Karnataka news paper

‘ಫ್ಯಾಮಿಲಿ ಪ್ಯಾಕ್‌’ಗೆ ಬಿದ್ದಾಳಪ್ಪೋ.. ಅಮೃತಾ ಅಯ್ಯಂಗಾರ್‌–ಲಿಖಿತ್‌ ಮೋಡಿ


ಪಿ ಆರ್ ಕೆ ಸ್ಟುಡಿಯೋಸ್‌ನ  ‘ಫ್ಯಾಮಿಲಿ ಪ್ಯಾಕ್‌’ ಚಿತ್ರಕ್ಕೊಂದು ಟ್ರೆಂಡಿ ಹಾಡು ಬಿಡುಗಡೆಯಾಗಿದೆ. ‘ಬಿದ್ದಳಪ್ಪೋ…’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಪಿಆರ್‌ಕೆ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ. 

ಹಾಡಿನ ದೃಶ್ಯದಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಇದ್ದಾರೆ. ಕನ್ನಡದ ಜನಪ್ರಿಯ ನಿರ್ದೇಶಕ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ಮನೋಹರ್ ಅವರ ಸಾಹಿತ್ಯವಿದೆ. ಚಿಂತನ್ ವಿಕಾಸ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ‘ಸಂಗೀತವು ಸಾರ್ವತ್ರಿಕ ಭಾಷೆಯಾಗಿದೆ. ಯಾವುದೇ ಭಾವನೆಯನ್ನು ಸಂಗೀತದ ಮೂಲಕ ಮನಬಂದಂತೆ ತಿಳಿಸಬಹುದು. ಫ್ಯಾಮಿಲಿ ಪ್ಯಾಕ್ ಕೂಡ ಅಂತಹ ಭಾವನೆಗಳ ಮಿಶ್ರಣದಿಂದ ತುಂಬಿರುವಂತಹ ಒಂದು ಚಲನಚಿತ್ರ ಮತ್ತು ‘ಬಿದ್ದಾಳಪ್ಪೋ’ ಹಾಡು ಕೂಡ ಅದರ ಸೂಕ್ಷ್ಮತೆಗಳಿಂದ ನಿಮ್ಮ ಹೃದಯವನ್ನು ಸೆಳೆಯುತ್ತದೆ’ ಎಂದರು.

ಅರ್ಜುನ್ ಕುಮಾರ್‌ ಎಸ್‌. ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಫೆ. 17 ರಂದು ಅಮೆಜಾನ್‌ ಪ್ರೈಮ್ ವಿಡಿಯೊ ಮೂಲಕ ಬಿಡುಗಡೆಯಾಗಲಿದೆ.

 



Read More…Source link

[wpas_products keywords=”deal of the day party wear for men wedding shirt”]