ ವಿಲಿಯಮ್ಸನ್‌ ಜೊತೆಗೆ ಕಳೆಯುತ್ತಿದ್ದ ಸಮಯದ ನೆನಪು ಬಹಳಾ ಕಾಡಲಿದೆ. ಸಹೋದರ ನಿನ್ನ ಜೊತೆಗೆ ಸೇರಿ ಕ್ರಿಕೆಟ್‌ ಆಡುವ ಸಮಯ ಕೂಡ ಬಹಳಾ ಕಾಡುತ್ತದೆ,” ಎಂದು ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ ಗೋಡೆಯ ಮೇಲೆ ಬರೆದಿದ್ದಾರೆ. ಐಪಿಎಲ್‌ 2022 ಟೂರ್ನಿ ಸಲುವಾಗಿ ಸನ್‌ರೈಸರ್ಸ್‌ ತಂಡ ವಿಲಿಯಮ್ಸನ್‌ ಅವರನ್ನ ತನ್ನ ಕ್ಯಾಪ್ಟನ್‌ ಆಗಿ 15 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಉಳಿಸಿಕೊಂಡಿದೆ. ಅವರೊಟ್ಟಿಗೆ ಇಬ್ಬರು ಯುವ ಆಟಗಾರರಾದ ಅಬ್ದುಲ್‌ ಸಮದ್‌ ಮತ್ತು ಉಮ್ರಾನ್‌ ಮಲಿಕ್‌ ಅವರನ್ನು 4 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು.


ಇನ್ನು ಹರಾಜಿನಲ್ಲಿ 68 ಕೋಟಿ ರೂ. ಪರ್ಸ್‌ ಮೊತ್ತದೊಂದಿಗೆ ಪಾಲ್ಗೊಂಡಿದ್ದ ಸನ್‌ರೈಸರ್ಸ್‌ ಹೈದರಾಬಾದ್, 67.9 ಕೋಟಿ ರೂ. ಖರ್ಚು ಮಾಡಿ 20 ಆಟಗಾರರನ್ನು ಖರೀದಿ ಮಾಡಿದೆ. ನಿಕೋಲಸ್‌ ಪೂರನ್‌ (10.75 ಕೋಟಿ ರೂ.), ರಾಹುಲ್‌ ತ್ರಿಪಾಠಿ (8.5 ಕೋಟಿ ರೂ.), ವಾಷಿಂಗ್ಟನ್‌ ಸುಂದರ್‌ (8.75 ಕೋಟಿ ರೂ.) ಮತ್ತು ರೊಮಾರಿಯೊ ಶೆಫರ್ಡ್‌ (7.75 ಕೋಟಿ ರೂ.) ಮತ್ತು ಭುವನೇಶ್ವರ್‌ ಕುಮಾರ್‌ (4.2 ಕೋಟಿ ರೂ.) ಅವರನ್ನು ಸನ್‌ರೈಸರ್ಸ್‌ ಈ ಬಾರಿ ಭಾರಿ ಬೆಲೆಗೆ ಖರೀದಿ ಮಾಡಿದೆ.

IPL: 10 ತಂಡಗಳಲ್ಲಿ ಕರ್ನಾಟಕದ 16 ಆಟಗಾರರು, ಹರಾಜು ಹಣದಲ್ಲಿ ‘ಕನ್ನಡಿಗರಿಗೆ ಸಿಂಹಪಾಲು’!

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಹೀಗಿದೆ
ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ನಿಕೋಲಸ್ ಪೂರನ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಪ್ರಿಯಮ್ ಗರ್ಗ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್, ರೊಮಾರಿಯೊ ಶೆಫರ್ಡ್, ಶೇನ್‌ ಅಬಾಟ್, ಆರ್ ಸಮರ್ಥ್, ಶಶಾಂಕ್ ಸಿಂಗ್, ಸೌರಭ್ ದುಬೆ, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹೀಗಿದೆ
ಪೃಥ್ವಿ ಶಾ, ಎನ್ರಿಕ್ ನಾರ್ಕಿಯ, ರಿಷಭ್ ಪಂತ್ (ನಾಯಕ), ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದುಲ್ ಠಾಕೂರ್, ಮುಸ್ತಾಫಿಝುರ್ ರೆಹಮಾನ್, ಕುಲ್ದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಝ್ ಖಾನ್, ಕಮಲೇಶ್ ನಾಗರಕೋಟಿ, ಕೆ.ಎಸ್. ಭರತ್, ಮಂದೀಪ್ ಸಿಂಗ್, ಖಲೀಲ್ ಸಕಾರಿಯಾ, ಲಲಿತ್ ಯಾದವ್, ರಿಪಲ್ ಪಟೇಲ್, ಯಶ್ ಧುಲ್, ರೋವ್ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್ಗಿಡಿ, ಟಿಮ್ ಸೀಫರ್ಟ್, ವಿಕಿ ಓಸ್ತ್ವಾಲ್.





Read more

[wpas_products keywords=”deal of the day gym”]