ಬೆಂಗಳೂರು: ನಟ ಧನುಷ್ ಮುಖ್ಯ ಪಾತ್ರದಲ್ಲಿರುವ ಆಕ್ಷನ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ‘ಮಾರನ್’ ಸಿನಿಮಾ ನೇರವಾಗಿ ಓಟಿಟಿ ವೇದಿಕೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
ಸೋಮವಾರ ಚಿತ್ರತಂಡ ಈ ವಿಚಾರ ತಿಳಿಸಿದೆ. ಇದೇ ತಿಂಗಳ ಅಂತ್ಯದಲ್ಲಿ ಮಾರನ್ ಬಿಡುಗಡೆಯಾಗಲಿದ್ದು, ನಿಶ್ಚಿತ ದಿನಾಂಕ ಹೊರ ಬಿದ್ದಿಲ್ಲ.
‘ನಮ್ಮಿಂದ ನಿಮಗಾಗಿ ಹ್ಯಾಪಿ ವ್ಯಾಲೆಂಟೈನ್ ಡೇ. ಶೀಘ್ರದಲ್ಲೇ ಹಾಟ್‌ಸ್ಟಾರ್‌ನಲ್ಲಿ ಬರಲಿದ್ದೇವೆ ಎಂದು ಪ್ರೇಮಿಗಳ ದಿನದ ಶುಭಾಶಯ’ ಕೋರಿದ್ದಾರೆ ನಟಿ ಮಾಳವಿಕಾ ಮೋಹನನ್.
ಧನುಷ್‌ಗೆ ಜೊತೆಯಾಗಿ ನಟಿ ಮಾಳವಿಕಾ ಮೋಹನನ್ ಕಾಣಿಸಿಕೊಂಡಿದ್ದು, ಸಮುದ್ರಕಣಿ, ಸ್ಮೃತಿ ವೆಂಕಟ್, ಕೃಷ್ಣಕುಮಾರ್ ಬಾಲಸುಬ್ರಮಣಿಯನ್ ಹಾಗೂ ಮಹೇಂದ್ರನ್ ಅವರು ನಟಿಸಿದ್ದಾರೆ.
ಈ ಸಿನಿಮಾವನ್ನು ಕಾರ್ತಿಕ್ ನರೇನ್ ನಿರ್ದೇಶಿಸಿದ್ದು, ಸತ್ಯಜ್ಯೋತಿ ಫಿಲ್ಮಂ ಬ್ಯಾನರ್ ಅಡಿ ಟಿ.ಜಿ ತ್ಯಾಗರಾಜನ್ ನಿರ್ಮಾಣ ಮಾಡಿದ್ದಾರೆ. ಧನುಷ್ ಅಭಿನಯದ ‘ಅತ್ರಂಗಿ ರೇ’ ಸಿನಿಮಾ ಕೂಡ ನೇರವಾಗಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿತ್ತು.
Happy Valentine’s Day from us to you! 🥰♥️#Maaran ♥️
See you soon on @disneyplusHSTam !@dhanushkraja @karthicknaren_M @gvprakash @SathyaJyothi_ @thondankani @smruthi_venkat @Actor_Mahendran @KK_actoroffl @DisneyPlusHS pic.twitter.com/tFAQwGhKPI
— malavika mohanan (@MalavikaM_) February 14, 2022
Read More…Source link
[wpas_products keywords=”deal of the day party wear for men wedding shirt”]