ರಷ್ಯಾವು ಉಕ್ರೇನ್ ಅನ್ನು ಯಾವುದೇ ಸಮಯದಲ್ಲಿ ಆಕ್ರಮಿಸಬಹುದು ಎಂಬ ಎಚ್ಚರಿಕೆಗಳಿವೆ. ಇದರಿಂದ ತೈಲ ಬೆಲೆಗಳು ಕಳೆದ ಏಳು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೇರಿದೆ. ಈ ಪರಿಣಾಮ ಏಷ್ಯಾದ ಷೇರುಗಳು ಕುಸಿತಕ್ಕೆ ಒಳಗಾಗಿವೆ. ರಷ್ಯಾ ದಾಳಿ ಮಾಡಲು ಆಶ್ಚರ್ಯಕರ ನೆಪವನ್ನು ಸೃಷ್ಟಿಸಬಹುದು ಎಂದು ಹೇಳಿರುವ ಅಮೆರಿಕ NATO ಪ್ರದೇಶದ ಪ್ರತಿ ಇಂಚು ಭೂಭಾಗವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಪುನರುಚ್ಚರಿಸಿದೆ.
ಅಮೆರಿಕದಲ್ಲಿ ಹಣದುಬ್ಬರವು ಆತಂಕಕಾರಿಯಾಗಿ ಹೆಚ್ಚಿನ ಮಟ್ಟದಲ್ಲಿದೆ. ಇದರ ಜತೆಗೆ ಅಮೆರಿಕದ ಫೆಡರಲ್ ರಿಸರ್ವ್ ಮಾರ್ಚ್‌ನಲ್ಲಿ ಬಡ್ಡಿ ದರಗಳನ್ನು ಹೆಚ್ಚಿಸಬಹುದು ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ. ಈ ಎಲ್ಲದರ ಪರಿಣಾಮ ಷೇರುಪೇಟೆ ಕುಸಿತಕ್ಕೆ ಕಾರಣವಾಗಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ ಶೇ. 2.34 ರಷ್ಟು ಕುಸಿದಿದ್ದು, ಸ್ಮಾಲ್ ಕ್ಯಾಪ್ ಷೇರುಗಳು ಶೇ. 2.94 ರಷ್ಟು ಇಳಿಕೆ ಕಂಡಿವೆ. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಋಣಾತ್ಮಕ ನೋಟ್‌ನಲ್ಲಿ ವಹಿವಾಟು ನಡೆಸುತ್ತಿವೆ.
ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯ ಟಾಪ್ ಲೂಸರ್ ಆಗಿದ್ದು, ಈ ಷೇರುಗಳು ಶೇ. 6.08 ರಷ್ಟು ಕುಸಿದಿದು ₹630.60ಕ್ಕೆ ತಲುಪಿದೆ. ಟಾಟಾ ಸ್ಟೀಲ್, ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಟಾಟಾ ಮೋಟಾರ್ಸ್ ಕೂಡ ಹಿಂದುಳಿದಿವೆ. ಇದಕ್ಕೆ ವಿರುದ್ಧವಾಗಿ, ಟಿಸಿಎಸ್ ಮತ್ತು ಡಿವಿಸ್ ಲ್ಯಾಬ್ ಷೇರುಗಳು ಲಾಭ ಗಳಿಸಿದವು.
ಬಿಎಸ್‌ಇಯಲ್ಲಿ 447 ಷೇರುಗಳು ಮುನ್ನಡೆ ಸಾಧಿಸಿದ್ದರೆ, 2,593 ಷೇರುಗಳು ಕುಸಿತ ಕಂಡಿವೆ. ಹೀಗಾಗಿ ಒಟ್ಟಾರೆ ಮಾರುಕಟ್ಟೆ ವ್ಯಾಪ್ತಿ ದುರ್ಬಲವಾಗಿತ್ತು. 30-ಷೇರುಗಳ ಬಿಎಸ್‌ಇ ಪ್ಲಾಟ್‌ಫಾರ್ಮ್‌ನಲ್ಲಿ, ಎಸ್‌ಬಿಐ, ಟಾಟಾ ಸ್ಟೀಲ್, ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ತಮ್ಮ ಷೇರುಗಳು ಶೇ. 4.23 ರಷ್ಟು ಕುಸಿತದೊಂದಿಗೆ ಹೆಚ್ಚು ನಷ್ಟವನ್ನು ಅನುಭವಿಸಿದವು.
ಶುಕ್ರವಾರದಂದು ಸೆನ್ಸೆಕ್ಸ್ 773 ಪಾಯಿಂಟ್ ಅಥವಾ ಶೇ. 1.31 ರಷ್ಟು ಕುಸಿದು 58,153 ಕ್ಕೆ ತಲುಪಿತ್ತು. ನಿಫ್ಟಿ 231 ಪಾಯಿಂಟ್ ಅಥವಾ ಶೇ.1.31 ಕಡಿಮೆಯಾಗಿ 17,375 ಕ್ಕೆ ಸ್ಥಿರವಾಗಿತ್ತು. ಸೋಮವಾರ ಕೂಡ ಷೇರುಪೇಟೆ ಕುಸಿತ ಮುಂದುವರಿದಿದೆ.
ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.
Read more
[wpas_products keywords=”deal of the day sale today offer all”]