Karnataka news paper

ಎಲ್‌ಐಸಿ ಐಪಿಒ: ಹೂಡಿಕೆ ಮಾಡುವ ಮುನ್ನ ಇದನ್ನು ಓದಿ


Classroom

|

ಬಹುನಿರೀಕ್ಷಿತ ಎಲ್‌ಐಸಿ ಐಪಿಒ ಶೀಘ್ರದಲ್ಲೇ ಆರಂಭ ಆಗುವ ಸಾಧ್ಯತೆ ಇದೆ. ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸರ್ಕಾರವು ಭಾನುವಾರ ಕರಡು ಪತ್ರಗಳನ್ನು ಸಲ್ಲಿಸಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ (ಡಿಐಪಿಎಎಂ) ತುಹಿನ್ ಕಾಂತಾ ಪಾಂಡೆ ಭಾನುವಾರ ಸಂಜೆ ಈ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

ಎಲ್‌ಐಸಿ ಐಪಿಒ ಭಾರತದ ಅತಿದೊಡ್ಡ IPO ಆಗಿದ್ದು, ಮಾರ್ಚ್ 2022 ರ ಎರಡನೇ ವಾರದಲ್ಲಿ ಸಾರ್ವಜನಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಎಲ್‌ಐಸಿಯು ಕೂಡಾ ಖಾಸಗೀಕರಣದತ್ತ ಮುಖ ಮಾಡಲಿದೆ. ಸೆಬಿಗೆ ಕರಡು ಪತ್ರಗಳನ್ನು ಸಲ್ಲಿಕೆ ಮಾಡುವ ಮೊದಲು ಭಾರತ ಸರ್ಕಾರವು ಮುಂಬರುವ ಹಣಕಾಸು ವರ್ಷಕ್ಕೆ 65,000 ಕೋಟಿ ರೂಪಾಯಿಗಳ ಹೂಡಿಕೆಯ ಗುರಿಯನ್ನು ಬಜೆಟ್ 2022 ರಲ್ಲಿ ನಿಗದಿಪಡಿಸಿದೆ.

ಬಹುನಿರೀಕ್ಷಿತ ಎಲ್‌ಐಸಿ ಐಪಿಒ: ಸೆಬಿಗೆ ಕರಡು ಪತ್ರ ಸಲ್ಲಿಕೆ

ಕಾಗದಪತ್ರಗಳು ಅನುಮೋದನೆಗೊಂಡಿದ್ದರೂ, ಐಪಿಒ ಬೆಲೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದಾಗ್ಯೂ, ಭಾರತವು ಇದುವರೆಗೆ ಕಂಡಿರುವ ಅತಿ ದೊಡ್ಡ ಐಪಿಒ ಇದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವರದಿಗಳ ಪ್ರಕಾರ ಸರ್ಕಾರವು ಶೇಕಡ 5ರಷ್ಟು ಹಣವನ್ನು ಹೂಡಿಕೆ ಮಾಡಲಿದೆ. ಅಂದರೆ ಸರ್ಕಾರವು 75,000 ಕೋಟಿ ರೂ ಮೌಲ್ಯದ ಎಲ್‌ಐಸಿ ಐಪಿಒ ನಡೆಸಲಿದೆ. ನೀವು ಎಲ್‌ಐಸಿ ಐಪಿಒಗೆ ಹೂಡಿಕೆ ಮಾಡುವ ಮೊದಲು ಕೆಲವು ಅಂಶಗಳನ್ನು ತಿಳಿಯುವುದು ಮುಖ್ಯವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ…

ಎಲ್‌ಐಸಿ ಐಪಿಒ: ಪಾಲಿಸಿದಾರರಿಗೆ ಏನಿದೆ ಆಫರ್‌?, ಇಲ್ಲಿದೆ ಸಂಫೂರ್ಣ ಮಾಹಿತಿ

 ಎಲ್ಐಸಿ ಐಪಿಒ ಏಕೆ ಬೇಕು?

ಎಲ್ಐಸಿ ಐಪಿಒ ಏಕೆ ಬೇಕು?

ಕೊರೊನಾ ವೈರಸ್‌ ಸೋಂಕು ದೇಶದಲ್ಲಿ ಕಂಡು ಬಂದ ನಂತರ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ. ಕೊರೊನಾ ಬಳಿಕ ದೇಶದಲ್ಲಿ ಮಂಡನೆ ಮಾಡಲಾದ ಬಜೆಟ್‌ಗಳಲ್ಲಿನ ಕೊರತೆಯನ್ನು ನಿಭಾಯಿಸಲು ಸರ್ಕಾರಕ್ಕೆ ಹಣದ ಅಗತ್ಯವಿದೆ. ಹೀಗಾಗಿ ಎಲ್‌ಐಸಿ ಐಪಿಒ ಅನ್ನು ನಡೆಸಲಾಗುತ್ತಿದೆ. ಎಲ್‌ಐಸಿ ಐಪಿಒ ಪ್ರಾರಂಭದ ಹಿಂದಿನ ಕಲ್ಪನೆಯು ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸುವುದು ಆಗಿದೆ. ಹಾಗೆಯೇ ಈಗಾಗಲೇ ತನ್ನ ಗುರಿಗಿಂತ ಕಡಿಮೆ ಇರುವ ದೇಶವನ್ನು ನಡೆಸಲು ಹಣವನ್ನು ಸಂಗ್ರಹಿಸುವುದು ಅಂದರೆ 780 ಶತಕೋಟಿ ರೂಪಾಯಿಗಳ ಹಣವನ್ನು ಸಂಗ್ರಹಣೆ ಮಾಡುವುದು ಆಗಿದೆ.

 ನೀವು ಎಲ್‌ಐಸಿ ಐಪಿಒನಲ್ಲಿ ಹೂಡಿಕೆ ಮಾಡಬೇಕೇ?

ನೀವು ಎಲ್‌ಐಸಿ ಐಪಿಒನಲ್ಲಿ ಹೂಡಿಕೆ ಮಾಡಬೇಕೇ?

ಎಲ್‌ಐಸಿ ಐಪಿಒನಲ್ಲಿ ಹೂಡಿಕೆ ಮಾಡುವುದು ಎಂದಿಗೂ ಕೆಟ್ಟ ಆಯ್ಕೆ ಆಗಲಾರದು. ನೀವು ಯಾವಾಗಲೂ ಹೂಡಿಕೆ ಮಾಡಬಹುದು ಮತ್ತು ನಂತರ ಷೇರುಗಳನ್ನು ಮಾರಾಟ ಮಾಡಬಹುದು. ಆದರೆ ಎಲ್‌ಐಸಿ ಐಪಿಒ ಬಗ್ಗೆ ಎಷ್ಟೇ ಉತ್ಸುಕರಾಗಿದ್ದರೂ, ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಎಲ್‌ಐಸಿಯಲ್ಲಿ ಹೂಡಿಕೆ ಮಾಡಲು ಒಂದು ದೊಡ್ಡ ಕಾರಣವೆಂದರೆ ಅದು 1956 ರಿಂದ ಹೆಸರುವಾಸಿಯಾದ ಸಂಸ್ಥೆಯಾಗಿದೆ, ಹಾಗೂ ವಿಶ್ವಾಸಾರ್ಹವಾಗಿದೆ. ಇದು 100 ಪ್ರತಿಶತ ಸರ್ಕಾರಿ ಬೆಂಬಲಿತ ಕಂಪನಿಯಾಗಿದೆ ಆದ್ದರಿಂದ ಚಿಂತಿಸಬೇಕಾಗಿಲ್ಲ. ಎರಡನೆಯದಾಗಿ, ಎಲ್‌ಐಸಿ ತನ್ನ ಪಾಲಿಸಿದಾರರಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ರಿಯಾಯಿತಿಯೊಂದಿಗೆ ಭಾರತದ ಅತಿದೊಡ್ಡ ಹೂಡಿಕೆ ಮಾಡುವುದು ಕೆಟ್ಟ ಆಯ್ಕೆ ಅಲ್ಲ.

 ಕೆಲವು ನೆಗೆಟಿವ್‌ ಅಂಶಗಳೂ ಕೂಡಾ ಇದೆ!

ಕೆಲವು ನೆಗೆಟಿವ್‌ ಅಂಶಗಳೂ ಕೂಡಾ ಇದೆ!

ಎಲ್‌ಐಸಿ ಐಪಿಒ ಬಗ್ಗೆ ಪಾಸಿಟಿವ್‌ ಅಂಶಗಳ ನಡುವೆ ಕೆಲವು ನೆಗೆಟಿವ್‌ ಅಂಶಗಳು ಕೂಡಾ ಇದೆ. ಈ ಐಪಿಒ ಅನಿಶ್ಚಿತ ಭಾಗವೆಂದರೆ ಇದು ಬ್ಲಾಕ್‌ನಲ್ಲಿನ ಅತಿದೊಡ್ಡ ಕಂಪನಿ ಎಂದು ಪರಿಗಣಿಸಲಾಗಿದ್ದರೂ ಸಹ, ಹೆಚ್ಚು ಮಾರುಕಟ್ಟೆ ಹಿಡಿತ ಹೊಂದಿರುವ ಇತರ ಆಟಗಾರರ ನಡುವೆ ಮಾರುಕಟ್ಟೆಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆಯೇ ಎಂದು ಯಾರಿಗೂ ಖಚಿತವಾಗಿಲ್ಲ. ಕಂಪನಿಯು ಸರ್ಕಾರದಿಂದ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗಳೂ ಇವೆ. ಏಕೆಂದರೆ ಭವಿಷ್ಯದಲ್ಲಿ ಸರ್ಕಾರವು ಷೇರುದಾರರ ಬಗ್ಗೆಯೂ ಗಮನ ಹರಿಸಬೇಕಾಗಿದೆ.

 ಅತೀ ದೊಡ್ಡ ವಿಮಾ ಸಂಸ್ಥೆ ಎಲ್‌ಐಸಿ

ಅತೀ ದೊಡ್ಡ ವಿಮಾ ಸಂಸ್ಥೆ ಎಲ್‌ಐಸಿ

ಜೀವ ವಿಮಾ ನಿಗಮ (ಎಲ್‌ಐಸಿ) ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾಗಿದೆ. ಈ ವಿಮಾ ಸಂಸ್ಥೆಯನ್ನು 1956 ರಲ್ಲಿ ರಚಿಸಲಾಯಿತು. 2000 ರಲ್ಲಿ ಇತರ ಕಂಪನಿಗಳು ಅದೇ ವಲಯದಲ್ಲಿ ತೊಡಗಿಸಿಕೊಳ್ಳಲು ಅನುಮತಿಸುವವರೆಗೂ ಮಾರುಕಟ್ಟೆಯಲ್ಲಿ ಏಕೈಕ ವಿಮಾ ಸಂಸ್ಥೆ ಇದಾಗಿತ್ತು. ಕಂಪನಿಯು ಭಾರತದಾದ್ಯಂತ 1,00,000 ಉದ್ಯೋಗಿಗಳು ಮತ್ತು 10,00,000 ಕ್ಕೂ ಹೆಚ್ಚು ವಿಮಾ ಏಜೆಂಟ್‌ಗಳೊಂದಿಗೆ ಚೆನ್ನೈ ಮತ್ತು ಮುಂಬೈನಲ್ಲಿ ದೊಡ್ಡ ಕಚೇರಿಗಳನ್ನು ಹೊಂದಿದೆ. ಗಮನಾರ್ಹವಾಗಿ, ನೀವು ಪಾಲಿಸಿದಾರರಾಗಿದ್ದರೆ, ಐಪಿಒನಲ್ಲಿ ಭಾಗಿಯಾಗಲು ಬಯಸಿದರೆ, ನಿಮ್ಮ ಎಲ್‌ಐಸಿ ಪಾಲಿಸಿಯೊಂದಿಗೆ ಪ್ಯಾನ್‌ ಕಾರ್ಡ್ ಅನ್ನು ಲಿಂಕ್‌ ಮಾಡಬೇಕಾಗಿದೆ. ಹಾಗೆಯೇ ಐಪಿಒ ನಲ್ಲಿ ನೀಡಲಾಗುವ ರಿಯಾಯಿತಿಯನ್ನು ಪ್ರವೇಶಿಸಲು ಮಾನ್ಯವಾದ ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು.

English summary

LIC IPO: Read this before investing in it – Key details in Kannada

The Life Insurance Corporation of India (LIC) IPO: Read this before investing in it, Here’s detail In Kannada.



Read more…

[wpas_products keywords=”deal of the day”]