ಪಂಜಾಬ್‌ನ ಮಾನ್ಸದಲ್ಲಿ ‘ನರೇನ್ ಜಲಬಡಿಯಾ’ ಎಂದೇ ಕರೆಯುವ ರಮೇಶ್ ಕುಮಾರ್ ಇತ್ತೀಚೆಗೆ ಸ್ಥಳೀಯ ಟೆನಿಸ್ ಬಾಲ್ ಟೂರ್ನಿಯೊಂದರಲ್ಲಿ ಕೇವಲ 10 ಎಸೆತಗಳಿಗೆ ಅರ್ಧಶತಕ ಸಿಡಿಸಿದ್ದರು. ಈ ವಿಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದರ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಕೋಲ್ಕತಾ ಫ್ರಾಂಚೈಸಿ 20 ಲಕ್ಷ ರೂ. ಮೂಲ ಬೆಲೆಗೆ ರಮೇಶ್ ಕುಮಾರ್ ಅವರನ್ನು ಖರೀದಿಸಿತು. ಆ ಮೂಲಕ ನೆರೆದಿದ್ದ ಎಲ್ಲಾ ಫ್ರಾಂಚೈಸಿಗಳಿಗೆ ಅಚ್ಚರಿ ಮೂಡಿಸಿತು.
IPL 2022: ಮೆಗಾ ಆಕ್ಷನ್ ಬಳಿಕ 10 ತಂಡಗಳ ಆಟಗಾರರ ಅಂತಿಮ ಪಟ್ಟಿ ಇಲ್ಲಿದೆ!
ಇತ್ತೀಚೆಗೆ ಕೇವಲ 10 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ್ದ ರಮೇಶ್ ಕುಮಾರ್, ಏಳು ಭರ್ಜರಿ ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಸಿಡಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಕೌಶಲದಿಂದ ಗಮನ ಸೆಳೆದ ಹಳ್ಳಿ ಪ್ರತಿಭೆಯನ್ನು ಕೆಕೆಆರ್ ಗುರುತಿಸಿ ಐಪಿಎಲ್ ವೇದಿಕೆಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ.
ಬ್ಯಾಟಿಂಗ್ ಜೊತೆಗೆ ಎಡಗೈ ಸ್ಪಿನ್ ಮಾಡಬಲ್ಲ ಕೌಶಲ ಹೊಂದಿರುವ ರಮೇಶ್ ಕುಮಾರ್ ಕೆಕೆಆರ್ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು ಎಂದು ಕೆಲ ವರದಿಗಳು ತಿಳಿಸಿವೆ.
IPL 2022: ಆರ್‌ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ!
ಭಾನುವಾರ ಮುಗಿದ ಮೆಗಾ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಅತಿ ಹೆಚ್ಚು ಹಣ ಖರ್ಚು ಮಾಡಿದ ಫ್ರಾಂಚೈಸಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು 12.25 ಕೋಟಿ ರೂ. ಗಳಿಗೆ ಕೆಕೆಆರ್ ಖರೀದಿಸಿತ್ತು. ನಂತರ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು 7.25 ಕೋಟಿ ರೂ. ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
ಸ್ಯಾಮ್ ಬಿಲ್ಲಿಂಗ್ಸ್ 2 ಕೋಟಿ ರೂ. , ಆಕ್ರಮಣಕಾರಿ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ 1.5 ಕೋಟಿ ರೂ., ಹಾಗೂ ಅಜಿಂಕ್ಯ ರಹಾನೆ ಒಂದು ಕೋಟಿ ರೂ. ಗಳಿಗೆ ಕೆಕೆಆರ್ ಪಾಲಾಗಿದ್ದಾರೆ. ಮೆಗಾ ಹರಾಜಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್, ಆಂಡ್ರೆ ರಸೆಲ್(12ಕೋಟಿ ರೂ.), ವರುಣ್ ಚಕ್ರವರ್ತಿ(8 ಕೋಟಿ ರೂ.), ವೆಂಕಟೇಶ್ ಅಯ್ಯರ್ (8 ಕೋಟಿ ರೂ.) ಹಾಗೂ ಸುನೀಲ್ ನರೇನ್ (6 ಕೋಟಿ ರೂ.) ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿತ್ತು.
IPL 2022: ಎಲ್ಲಾ ತಂಡಗಳ ಟಾಪ್ 10 ಅತ್ಯಂತ ದುಬಾರಿ ಆಟಗಾರರ ಪಟ್ಟಿ!
ಕೋಲ್ಕತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ನಿತೀಶ್ ರಾಣಾ, ಪ್ಯಾಟ್ ಕಮಿನ್ಸ್, ಶ್ರೇಯಸ್ ಅಯ್ಯರ್, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಬಾಬಾ ಇಂದ್ರಜಿತ್, ಚಮಿಕಾ ಕರುಣಾರತ್ನೆ, ಅಭಿಜೀತ್ ತೋಮರ್, ಪ್ರಥಮ್ ಸಿಂಗ್, ಅಶೋಕ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಟಿಮ್ ಸೌಥಿ, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಅಮನ್ ಖಾನ್.
Read more
[wpas_products keywords=”deal of the day gym”]