Karnataka news paper

‘ಪ್ರೇಮಿಗಳ ದಿನ’ದಂದೇ ಪ್ರಿಯತಮನನ್ನು ಪರಿಚಯಿಸಿದ ‘ಅಗ್ನಿಸಾಕ್ಷಿ’ ಧಾರಾವಾಹಿ ನಟಿ ಐಶ್ವರ್ಯಾ ಸಾಲಿಮಠ


‘ಅಗ್ನಿಸಾಕ್ಷಿ’, ‘ಸೇವಂತಿ’ ಧಾರಾವಾಹಿ ನಟಿ ಐಶ್ವರ್ಯಾ ಸಾಲಿಮಠ ಅವರು ‘ಪ್ರೇಮಿಗಳ ದಿನ’ ಅವರ ರಿಯಲ್ ಲೈಫ್‌ನ ವ್ಯಾಲಂಟೈನ್‌ ಪರಿಚಯ ಮಾಡಿಕೊಟ್ಟಿದ್ದಾರೆ. ಐಶ್ವರ್ಯಾ ಮನಸ್ಸು ಕದ್ದ ಹುಡುಗ ಯಾರು? ಆ ಬಗ್ಗೆ ಮಾಹಿತಿ ಇಲ್ಲಿದೆ.

“ನಾನು ಹಾಗೂ ನೀನು, ನನ್ನ ಗೆಳೆಯನ ಜೊತೆ ಎಂಗೇಜ್ ಆಗಿರೋದಕ್ಕೆ ಖುಷಿಯಾಗುತ್ತದೆ” ಎಂದು ನಟಿ ಐಶ್ವರ್ಯಾ ಸಾಲಿಮಠ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ರಶ್ಮಿ ಪ್ರಭಾಕರ್, ಸುಕೃತಾ ನಾಗರಾಜ್, ದೀಪಾ ಜಗದೀಶ್ ಸೇರಿ ಇನ್ನೂ ಅನೇಕರು ಐಶ್ವರ್ಯಾಗೆ ಶುಭಾಶಯ ತಿಳಿಸಿದ್ದಾರೆ. ನಟ ವಿನಯ್ ಅವರನ್ನು ಐಶ್ವರ್ಯಾ ಮದುವೆಯಾಗುತ್ತಿದ್ದಾರೆ.

ಐಶ್ವರ್ಯಾರಂತೆ ವಿನಯ್ ಕೂಡ ಉತ್ತರ ಕರ್ನಾಟಕದವರು. ‘ಮಹಾಸತಿ’ ಧಾರಾವಾಹಿಯಲ್ಲಿ ಐಶ್ವರ್ಯಾ, ವಿನಯ್ ಒಟ್ಟಾಗಿ ನಟಿಸಿದ್ದಾರೆ. ಅವರಿಬ್ಬರು ಬಹುಕಾಲದ ಸ್ನೇಹಿತರು. ‘ಮಹಾಸತಿ’ ನಂತರ ಕೂಡ ವಿನಯ್, ಐಶ್ವರ್ಯಾ ಉತ್ತಮ ಸ್ನೇಹಿತರಾಗಿದ್ದರು. ಲಾಕ್‌ಡೌನ್ ಟೈಮ್‌ನಲ್ಲಿ ನಾಗರಾಜ್ ಪಾಟೀಲ್ ಅವರ ನಿರ್ದೇಶನದಲ್ಲಿ ಒಂದು ಕಿರುಚಿತ್ರದಲ್ಲಿ ಐಶ್ವರ್ಯಾ ನಟಿಸಿದ್ದು, ವಿನಯ್ ಆ ಚಿತ್ರದ ಹೀರೋ ಆಗಿದ್ದರು. ‘ಮಹಾಸತಿ’ ಐಶ್ವರ್ಯಾರ ಮೊದಲ ಧಾರಾವಾಹಿ. ಅಭಿನಯ, ಚಿತ್ರರಂಗದ ಗಂಧಗಾಳಿ ಗೊತ್ತಿರದ ಐಶ್ವರ್ಯಾಗೆ ಧಾರವಾಡದಲ್ಲಿ ‘ಮಹಾಸತಿ’ ಆಡಿಷನ್ ನಡೆಯುತ್ತಿದ್ದುದರಿಂದ ನಟಿಸುವ ಅವಕಾಶ ಅಚಾನಕ್ ಆಗಿ ಸಿಕ್ಕಿತ್ತು.

ಅಂದು ಅಪ್ಪ-ಅಮ್ಮನಿಗೆ ಹಾಗೆ ಹೇಳಿದ್ದಕ್ಕೆ ಇಂದು ನಟಿಸಲು ತುಂಬ ಪ್ರೋತ್ಸಾಹಿಸ್ತಿದ್ದಾರೆ: ಐಶ್ವರ್ಯಾ ಸಾಲಿಮಠ!

ತಮಿಳಿನಲ್ಲಿ ಒಂದು ಧಾರಾವಾಹಿಯಲ್ಲಿ 1 ವರ್ಷ ಐಶ್ವರ್ಯಾ ಸಾಲಿಮಠ ನಟಿಸಿದ್ದರು. ಚಂದು ಬಿ ಗೌಡ ನಟನೆಯ ‘ತಮಟೆ’ ಸಿನಿಮಾದಲ್ಲಿಯೂ ಅವರು ಬಣ್ಣ ಹಚ್ಚಿದ್ದರು. ‘ಯಾರಿವಳು’, ‘ನಾಗಕನ್ನಿಕೆ’ ಧಾರಾವಾಹಿಗೂ ಕೂಡ ಐಶ್ವರ್ಯಾ ಡಬ್ಬಿಂಗ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಐಶ್ವರ್ಯಾ ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ. ಸದ್ಯ ಅವರು ‘ಸೇವಂತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಿನಯ್ ‘ಧಾರವಾಡ್‌ದಾಗ್ ಒಂದ್ ಲವ್ ಸ್ಟೋರಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಜೀವನದಿ’, ‘ಮಹಾದೇವಿ’, ‘ಲಕ್ಷ್ಮೀ ಸ್ಟೋರ್ಸ್’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹುಬ್ಬಳ್ಳಿಯ ವಿನಯ್ ಅವರು ಪುಣೆ, ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿ ಆಮೇಲೆ ನಟನೆ ಮೇಲೆ ಒಲವಿದ್ದರಿಂದ ಚಿತ್ರರಂಗಕ್ಕೆ ಕಾಲಿರಿಸಿದರು.

ಅಂದುಕೊಂಡಿದ್ದನ್ನು 5 ವರ್ಷದಲ್ಲಿ ಸಾಧಿಸಿದ ಅಗ್ನಿಸಾಕ್ಷಿ, ಸೇವಂತಿ ಧಾರಾವಾಹಿ ನಟಿ ಐಶ್ವರ್ಯಾ ಸಾಲಿಮಠ!

‘ಸರಯೂ’ ಧಾರಾವಾಹಿಯಲ್ಲಿ ಕೂಡ ಐಶ್ವರ್ಯಾ ಬಣ್ಣ ಹಚ್ಚಿದ ನಂತರದಲ್ಲಿ ಮತ್ತೆ ಅವರಿಗೆ ಅವಕಾಶ ಸಿಗೋದು ಕಷ್ಟ ಆಗಿತ್ತು. ಮತ್ತೊಂದಿಷ್ಟು ಆಡಿಶನ್ ನೀಡಿದ ನಂತರದಲ್ಲಿ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ನಟಿಸುವ ಆಫರ್ ಬಂತು. ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಶೋಭಾ ಶೆಟ್ಟಿ ನಿರ್ವಹಿಸಿದ್ದ ತನು ಪಾತ್ರಕ್ಕೆ ಐಶ್ವರ್ಯಾರಿಗೆ ಕರೆ ಬಂದಿತ್ತು. ಕೆಲ ಕಾರಣಗಳಿಂದ ಶೋಭಾ ಅವರು ತನು ಪಾತ್ರಕ್ಕೆ ಗುಡ್‌ಬೈ ಹೇಳಿದ್ದರು. ಅಲ್ಲಿಂದ ಐಶ್ವರ್ಯಾ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿಯ ನಟಿಯಾಗಿ ಗುರುತಿಸಿಕೊಂಡರು.



Read more

[wpas_products keywords=”deal of the day party wear dress for women stylish indian”]