Karnataka news paper

‘ತಲೈವಾ’ ರಜನಿಕಾಂತ್ ಹೊಸ ಸಿನಿಮಾಗೆ ಇಬ್ಬರು ‘ಸ್ಟಾರ್’ ನಟರ ಎಂಟ್ರಿ! ಯಾರವರು?


‘ಅಣ್ಣಾಥೆ’ ಸಕ್ಸಸ್‌ನಿಂದ ಪುನಃ ಆ್ಯಕ್ಟೀವ್ ಆಗಿರುವ ‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರು ಇದೀಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದು ಅವರ 169ನೇ ಸಿನಿಮಾವಾಗಿದ್ದು, ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ಅಂದಹಾಗೆ, ಈ ಸಿನಿಮಾಗೆ ರಜನಿಕಾಂತ್ ಜೊತೆಗೆ ಇನ್ನೂ ಇಬ್ಬರು ಸ್ಟಾರ್ ನಟರು ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾದರೆ, ಆ ನಟರು ಯಾರು? ಮುಂದೆ ಓದಿ.

ರಜನಿಕಾಂತ್ ಜೊತೆಗೆ ಶಿವಕಾರ್ತಿಕೇಯನ್ & ಸಿಂಬು
ರಜನಿಕಾಂತ್ ನಟಿಸುತ್ತಿರುವ ಈ ಹೊಸ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟರಾದ ಸಿಂಬು ಮತ್ತು ಶಿವಕಾರ್ತಿಕೇಯನ್ ನಟಿಸುವ ಸಾಧ್ಯತೆ ಎಂದು ಹೇಳಲಾಗಿದೆ. ‘ಮಾನಾಡು’ ಮೂಲಕ ಸಿಂಬು ಮತ್ತೆ ಫಾರ್ಮ್‌ಗೆ ಮರಳಿದ್ದರೆ, ‘ಡಾಕ್ಟರ್’ ಸಿನಿಮಾ ಮೂಲಕ ಶಿವಕಾರ್ತಿಕೇಯನ್ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದಾರೆ. ಈ ಇಬ್ಬರು ನಟರು ತಲೈವಾಗೆ ಸಾಥ್ ನೀಡಿದರೆ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ.

ಈ ಹಿಂದೆ ಹಲವು ಬಾರಿ ರಜನಿಕಾಂತ್‌ ಜೊತೆಗೆ ನಟಿಸಬೇಕು ಎಂದು ಶಿವಕಾರ್ತಿಕೇಯನ್ ಹೇಳಿಕೊಂಡಿದ್ದರು. ಅವರು ರಜನಿಕಾಂತ್‌ಗೆ ದೊಡ್ಡ ಅಭಿಮಾನಿ ಕೂಡ. ರಜನಿ ಅವರನ್ನು ಇಮಿಟೇಟ್ ಮಾಡುವುದರಲ್ಲಿ ಶಿವಕಾರ್ತಿಕೇಯನ್ ಎತ್ತಿದ ಕೈ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆದರೆ, ಸನ್ ಪಿಕ್ಚರ್ಸ್ ಕಡೆಯಿಂದ ಈ ಸುದ್ದಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕಿರಿಯ ಪುತ್ರಿ ಸೌಂದರ್ಯ ವಿಚ್ಛೇದನ ಪಡೆದಾಗ ರಜನಿಕಾಂತ್ ಪಟ್ಟ ಸಂಕಟ ಅಷ್ಟಿಷ್ಟಲ್ಲ! ಇನ್ನು ಈಗ…

ಅಂದಹಾಗೆ, ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿದ್ದು, ಈ ಬ್ಯಾನರ್‌ನೊಂದಿಗೆ ರಜನಿಕಾಂತ್ ಮಾಡುತ್ತಿರುವ 4ನೇ ಸಿನಿಮಾ ಇದಾಗಿದೆ. ಈ ಹಿಂದೆ ‘ಎಂಧಿರನ್‌’, ‘ಪೆಟ್ಟಾ’, ‘ಅಣ್ಣಾಥೆ’ ಸಿನಿಮಾಗಳನ್ನು ರಜನಿಕಾಂತ್‌ಗಾಗಿ ಸನ್‌ ಪಿಕ್ಚರ್ಸ್ ನಿರ್ಮಾಣ ಮಾಡಿತ್ತು. ಇನ್ನು, ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿರುವುದು ನೆಲ್ಸನ್‌. ‘ಕೊಲಮಾವು ಕೋಕಿಲ’, ‘ಡಾಕ್ಟರ್’, ‘ಬೀಸ್ಟ್‌’ ಸಿನಿಮಾಗಳನ್ನು ಮಾಡಿರುವ ನೆಲ್ಸನ್‌ಗೆ ಇದು 4ನೇ ಸಿನಿಮಾ. ವಿಜಯ್ (Thalapathy Vijay) ಜೊತೆಗೆ ‘ಬೀಸ್ಟ್’ ಸಿನಿಮಾ ಮಾಡುತ್ತಿರುವ ನೆಲ್ಸನ್‌, ಅದು ರಿಲೀಸ್‌ ಆಗುವುದಕ್ಕೂ ಮುನ್ನವೇ ರಜನಿಕಾಂತ್‌ಗೆ ನಿರ್ದೇಶನ ಮಾಡುವ ಬಿಗ್ ಚಾನ್ಸ್ ಪಡೆದುಕೊಂಡಿದ್ದಾರೆ.

Dhanush Divorce: ರಜನಿಕಾಂತ್‌ ಪುತ್ರಿ ಜೊತೆಗಿನ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ನಟ ಧನುಷ್!

Simbu and Sivakarthikeyan to work with Rajinikanth

ಕಾಲಿವುಡ್‌ನ ‘ಸ್ಟಾರ್‌’ ನಟರ ಬಾಲ್ಯದ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

ಇನ್ನು, ಅನಿರುದ್ಧ್ ರವಿಚಂದರ್ ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಫೆ.10ರಂದು ಈ ಸಿನಿಮಾದ ಅಧಿಕೃತ ಘೋಷಣೆ ಆಗಿದೆ. ರಜನಿಕಾಂತ್‌ರನ್ನು ನೆಲ್ಸನ್ ಸಖತ್ ಸ್ಟೈಲಿಶ್ ಆಗಿ ತೋರಿಸಲಿದ್ದಾರೆ ಎನ್ನಲಾಗಿದೆ.

Rajinikanth teams up with director Nelson for next project Thalapathy 65

The makers announced that the film has been tentatively titled ‘Thalaivar169’.

ಐಶ್ವರ್ಯ-ಧನುಷ್ ಸಂಸಾರವನ್ನು ಉಳಿಸಲು ರಜನಿಕಾಂತ್ ಶತಪ್ರಯತ್ನ!



Read more

[wpas_products keywords=”deal of the day party wear dress for women stylish indian”]