ಮೂರನೇ ವಯಸ್ಸಿಗೆ ತಬಲಾ ಬಾರಿಸಲು ಕಲಿತಿದ್ದ ಬಪ್ಪಿ ಲಹಿರಿ
ನವೆಂಬರ್ 27, 1952 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದವರು ಬಪ್ಪಿ ಲಹಿರಿ. ಇವರ ನಿಜನಾಮ ಅಲೋಕೇಶ್ ಲಹಿರಿ. ಸಂಗೀತದ ಕುಟುಂಬದಲ್ಲೇ ಹುಟ್ಟಿ ಬೆಳೆದ ಬಪ್ಪಿ ಲಹಿರಿ, ತಮ್ಮ ಮೂರನೇ ವಯಸ್ಸಿಗೇ ತಬಲ ಬಾರಿಸುವುದನ್ನು ಕಲಿತಿದ್ದರು. ಚಿಕ್ಕ ವಯಸ್ಸಿಗೇ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತ ಬಪ್ಪಿ ಲಹಿರಿ 70, 80 ಮತ್ತು 90ರ ದಶಕದಲ್ಲಿ ಡಿಸ್ಕೋ ಸಾಂಗ್ಸ್ ಮತ್ತು ಡ್ಯಾನ್ಸ್ ನಂಬರ್‌ಗಳಿಂದಲೇ ಜನಪ್ರಿಯತೆ ಪಡೆದಿದ್ದರು. ಬರೀ ಬಾಲಿವುಡ್‌ನಲ್ಲಿ ಮಾತ್ರವಲ್ಲ.. ಬೆಂಗಾಲಿ, ತಮಿಳು, ತೆಲುಗು, ಗುಜರಾತಿ ಮತ್ತು ಕನ್ನಡ ಚಿತ್ರಗಳಿಗೂ ಬಪ್ಪಿ ಲಹಿರಿ ಸಂಗೀತ ಸಂಯೋಜನೆ ಮಾಡಿದ್ದರು.
ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ್ದ ಕನ್ನಡದ ಹಾಡುಗಳು ಯಾವುದು?
ಬಾಲಿವುಡ್‌ನಲ್ಲಿ ಅದಾಗಲೇ ಖ್ಯಾತಿ ಪಡೆದಿದ್ದ ಬಪ್ಪಿ ಲಹಿರಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು 1986ರಲ್ಲಿ. ಅದು ದ್ವಾರಕೀಶ್ ಅವರ ‘ಆಫ್ರಿಕಾದಲ್ಲಿ ಶೀಲಾ’ ಸಿನಿಮಾದ ಮೂಲಕ. ಆಫ್ರಿಕಾದ ದಟ್ಟ ಅರಣ್ಯದಲ್ಲಿ ಚಿತ್ರೀಕರಣಗೊಂಡಿದ್ದ ‘ಆಫ್ರಿಕಾದಲ್ಲಿ ಶೀಲಾ’ ಸಿನಿಮಾದ ಐದೂ ಹಾಡಿಗಳನ್ನೂ ಬಪ್ಪಿ ಲಹಿರಿ ಸಂಯೋಜಿಸಿದ್ದರು. ಐದು ಹಾಡುಗಳ ಪೈಕಿ ‘ಶೀಲಾ ಶೀಲಾ’ ಹಾಡನ್ನು ಬಪ್ಪಿ ಲಹಿರಿ ಅವರೇ ಹಾಡಿದ್ದರು. ಇದೇ ಸಿನಿಮಾದ ‘ಶೀಲಾ ಓ ಮೈ ಶೀಲಾ..’ ಹಾಡು ತುಂಬಾ ಪಾಪ್ಯುಲರ್ ಆಗಿತ್ತು.
‘ಶೀಲಾ ಶೀಲಾ..’ ಹಾಡನ್ನ ಹಾಡುವ ಸಲುವಾಗಿ, ಕನ್ನಡ ಉಚ್ಛಾರಣೆ ಸರಿಯಾಗಿ ಬರಬೇಕು ಎಂಬ ಉದ್ದೇಶದಿಂದ ಬಪ್ಪಿ ಲಹಿರಿ ಸ್ಟುಡಿಯೋದಲ್ಲೇ ಸತತ 8 ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡಿದ್ರಂತೆ.
1986ರಲ್ಲೇ ತೆರೆಕಂಡ ಡಾ.ವಿಷ್ಣುವರ್ಧನ್, ಭವ್ಯ, ಕಿಮ್ ಅಭಿನಯದ ‘ಕೃಷ್ಣ ನೀ ಬೇಗನೆ ಬಾರೋ’ ಚಿತ್ರಕ್ಕೂ ಬಪ್ಪಿ ಲಹಿರಿ ಸಂಗೀತ ನೀಡಿದ್ದರು. ಈ ಸಿನಿಮಾದ ‘ಆಲಾರೇ ಆಲಾರೇ..’ ಮತ್ತು ‘ಮಮ್ಮಿ ಮಮ್ಮಿ ಮಮ್ಮಿ..’ ಹಾಡುಗಳಿಗೆ ಈಗಲೂ ಅದೆಷ್ಟೋ ಜನರ ಅಚ್ಚುಮೆಚ್ಚಿನ ಗೀತೆಗಳಾಗಿವೆ.
1991ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್, ಸಂಗೀತ ಬಿಜ್ಲಾನಿ ಅಭಿನಯದ ಕನ್ನಡ ಮತ್ತು ಹಿಂದಿಯಲ್ಲಿ ತೆರೆಕಂಡಿದ್ದ ‘ಪೊಲೀಸ್ ಮತ್ತು ದಾದಾ’ ಚಿತ್ರಕ್ಕೂ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ್ದರು. ಈ ಚಿತ್ರದ ‘ಲೈಲಾ ಲೈಲಾ’, ‘ನಾನು ಗರಂ ಗರಂ’, ‘ನನ್ನ ಮನದಲ್ಲಿ’ ಹಾಡುಗಳು ಹಿಟ್ ಆಗಿದ್ದವು.
1989ರಲ್ಲಿ ತೆರೆಕಂಡಿದ್ದ ‘ಗುರು’ ಚಿತ್ರಕ್ಕೂ ಬಪ್ಪಿ ಲಹಿರಿ ಸಂಗೀತ ನಿರ್ದೇಶಕರಾಗಿದ್ದರು. 2014ರಲ್ಲಿ ತೆರೆಕಂಡಿದ್ದ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ನಟನೆಯ ‘ಲವ್ ಇನ್ ಮಂಡ್ಯ’ ಚಿತ್ರದ ‘ಕರೆಂಟ್ ಹೋದ ಟೈಮಲಿ..’ ಹಾಡನ್ನ ಬಪ್ಪಿ ಲಹಿರಿ ಹಾಡಿದ್ದರು. ಈ ಹಾಡು ಕೂಡ ಸೂಪರ್ ಹಿಟ್ ಆಗಿತ್ತು.
‘ಕರ್ಣ’ ಚಿತ್ರದಲ್ಲಿ ಬಪ್ಪಿ ಲಹಿರಿ ಟ್ಯೂನ್
ಹಿಂದಿಯ ‘ಸಾಹೇಬ್’ ಸಿನಿಮಾದ ಕನ್ನಡ ರೀಮೇಕ್ ‘ಕರ್ಣ’. ಡಾ.ವಿಷ್ಣುವರ್ಧನ್ ನಟನೆಯ ‘ಕರ್ಣ’ ಚಿತ್ರದ ‘ಪ್ರೀತಿಯೇ ನನ್ನುಸಿರು’ ಹಾಡಿಗೆ ‘ಸಾಹೇಬ್’ ಸಿನಿಮಾದಲ್ಲಿ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ್ದ ‘ಪ್ಯಾರ್ ಬಿನಾ ಚೇನ್’ ಹಾಡಿನ ಟ್ಯೂನ್‌ಅನ್ನೇ ಬಳಸಲಾಗಿತ್ತು. ರೆಟ್ರೋ ಶೈಲಿಯ ‘ಪ್ರೀತಿಯೇ ನನ್ನುಸಿರು’ ಹಾಡಿಗೆ ಈಗಲೂ ಡ್ಯಾನ್ಸ್ ಮಾಡದವರಿಲ್ಲ.!
Read more
[wpas_products keywords=”deal of the day party wear dress for women stylish indian”]