Karnataka news paper

ಬಿಪಿಎಲ್‌ ಕಾರ್ಡ್‌ ಅಡ ಇಟ್ಟರೆ ಬಡ್ಡಿಗೆ ಹಣ..! ಕೋಲಾರದ ನ್ಯಾಯಬೆಲೆ ಅಂಗಡಿಗಳಲ್ಲೇ ಅನ್ಯಾಯ..?


ಕೋಲಾರ:ಕೋಲಾರ ನಗರದಲ್ಲಿ ಬಿಪಿಎಲ್‌ ಕಾರ್ಡ್‌ಗಳನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಅಡವಿಟ್ಟುಕೊಂಡು ಬಡವರಿಗೆ ಕೆಲವರು ಬಡ್ಡಿಗೆ ಹಣ ನೀಡುತ್ತಿದ್ದು, ಸರಕಾರದಿಂದ ನೀಡುವ ಪಡಿತರ ಜನರಿಗೆ ಸಿಗದಂತೆ ಮಾಡುತ್ತಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್‌ ಆರೋಪಿಸಿದರು.

ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಡಿತರ ಅಕ್ಕಿಯನ್ನು ದುರ್ಬಳಕೆ ಮಾಡಿಕೊಳ್ಳುವ ದಂಧೆ ನಗರದಲ್ಲಿ ಸಕ್ರಿಯವಾಗಿದ್ದು, ಅಡವಿಟ್ಟುಕೊಂಡಿರುವ ಚೀಟಿಗೆ ಬರುವ ಅಕ್ಕಿಯನ್ನು ಅವರೇ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬಡವರ ತುತ್ತಿನ ಚೀಲಕ್ಕೆ ಉಳ್ಳವರ ಕನ್ನ; ಆಹಾರ ಇಲಾಖೆಯಿಂದ ಪ್ರತಿ ವರ್ಷ ಪೆನಾಲ್ಟಿ!
ನಗರಸಭೆ ಸದಸ್ಯರಿಗೆ ಮಾಹಿತಿ ಇಲ್ಲ: ನಗರದಲ್ಲಿರುವ ಪ್ರತಿಯೊಂದು ವಾರ್ಡ್‌ ನ್ಯಾಯ ಬೆಲೆ ಅಂಗಡಿಗಳಿಗೆ ಸರಕು ಬಂದಾಗ ಹಾಗೂ ಸಾರ್ವಜನಿಕರಿಗೆ ಹಂಚಿಕೆಯಾಗುವುದನ್ನು ಕಾನೂನಿನಂತೆ ನಗರಸಭೆಯ ಸದಸ್ಯರು ಪ್ರಮಾಣೀಕರಿಸಬೇಕು. ಆದರೆ, ನಗರಸಭೆಯ ಸದಸ್ಯರಿಗೆ ಯಾರೂ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಸ್ಥಳಾಂತರಕ್ಕೆ ವಿರೋಧ: ಈ ವೇಳೆ ಮಾತನಾಡಿದ ಮುರಳಿ ಗೌಡ ಅವರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ನಗರ ಭಾಗದ ಶಾಖೆಯನ್ನು ನಗರದಿಂದ 8 ಕಿ. ಮೀ. ದೂರದಲ್ಲಿರುವ ಜಿಲ್ಲಾಡಳಿತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಇದರಿಂದಾಗಿ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಹೇಳಿ ಕೊಳ್ಳಬೇಕಾದರೆ ಜನರು 150 – 200 ರೂ. ಖರ್ಚು ಮಾಡಿಕೊಂಡು ಹೋಗಬೇಕಾಗಿದೆ ಎಂದು ದೂರಿದರು.

ಮುಬಾಕರ್‌ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ನಗರ ಕಚೇರಿಯನ್ನು ತಹಸೀಲ್ದಾರ್‌ ಕಚೇರಿಗೆ ಸ್ಥಳಾಂತರ ಮಾಡುವಂತೆ ಅಧ್ಯಕ್ಷರು, ಜಿಲ್ಲಾಧಿಕಾರಿಗಳನ್ನು ಕೋರಬೇಕು. ಆ ಮೂಲಕ ಜನರಿಗೆ ಸುಲಭವಾಗಿ ಸರಕಾರಿ ಸೇವೆಗಳನ್ನು ದೊರೆಯುವಂತೆ ಮಾಡಬೇಕು ಎಂದು ಕೋರಿದರು.

ಅದಕ್ಕೆ ಸ್ಪಂದಿಸಿದ ಅಧ್ಯಕ್ಷೆ ಆರ್‌. ಶ್ವೇತಾ ಅವರು, ಆಹಾರ ಮತ್ತು ನಾಗರಿಕ ಸರಬರಾಜು ನಗರ ವಿಭಾಗವನ್ನು ನಗರ ಭಾಗಕ್ಕೆ ಸ್ಥಳಾಂತರ ಮಾಡುವಂತೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೋರುತ್ತೇನೆ ಎಂದು ಭರವಸೆ ನೀಡಿದರು.

ಪಡಿತರ ಚೀಟಿಗಾಗಿ ಕಾದಿದ್ದವರಿಗೆ ಖುಷಿ ಸುದ್ದಿ: ಬಾಕಿ ಉಳಿದ ಅರ್ಜಿಗಳಿಗೆ ರೇಷನ್ ಕಾರ್ಡ್ ವಿತರಣೆ
ಬಾಲ ಕಿಶೋರ ಸಮಿತಿ ಸಭೆ ನಡೆಸಲ್ಲ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಗರಸಭೆ ಸದಸ್ಯರು, ವಾರ್ಡ್‌ಗಳಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಸದಸ್ಯರ ನೇತೃತ್ವದಲ್ಲಿ ಬಾಲ ಕಿಶೋರ ಸಮಿತಿ ಸಭೆ ನಡೆಸಬೇಕು. ಆದರೆ, ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಮುಬಾರಕ್‌ ಕಿಡಿಕಾರಿದರು.

ಅಧಿಕಾರಿಗಳು ವಾರ್ಡ್‌ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿದಾಗ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಲವು ವಾರ್ಡ್‌ಗಳಲ್ಲಿ ನಗರಸಭೆಯ ಜಾಗವಿದ್ದು, ಅವುಗಳನ್ನು ಅಂಗನವಾಡಿ ಕೇಂದ್ರಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಸಿಡಿಪಿಒ ಶಿವಮ್ಮ ಅವರು, ಕೋಲಾರ ನಗರದಲ್ಲಿ 93 ಅಂಗನವಾಡಿ ಕೇಂದ್ರಗಳಿದ್ದು, ಆ ಪೈಕಿ ಕೇವಲ 7 ಕಟ್ಟಡಗಳು ಮಾತ್ರ ಸ್ವಂತದ್ದಾಗಿದೆ. ಉಳಿದಂತೆ 76 ಕೇಂದ್ರಗಳು ಬಾಡಿಗೆ ಕಟ್ಟಡ, 7 ಕೇಂದ್ರಗಳು ಶಾಲೆಗಳಲ್ಲಿ ಹಾಗೂ 3 ಕೇಂದ್ರಗಳು ಸಮುದಾಯ ಭವನಗಳಲ್ಲಿ ನಡೆಯುತ್ತಿದ್ದು, ಕೇಂದ್ರಗಳಿಗೆ ಜಾಗ ನೀಡಲು ನಗರಸಭೆ ಮುಂದಾಗಬೇಕು ಎಂದು ಕೋರಿದರು. ಅದಕ್ಕೆ ಸ್ಪಂದಿಸಿದ ಅಧ್ಯಕ್ಷರು ಲಭ್ಯವಿರುವ ಕಡೆಗಳಲ್ಲಿ ಜಾಗ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಿಪಿಎಲ್‌ಗಾಗಿ ಜೈಲು ಸೇರಿದ 10 ಎಕರೆ ಭೂಮಿ ಒಡೆಯ; ಅನರ್ಹ ಕಾರ್ಡ್‌ದಾರರ ಬೇಟೆ ತೀವ್ರ, ಇನ್ನೂ ಹಲವರಿಗೆ ಕಾದಿದೆ ಶಿಕ್ಷೆ!



Read more

[wpas_products keywords=”deal of the day sale today offer all”]