Karnataka news paper

ಯುಟಿ ಖಾದರ್ ಮೂರ್ಖ, ಉಳ್ಳಾಲದ ಮುಲ್ಲಾಗೆ ಬೆಲೆ ಇಲ್ಲ: ಪ್ರತಾಪ ‘ಸಿಂಹ’ಘರ್ಜನೆ


ಮೈಸೂರು: ಹಿಜಾಬ್ ವಿಚಾರ ಸಾಕಷ್ಟು ಅವಾಂತರ ಸೃಷ್ಟಿಸಿದೆ.ಯು.ಟಿ‌.ಖಾದರ್ ನಿಜವಾದ ಮೂರ್ಖ. ಈತನಿಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ , ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತಾ ಗೊತ್ತಿಲ್ವಾ?. ನಿಜವಾದ ಮೂರ್ಖತನ ಪ್ರದರ್ಶನ ಮಾಡುತ್ತಿರುವುದು ಖಾದರ್ ಎಂದು ಗುಡುಗಿದರು.

13 ಬಜೆಟ್‌ ಮಂಡಿಸಿರೋದು ಬಿಟ್ಟರೆ ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲ: ಪ್ರತಾಪ್‌ ಸಿಂಹ ಕಿಡಿ

ಕೋರ್ಟ್ ತೀರ್ಪು ಬರುವವರೆಗೆ ರಾಜ್ಯ ಸರಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ಇಂದು ಹಿಜಾಬ್ ಕೇಳಿದ್ದಾರೆ, ನಾಳೆ ಬುರ್ಖಾ ಹಾಕಿಕೊಂಡು ಬರುತ್ತಾರೆ. ಶುಕ್ರವಾರ ಬಂದರೆ ಶಾಲೆಯಲ್ಲಿಯೇ ನಮಾಜ್ ಮಾಡುತ್ತೇವೆ ಎನ್ನುತ್ತಾರೆ. ಮುಂದೊಂದು ದಿನ ಕ್ಲಾಸ್ ರೂಂನಲ್ಲೇ ಪ್ರೇಯರ್ ಹಾಲ್ ಕಟ್ಟಿಸಿಕೊಡಿ ಎಂದು ಕೇಳುತ್ತಾರೆ. ಹಾಗೇನೇ, ದೇಶವನ್ನೇ ತುಂಡು ಮಾಡಿ ಎನ್ನುತ್ತಾರೆ. 70 ವರ್ಷಗಳ ಹಿಂದೆ ಇವರು ಇದನ್ನೇ ಮಾಡಿದ್ದು. ಇವರ ಒತ್ತಡಕ್ಕೆ ಮಣಿಯುತ್ತ ಹೋದರೆ ದೇಶವನ್ನೇ ತುಂಡು ತುಂಡು ಮಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆ. ಆ ಜಾತಿ ಈ ಜಾತಿ, ಈ ಧರ್ಮ ಎಂದು ನೋಡದೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಶಾಲೆಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಜಾರಿಯಲ್ಲಿ ಇದೆ. ಇದನ್ನು ತಿಳಿದುಕೊಳ್ಳುವ ಕನಿಷ್ಠ ಜ್ಞಾನ ಖಾದರ್ಗೆ ಇಲ್ಲ. ಇದು ಇವರೊಬ್ಬರ ಸಮಸ್ಯೆ ಅಲ್ಲ, ಕಾಂಗ್ರೆಸ್ನ ಸಮಸ್ಯೆ’ ಎಂದು ಪ್ರತಾಪ್‌ ಸಿಂಹ ಹೇಳಿದರು.

ಸೋಮವಾರ ಹಿಜಾಬ್‌ ವಿವಾದವನ್ನು ಸರಕಾರ ನ್ಯಾಯಾಲಯದ ಹೊರಗಡೆಯೇ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಯು. ಟಿ. ಖಾದರ್‌ ಸಲಹೆ ನೀಡಿದ್ದರು. ಎಲ್ಲವನ್ನೂ ನ್ಯಾಯಾಲಯವೇ ಬಗೆಹರಿಸಲು ಸಾಧ್ಯವಿಲ್ಲ. ಸರಕಾರ ಕೂಡಲೇ ಧಾರ್ಮಿಕ ಮುಖಂಡರು, ಸರ್ವ ಪಕ್ಷಗಳ ಸಭೆ ಕರೆದು ವಿವಾದವನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಿದ್ದರು.

ಹಿಜಾಬ್‌ ವಿವಾದ ಕೋರ್ಟ್‌ ಹೊರಗಡೆಯೇ ಬಗೆಹರಿಯಲಿ: ಸರ್ವ ಪಕ್ಷ ಸಭೆಗೆ ಯು. ಟಿ. ಖಾದರ್‌ ಆಗ್ರಹ

ಅಲ್ಲದೇ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಯಾವುದೇ ಸಮಸ್ಯೆ ಇರಲಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟು ಮಾಡಿದ್ದು ಬಿಜೆಪಿ. ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ ವಿರುದ್ಧ ಮಾತನಾಡಲಾಗುತ್ತಿದೆ’ ಎಂದು ಯುಟಿ ಖಾದರ್‌ ಅಸಮಾಧಾನ ವ್ಯಕ್ತಪಡಿಸಿದ್ದರು.ಯುಟಿ ಖಾದರ್‌ ಹೇಳಿಕೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.



Read more

[wpas_products keywords=”deal of the day sale today offer all”]