ಮಳೆ ಹನಿಯೇ ಸಾಂಗ್ ರಿಲೀಸ್
‘ಶಿವ 143’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ಮಳೆ ಹನಿಯೇ..’ ರಿಲೀಸ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಈ ಸಾಂಗ್‌ನಲ್ಲಿ ಧೀರೇನ್ ಮತ್ತು ಮಾನ್ವಿತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಮಾನ್ವಿತಾ ಲಿಪ್‌ಲಾಕ್ ಮಾಡಿದ್ದಾರೆ. ಈ ಹಿಂದೆ ಒಂದು ಈ ಹಾಡಿನ ಪೋಸ್ಟರ್ ಅನ್ನು ರಿಲೀಸ್ ಮಾಡಿದಾಗಲೇ, ಈ ಸಾಂಗ್ ಸಖತ್ ಬೋಲ್ಡ್ ಆಗಿರಲಿದೆ ಎಂಬ ಅಂದಾಜು ಸಿನಿಪ್ರಿಯರಲ್ಲಿ ಹುಟ್ಟಿಕೊಂಡಿತ್ತು, ಅದೀಗ ನಿಜವಾಗಿದೆ. ಆಕ್ಷನ್ ಜೊತೆಗೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಕೂಡ ಈ ಸಿನಿಮಾದಲ್ಲಿದೆ ಎಂಬುದಕ್ಕೆ ಈ ಹಾಡು ಸಾಕ್ಷಿಯಾಗಿದೆ. ಇನ್ನು, ಈ ‘ಮಳೆ ಹನಿಯೇ..’ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕ್ರಾಂತಿ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ನಿಹಾಲ್ ಮತ್ತು ಪೃಥ್ವಿ ಭಟ್ ಹಾಡಿದ್ದಾರೆ.
ಬದಲಾದ ದಾರಿ ತಪ್ಪಿದ ಮಗ!
ಅಂದಹಾಗೆ, ‘ಶಿವ 143’ ಚಿತ್ರಕ್ಕೆ ಆರಂಭದಲ್ಲಿ ‘ದಾರಿ ತಪ್ಪಿದ ಮಗ’ ಎಂದು ಶೀರ್ಷಿಕೆ ಇಡಲಾಗಿತ್ತು. ಅದು ಡಾ. ರಾಜ್‌ಕುಮಾರ್ ಅವರ ಮೆಗಾ ಹಿಟ್ ಸಿನಿಮಾದ ಹೆಸರಾಗಿತ್ತು. ಅಣ್ಣಾವ್ರ ಮೊಮ್ಮಗನ ಸಿನಿಮಾಕ್ಕೆ ಅದೇ ಶೀರ್ಷಿಕೆ ಬಳಕೆ ಮಾಡುವ ಉದ್ದೇಶ ಚಿತ್ರತಂಡಕ್ಕಿತ್ತು. ಆದರೆ, ಕೊನೇ ಗಳಿಗೆಯಲ್ಲಿ ‘ದಾರಿ ತಪ್ಪಿದ ಮಗ’ ಬದಲು, ‘ಶಿವ 143’ ಎಂದು ಟೈಟಲ್ ಚೇಂಜ್ ಮಾಡಿತ್ತು ಚಿತ್ರತಂಡ. ಅಂದಹಾಗೆ, ಈ ಸಿನಿಮಾಗೆ ಅನಿಲ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ಬಂಡವಾಳ ಹೂಡಿದ್ದಾರೆ.
‘ಟಗರು ಪುಟ್ಟಿ’ ಮಾನ್ವಿತಾ ಕಾಮತ್ ಜನ್ಮದಿನ ಸಂಭ್ರಮದಲ್ಲೇ ಕೇಳಿಬಂತು ಸಿಹಿ ಸುದ್ದಿ!
ನಟಿ ಮಾನ್ವಿತಾ ಇದುವರೆಗೂ ಒಂದಕ್ಕಿಂತ ಒಂದು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು. ‘ಕೆಂಡಸಂಪಿಗೆ’, ‘ಟಗರು’, ‘ಕನಕ’, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಆದರೆ, ಈ ಬಾರಿ ‘ಶಿವ 143’ ಮೂಲಕ ಸಖತ್ ಬೋಲ್ಡ್ ಆಗಿರುವ ಪಾತ್ರ ಮಾಡಿದ್ದಾರೆ ಎನ್ನಬಹುದು. ಧೀರೇನ್ ಮತ್ತು ಮಾನ್ವಿತಾ ಜೊತೆಗೆ ಚರಣ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅವಿನಾಶ್ ಮುಂತಾದವರು ನಟಿಸಿದ್ದಾರೆ.
ಮಾನ್ವಿತಾ ಹರೀಶ್ ಬಿಟ್ಟು ದಾಸನ ಜೊತೆ ಕೆಮಿಸ್ಟ್ರಿ ವರ್ಕೌಟ್ ಮಾಡಿಕೊಂಡ ನಟ ಪ್ರಭು
Read more
[wpas_products keywords=”deal of the day sale today offer all”]