Karnataka news paper

ಅನ್ಯೋನ್ಯವಾಗಿ ಬದುಕಿ, ಮಕ್ಕಳನ್ನು ಮಾಡಿಕೊಳ್ತೀವಿ ಎಂದಿದ್ದ ರಾಖಿ ಸಾವಂತ್ ‘ವ್ಯಾಲಂಟೈನ್ಸ್‌ ಡೇ’ಗೆ ಕಹಿಸುದ್ದಿ ಕೊಟ್ರು


ಬಿಗ್ ಬಾಸ್ ಸ್ಪರ್ಧಿ, ನಟಿ ರಾಖಿ ಸಾವಂತ್ ಅವರು ಪತಿಯಿಂದ ದೂರ ಆಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ‘ಪ್ರೇಮಿಗಳ ದಿನ’ಕ್ಕೂ ಒಂದು ದಿನ ಮೊದಲು ಈ ವಿಷಯವನ್ನು ರಾಖಿ ಹೇಳಿದ್ದಾರೆ. ಯಾಕೆ? ಏನಾಯ್ತು?

“ಬಿಗ್ ಬಾಸ್ ಶೋ ಮುಗಿದ ನಂತರ ಸಾಕಷ್ಟು ಘಟನೆಗಳು ನಡೆದವು. ನನ್ನ ಕಂಟ್ರೋಲ್‌ಗೂ ಮೀರಿದ ಕೆಲ ವಿಚಾರಗಳ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಿಕೊಳ್ಳೋಣ ಅಂತ ತುಂಬ ಪ್ರಯತ್ನಪಟ್ಟೆವು. ಆದರೆ ಸಾಧ್ಯವಾಗಲಿಲ್ಲ. ನಾವಿಬ್ಬರೂ ಬೇರೆ ಬೇರೆಯಾಗಿ ಜೀವನ ನಡೆಸುವುದು ಒಳ್ಳೆಯದು ಅಂತ ಅನಿಸಿದೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ವ್ಯಾಲಂಟೈನ್ಸ್ ಡೇಗೂ ಒಂದು ದಿನ ಮುಂಚೆ ಹೀಗೆ ಆಗಿದ್ದು ಬೇಸರ ಮೂಡಿಸಿದೆ. ಆದರೆ ಈ ನಿರ್ಧಾರ ತೆಗೆದುಕೊಳ್ಳಲೇಬೇಕಿತ್ತು. ರಿತೇಶ್‌ಗೆ ಒಳ್ಳೆಯದಾಗಲಿ ಎಂದು ಬಯಸುವೆ. ನಾನು ನನ್ನ ಈ ಹಂತದಲ್ಲಿ ವೃತ್ತಿ, ನನ್ನ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ಆರೋಗ್ಯವಾಗಿ ಖುಷಿಯಿಂದ ಇರಬೇಕು. ನನ್ನನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು” ಎಂದು ರಾಖಿ ಸಾವಂತ್ ಹೇಳಿದ್ದಾರೆ.

ನಾನು ಮದುವೆ ಆಗಿಲ್ಲ ಅನ್ನೋದು ಸುಳ್ಳು, ಪತಿ ಜೊತೆಗೆ ಬಿಗ್ ಬಾಸ್‌ಗೆ ಹೋಗುವೆ: ರಾಖಿ ಸಾವಂತ್

ರಾಖಿ ಸಾವಂತ್, ರಿತೇಶ್ ಮದುವೆ ಕಾನೂನುಬದ್ಧ ಅಲ್ಲ
ವರ್ಷಗಳ ಹಿಂದೆ ನನಗೆ ಮದುವೆಯಾಗಿದೆ ಎಂದು ಹೇಳಿಕೊಂಡು ಬಂದಿದ್ದ ರಾಖಿ ಸಾವಂತ್ ಪತಿಯ ಫೋಟೋವನ್ನು ರಿವೀಲ್ ಮಾಡಿರಲೇ ಇಲ್ಲ. ಕೊನೆಗೂ ಬಿಗ್ ಬಾಸ್ 15 ಶೋನಲ್ಲಿ ಪತಿಯ ಜೊತೆ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟರು. ದೊಡ್ಮನೆಯಲ್ಲಿಯೂ ರಿತೇಶ್ ಹಾಗೂ ರಾಖಿ ನಡುವೆ ಕೆಲ ಭಿನ್ನಾಭಿಪ್ರಾಯಗಳು, ವಾದ ವಿವಾದ ನಡೆಯಿತು. ರಾಖಿ ಜೊತೆ ರಿತೇಶ್ ನಡೆದುಕೊಂಡ ಪರಿ ಬಗ್ಗೆ ಸಲ್ಮಾನ್ ಖಾನ್ ಕೂಡ ಕೋಪ ಹೊರಹಾಕಿದರು. ನನ್ನ ಹಾಗೂ ರಿತೇಶ್ ಮದುವೆ ಕಾನೂನುಬದ್ಧ ಅಲ್ಲ ಎಂದು ರಾಖಿ ಹೇಳಿಕೊಂಡು ಅತ್ತಿದ್ದರು. ಈ ನಡುವೆ ರಿತೇಶ್ ಮೊದಲ ಪತ್ನಿ ಸ್ನಿಗ್ಧ ಪ್ರಿಯಾ ಕೂಡ ರಿತೇಶ್ ನನಗೆ ವಿಚ್ಛೇದನ ನೀಡಿಲ್ಲ ಎಂದು ಆರೋಪ ಮಾಡಿದ್ದರು.

ನನ್ನೊಬ್ಬಳನ್ನೇ ಬಿಟ್ಟು ದೇಶ ಬಿಟ್ಟು ಹೋಗಲ್ಲ ಅಂತ ಆಣೆ ಮಾಡು: ಪತಿ ಹತ್ತಿರ ರಾಖಿ ಸಾವಂತ್ ಮನವಿ

ರಾಖಿ ಸಾವಂತ್ ಅಂದು ಹೇಳಿದ್ದೇನು?
ಸ್ನಿಗ್ಧ ಪ್ರಿಯಾ ಆರೋಪಗಳಿಗೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ರಾಖಿ ಸಾವಂತ್, “ನನ್ನ ಪತಿ ರಿತೇಶ್ ತುಂಬ ಒಳ್ಳೆಯವರು. ನನ್ನ ಗಂಡನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ನಾನು ಸಾಕಷ್ಟು ಸಮಯದಿಂದ ಅವರ ಜೊತೆಗಿರೋದರಿಂದ ನಾನು ಅವರನ್ನು ಬಲ್ಲೆ. ಬೆಲ್ಜಿಯಂನಿಂದ ಇಲ್ಲಿಗೆ ಬಂದು ಬಿಗ್ ಬಾಸ್ 15ರಲ್ಲಿ ಭಾಗವಹಿಸಿದರು. ಅವರು ನನಗೆ ತುಂಬ ಪ್ರೀತಿ ನೀಡಿದ್ದಾರೆ. ಅಧಿಕೃತವಾಗಿ ನಮ್ಮ ಮದುವೆ ಆಗಿಲ್ಲ. ಸ್ನಿಗ್ಧ ಪ್ರಿಯಾ ಆರೋಪಗಳನ್ನು ನಾನು ಕೇಳಲು ರೆಡಿಯಿಲ್ಲ. ರಿತೇಶ್ ಒಳ್ಳೆಯವರು ಅಂತ ನನಗೆ ಗೊತ್ತು, ಒಳ್ಳೆಯ ಗಂಡ ಅಂತ ಅವರು ಸಾಬೀತು ಮಾಡ್ತಾರೆ. ನಾವಿಬ್ಬರೂ ಅನ್ಯೋನ್ಯ ದಂಪತಿಯಾಗಿ ಮಕ್ಕಳನ್ನು ಮಾಡಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.



Read more

[wpas_products keywords=”deal of the day party wear dress for women stylish indian”]