
ಸುಮಾರು 7 ತಿಂಗಳ ಹಿಂದೆ ಇಂಡಿಯನ್ ಸೋಶಿಯಲ್ ಫೋರಂ ತಂಡಕ್ಕೆ ರಾಯಲ್ ಕಮಿಷನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಅಧಿಕಾರಿಯೊಬ್ಬರಿಂದ ಕರೆ ಬಂದಿತ್ತು. ಆ ಕೂಡಲೇ ತಂಡವು ಆಸ್ಪತ್ರೆಯಲ್ಲಿರುವ ರೋಗಿಯನ್ನು ಮತ್ತು ಸಂಬಂಧಪಟ್ಟ ವೈದ್ಯರನ್ನು ಭೇಟಿ ಮಾಡಿದೆ.
ಅಂದಿನಿಂದ ಇಂಡಿಯನ್ ಸೋಶಿಯಲ್ ಫೋರಂ ತಂಡವು ಸರ್ಕಾರಿ ಅಧಿಕಾರಿಗಳು, ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ, ಚಿಕಿತ್ಸಾ ವೆಚ್ಚವನ್ನು ವಹಿಸಿರುವ ವಿಮಾ ಸಂಸ್ಥೆ, ಆಸ್ಪತ್ರೆ ಆಡಳಿತಾಧಿಕಾರಿಗಳು, ಹಾಗೂ ಏರ್‌ಲೈನ್‌ಗಳೂಂದಿಗೆ ಹಾಗೂ ಅವರ ಕುಟುಂಬದೂಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ತೊಡಗಿದ್ದು, ಅವರ ಚಿಕಿತ್ಸೆಗೆ ಮತ್ತು ಅವರನ್ನು ತವರೂರಿಗೆ ಮರಳಿಸಲು ಬೇಕಾದಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆಯಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ.
ಯಾದವ್ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಮಟ್ಟಕ್ಕೆ ಚೇತರಿಸಿಕೊಂಡ ಕಾರಣದಿಂದ ವೈದ್ಯಕೀಯ ಅಧಿಕಾರಿಗಳು ಅವರನ್ನು ಮರಳಿ ಮನೆಗೆ ಹಿಂದಿರುಗಿಸಲು ನಮಗೆ ಒಪ್ಪಿಗೆ ನೀಡಿದರು.
ಆ ಮುಖಾಂತರ, ಅವರನ್ನು ಫೆಬ್ರವರಿ 9 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ವಿಶೇಷ ಆಂಬ್ಯುಲೆನ್ಸ್ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಇಂಡಿಯನ್ ಸೋಶಿಯಲ್ ಫೋರಂ ತಂಡವು ವಿಮಾನ ನಿಲ್ದಾಣದವರೆಗೆ ಜೊತೆಯಲ್ಲಿ ಇದ್ದುಕೊಂಡು ಅವರ ಪ್ರಯಾಣಕ್ಕೆ ಬೇಕಾಗುವಂತಹ ವಾಯುಯಾನ ವಿಧಿವಿಧಾನಗಳನ್ನು ಭರ್ತಿ ಮಾಡಿದೆ.
ಹಾಗೆಯೇ ಅವರ ತವರೂರಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ (SDPI) ಉತ್ತರ ಪ್ರದೇಶದ ತಂಡವು ಲಕ್ನೋ ವಿಮಾನ ನಿಲ್ದಾಣದಲ್ಲಿ ಸುಸಜ್ಜಿತ ಆಂಬ್ಯುಲೆನ್ಸ್‌ನೊಂದಿಗೆ ಅವರನ್ನು ಸ್ವೀಕರಿಸಿ ಆಸ್ಪತ್ರೆಗೆ ದಾಖಲಾಗಿಸಿ ಅವರ ಕುಟುಂಬ ಹಾಗೂ ವೈದ್ಯಕೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿತ್ತು.
ಇಂಡಿಯನ್ ಸೋಶಿಯಲ್ ಫೋರಮ್ ಈ ಸಂದರ್ಭದಲ್ಲಿ ಈ ಉದಾತ್ತ ಕಾರ್ಯದ ಹಿಂದೆ ಹಗಲಿರುಳು ಶ್ರಮಿಸಿರುವಂತಹ
ಇಂಡಿಯನ್ ಸೋಶಿಯಲ್ ಫೋರಂನ ಅಶ್ರಫ್ ಉಳ್ಳಾಲ್, ಶಬ್ಬೀರ್ ಕೃಷ್ಣಾಪುರ, ಕೈಸರ್ ಕನ್ನಂಗಾರ್ ಹಾಗೂ ತಂಡದ ಉಳಿದ ಕಾರ್ಯಕರ್ತರಿಗೂ, ಆಸ್ಪತ್ರೆಯ ವೈದ್ಯಕೀಯ ತಂಡಕ್ಕೂ, ಆಸ್ಪತ್ರೆ ನಿರ್ವಹಣೆ ತಂಡಕ್ಕೂ, ಯಾದವ್ ಅವರು ಕೆಲಸ ಮಾಡುವ ಸಂಸ್ಥೆಯ ತಂಡಕ್ಕೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ ಮತ್ತು ರೋಗಿಯನ್ನು ಮನೆಗೆ ಹಿಂತಿರುಗಿಸಲು ಅವರೊಂದಿಗೆ ತವರೂರಿಗೆ ಹೋಗಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ಶಹಾಬುದ್ದೀನ್ ಅವರಿಗೂ ಕೃತಜ್ಞತೆ ಸಲ್ಲಿಸುತ್ತಾ ಯಾದವ್ ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತದೆ.
Read more
[wpas_products keywords=”deal of the day sale today offer all”]