Karnataka news paper

ಪ್ರಧಾನಿ ಝೆಲೆನ್‌ಸ್ಕಿ ಹೇಳಿಕೆ ಬೆನ್ನಲ್ಲೇ ಉಕ್ರೇನ್ ಮೇಲೆ ದಾಳಿ!; ಸೇನಾ ದಾಳಿಯಲ್ಲ… ಸೈಬರ್ ದಾಳಿ!


Reuters

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಲಿದೆ ಎಂಬ ಪ್ರಧಾನಿ ಝೆಲೆನ್‌ಸ್ಕಿ ಹೇಳಿಕೆ ಬೆನ್ನಲ್ಲೇ ಉಕ್ರೇನ್ ಮೇಲೆ ದಾಳಿಯಾಗಿದ್ದು, ಇದು ಸೇನಾ ದಾಳಿಯಲ್ಲ.. ಬದಲಿಗೆ ಸೈಬರ್ ದಾಳಿ ಮಾಡಲಾಗಿದೆ.

ಹೌದು.. ಮಂಗಳವಾರ ಉಕ್ರೇನ್ ಸರ್ಕಾರಿ ಏಜೆನ್ಸಿಗಳು ಮತ್ತು ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ಅಟ್ಯಾಕ್ ಮಾಡಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್ ಅನ್ನು ಗುರಿಯಾಗಿಸಿಕೊಂಡು ಹಲವಾರು ಹ್ಯಾಕಿಂಗ್ ಕಾರ್ಯಾಚರಣೆಗಳು ನಡೆದಿದ್ದು, ಸರ್ಕಾರಿ ಬ್ಯಾಂಕ್ ಗಳು ಮತ್ತು ಸರ್ಕಾರಿ ಏಜೆನ್ಸಿಗಳ ಮೇಲೆ ಸೈಬರ್ ದಾಳಿ ಮಾಡಲಾಗಿದೆ. ಉಕ್ರೇನ್ ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಸೇರಿದಂತೆ ಉಕ್ರೇನ್‌ನ ಎರಡು ದೊಡ್ಡ ಸ್ಟೇಟ್ ಬ್ಯಾಂಕ್‌ಗಳು ಸೇರಿದಂತೆ DDOS ದಾಳಿಯಿಂದಾಗಿ ಕನಿಷ್ಠ 10 ಉಕ್ರೇನಿಯನ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ.

ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟಿನ ನಡುವೆ ತಮ್ಮ ನೆಲೆಯತ್ತ ಕೆಲ ಪಡೆಗಳು ವಾಪಸ್- ರಷ್ಯಾ

ಉಕ್ರೇನ್‌ನ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್, Privatbank ಮತ್ತು ಸರ್ಕಾರಿ ಸ್ವಾಮ್ಯದ Sberbank ನಲ್ಲಿ ಗ್ರಾಹಕರು ಆನ್‌ಲೈನ್ ಪಾವತಿಗಳು ಮತ್ತು ಬ್ಯಾಂಕ್‌ಗಳ ಅಪ್ಲಿಕೇಶನ್‌ಗಳೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. 

ನಿನ್ನೆಯಷ್ಟೇ ಉಕ್ರೇನ್ ಪ್ರಧಾನಿ ಝೆಲೆನ್‌ಸ್ಕಿ ಫೇಸ್  ಬುಕ್ ನಲ್ಲಿ ವಿಡಿಯೋ ಮಾಡಿ ರಷ್ಯಾ ದಾಳಿ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಸೇನಾದಾಳಿಯನ್ನು ತಳ್ಳಿಹಾಕಿದ್ದ ರಷ್ಯಾ ಯುದ್ಥ ನಮಗೂ ಬೇಕಿಲ್ಲ ಎಂದು ಹೇಳಿತ್ತು. ರಷ್ಯಾದ ಹೇಳಿಕೆ ಬೆನ್ನಲ್ಲೇ ಈ ಸೈಬರ್ ದಾಳಿಯಾಗಿದೆ. 



Read more

[wpas_products keywords=”deal of the day”]